ಫಹಾದ್ ಫಾಸಿಲ್​ಗೆ ಬರ್ತ್​​ಡೇ ವಿಶ್ ಮಾಡಿದ ಹೊಂಬಾಳೆ ಫಿಲ್ಮ್ಸ್​​; ಪವನ್​ ಕುಮಾರ್ ನಿರ್ದೇಶನ?

ಫಹಾದ್ ಫಾಸಿಲ್ ಅವರು ಮಲಯಾಳಂನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ತಮಿಳು ಮೊದಲಾದ ಭಾಷೆಗಳಲ್ಲಿ ನಟಿಸಿ ಅವರು ಭೇಷ್ ಎನಿಸಿಕೊಂಡಿದ್ದಾರೆ. ಈಗ ಅವರು ಇದೇ ಮೊದಲ ಬಾರಿಗೆ ಕನ್ನಡಕ್ಕೆ ಕಾಲಿಡುತ್ತಿದ್ದಾರೆ.

ಫಹಾದ್ ಫಾಸಿಲ್​ಗೆ ಬರ್ತ್​​ಡೇ ವಿಶ್ ಮಾಡಿದ ಹೊಂಬಾಳೆ ಫಿಲ್ಮ್ಸ್​​; ಪವನ್​ ಕುಮಾರ್ ನಿರ್ದೇಶನ?
ಪವನ್-ಫಹಾದ್
TV9kannada Web Team

| Edited By: Rajesh Duggumane

Aug 08, 2022 | 6:02 PM

ವಿಜಯ್ ಕಿರಗಂದೂರು (Vijay Kirgandur) ಅವರ ಒಡೆತನದ ಹೊಂಬಾಳೆ ಫಿಲ್ಮ್ಸ್​ ಖ್ಯಾತಿ ವಿಶ್ವಮಟ್ಟದಲ್ಲಿ ಹಬ್ಬಿದೆ. ‘ಕೆಜಿಎಫ್ 2’ ಬಳಿಕ ಪರಭಾಷೆಗಳ ಸ್ಟಾರ್ಸ್​​ ಜತೆ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಕೈ ಜೋಡಿಸುತ್ತಿದ್ದಾರೆ. ಇದು ಕನ್ನಡದ ಪಾಲಿಗೆ ನಿಜಕ್ಕೂ ಹೆಮ್ಮೆ. ಈಗ ಈ ವಿಚಾರದಲ್ಲಿ ಮತ್ತೊಂದು ಅಪ್​ಡೇಟ್ ಸಿಕ್ಕಿದೆ. ಮಲಯಾಳಂ ನಟ ಫಹಾದ್ ಫಾಸಿಲ್ (Fahadh Faasil) ಜತೆ ವಿಜಯ್ ಕಿರಗಂದೂರು ಅವರು ಸಿನಿಮಾ ಮಾಡುತ್ತಿದ್ದಾರೆ. ನಟನ ಬರ್ತ್​ಡೇ ದಿನವೇ ಈ ಬಗ್ಗೆ ಘೋಷಣೆ ಆಗಿದೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಫಹಾದ್ ಫಾಸಿಲ್ ಅವರು ಮಲಯಾಳಂನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ತಮಿಳು ಮೊದಲಾದ ಭಾಷೆಗಳಲ್ಲಿ ನಟಿಸಿ ಅವರು ಭೇಷ್ ಎನಿಸಿಕೊಂಡಿದ್ದಾರೆ. ಈಗ ಅವರು ಇದೇ ಮೊದಲ ಬಾರಿಗೆ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್​ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ. ಯಾವ ಚಿತ್ರ, ಅವರ ಪಾತ್ರ ಏನು ಎಂಬುದು ಇನ್ನಷ್ಟೇ ಅಧಿಕೃತವಾಗಬೇಕಿದೆ. ಹೀಗಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಣ್ಣ ಬಣ್ಣದ ಚರ್ಚೆಗಳು ಆಗುತ್ತಿವೆ.

ಮೂಲಗಳ ಪ್ರಕಾರ ‘ಲೂಸಿಯಾ’ ಪವನ್ ಕುಮಾರ್ ಅವರು ಫಹಾದ್ ಫಾಸಿಲ್ ಅವರ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಪವನ್ ಕುಮಾರ್ ನಿರ್ದೇಶನದ ಚಿತ್ರಗಳು ಎಂದರೆ ಒಂದಷ್ಟು ಹೊಸ ವಿಚಾರಗಳು, ಸಿನಿಮಾದಲ್ಲಿ ಹೊಸತನ ಇದ್ದೇ ಇರುತ್ತದೆ. ‘ಲೂಸಿಯಾ’, ‘ಯು-ಟರ್ನ್​’ ಚಿತ್ರಗಳೇ ಇದಕ್ಕೆ ಸಾಕ್ಷಿ. ಈಗ ಅವರು ಆ್ಯಕ್ಟನ್ ಕಟ್ ಹೇಳುತ್ತಿರುವ ಹೊಸ ಸಿನಿಮಾದಲ್ಲಿ ಫಹಾದ್ ನಟಿಸುತ್ತಿದ್ದಾರೆ ಎಂಬ ವದಂತಿ ಸಾಕಷ್ಟು ಕುತೂಹಲ ಸೃಷ್ಟಿ ಮಾಡಿದೆ.

ಇದನ್ನೂ ಓದಿ: ‘ಪುಷ್ಪ’ ಸಿನಿಮಾದಲ್ಲಿ ಫಹಾದ್ ಫಾಸಿಲ್​ ಲುಕ್​ ನೋಡಿ ಫಿದಾ ಆದ ಅಭಿಮಾನಿಗಳು

ಇದನ್ನೂ ಓದಿ

ಪವನ್ ಕುಮಾರ್ ಅವರು ಪುನೀತ್ ರಾಜ್​ಕುಮಾರ್ ನಟನೆಯ ‘ದ್ವಿತ್ವ’ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳಬೇಕಿತ್ತು. ಆದರೆ, ಸಿನಿಮಾ ಆರಂಭಕ್ಕೂ ಮೊದಲೇ ಪುನೀತ್ ನಿಧನ ಹೊಂದಿದರು. ‘ದ್ವಿತ್ವ’ ಚಿತ್ರದ ಕಥೆಗೆ ಪುನೀತ್ ಬದಲು ಫಹಾದ್ ಫಾಸಿಲ್ ಸೇರಿಕೊಂಡಿದ್ದಾರೆ ಎಂಬ ಬಗ್ಗೆಯೂ ಗುಸುಗುಸು ಹುಟ್ಟಿಕೊಂಡಿದೆ. ಈ ಬಗ್ಗೆ ಅನೇಕರಿಂದ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಇದು ‘ದ್ವಿತ್ವ’ ಚಿತ್ರದ ಕಥೆಯಾ  ಅಥವಾ ಈ ಕಥೆಯೇ ಬೇರೇಯಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada