Ashwini Puneeth Rajkumar: ಪುನೀತ್​ ರಾಜ್​ಕುಮಾರ್​ ಹಾಡಿದ ‘ಅಪರೂಪ’ದ ಸಾಂಗ್​ ರಿಲೀಸ್​ ಮಾಡಿದ ಪತ್ನಿ ಅಶ್ವಿನಿ

Puneeth Rajkumar Last Song: ‘ಅಪರೂಪ’ ಸಿನಿಮಾದ ‘ಯೂ ಆರ್​ ಮೈ ಕರೀನಾ..’ ಹಾಡಿಗೆ ಪುನೀತ್​ ರಾಜ್​ಕುಮಾರ್​ ಧ್ವನಿ ನೀಡಿದ್ದರು. ಆ ಗೀತೆಯನ್ನು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಬಿಡುಗಡೆ ಮಾಡಿದ್ದಾರೆ.

Ashwini Puneeth Rajkumar: ಪುನೀತ್​ ರಾಜ್​ಕುಮಾರ್​ ಹಾಡಿದ ‘ಅಪರೂಪ’ದ ಸಾಂಗ್​ ರಿಲೀಸ್​ ಮಾಡಿದ ಪತ್ನಿ ಅಶ್ವಿನಿ
ಪುನೀತ್​ ರಾಜ್​ಕುಮಾರ್
TV9kannada Web Team

| Edited By: Madan Kumar

Jul 15, 2022 | 1:53 PM

ನಟ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರು ಗಾಯಕನಾಗಿಯೂ ಜನಮನ ಗೆದ್ದಿದ್ದರು. ಅವರು ಹೃದಯಾಘಾತದಿಂದ ಕೊನೆಯುಸಿರು ಎಳೆದಿರುವುದು ನೋವಿನ ಸಂಗತಿ. ನಿಧನರಾಗುವುದಕ್ಕೂ ಮುನ್ನ ಅವರು ಕೆಲವು ಗೀತೆಗಳಿಗೆ ಧ್ವನಿ ನೀಡಿದ್ದರು. ಆ ಪೈಕಿ ‘ಅಪರೂಪ’ ಸಿನಿಮಾದ ಹೊಸ ಸಾಂಗ್​ ಬಿಡುಗಡೆ ಆಗಿದೆ. ಇದು ಪುನೀತ್​ ರಾಜ್​ಕುಮಾರ್​ ಹಾಡಿದ ಕೊನೆಯ ಗೀತೆ ಎನ್ನಲಾಗಿದೆ. ‘ಯೂ ಆರ್​ ಮೈ ಕರೀನಾ..’ ಎಂದು ಅವರು ಹಾಡಿರುವ ಈ ಸಾಂಗ್​ ಅನ್ನು ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾ​ರ್ (Ashwini Puneeth Rajkumar)​ ಅವರು ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಚಿತ್ರತಂಡಕ್ಕೆ ಅವರು ಶುಭ ಕೋರಿದ್ದಾರೆ. ‘ಅರಸು’ ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್​ ಬಾಬು ಅವರು ‘ಅಪರೂಪ’ (Aparoopa Movie) ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸುಘೋಷ್​, ಹೃತಿಕಾ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ.

ಅನೇಕ ಕಾರಣಗಳಿಂದ ‘ಅಪರೂಪ’ ಸಿನಿಮಾ ಗಮನ ಸೆಳೆಯುತ್ತಿದೆ. ಮೆರವಣಿಗೆ, ಚಿರು, ಕ್ರೇಜಿ ಬಾಯ್​, ಅರಸು ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಮಹೇಶ್​ ಬಾಬು ಅವರು ಈಗ ‘ಅಪರೂಪ’ ಸಿನಿಮಾ ಮೂಲಕ ಹೊಸ ಕಥೆಯನ್ನು ಪ್ರೇಕ್ಷಕರ ಮುಂದೆ ಇಡಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕಾಗಿ ಪುನೀತ್​ ರಾಜ್​ಕುಮಾರ್​ ಹಾಡಿರುವ ‘ಯೂ ಆರ್​ ಮೈ ಕರೀನಾ..’ ಸಾಂಗ್​ ಕೇಳಿ ಅಭಿಮಾನಿಗಳು ಖುಷಿಪಡುತ್ತಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅವರಿಂದ ಸಾಂಗ್​ ಹಾಡಿಸಬೇಕು ಎಂಬ ಆಸೆ ಬಹುತೇಕ ಚಿತ್ರತಂಡಗಳಿಗೆ ಇರುತ್ತಿತ್ತು. ಆದರೆ ಅವಕಾಶ ಒದಗಿಬಂದಿದ್ದು ಕೆಲವು ಸಿನಿಮಾಗಳಿಗೆ ಮಾತ್ರ. ಆ ಪೈಕಿ ‘ಅಪರೂಪ’ ಟೀಮ್​ ಕೂಡ ಲಕ್ಕಿ ಎನ್ನಬೇಕು. ತಮ್ಮ ಸಿನಿಮಾದಲ್ಲಿ ಅಪ್ಪು ಧ್ವನಿ ಇದೆ ಎಂಬುದು ಈ ಚಿತ್ರತಂಡದ ಪಾಲಿಗೆ ಎಮೋಷನಲ್​ ವಿಚಾರ. ಸದ್ಯ ಬಿಡುಗಡೆ ಆಗಿರುವ ಈ ಹಾಡಿಗೆ ಪುನೀತ್​ ಜೊತೆ ಗಾಯಕಿ ಸಂಗೀತಾ ರವೀಂದ್ರನಾಥ್​ ಕೂಡ ಧ್ವನಿ ನೀಡಿದ್ದಾರೆ.

‘ಸುಗ್ಗಿ’ ಸಿನಿಮಾಸ್​ ಬ್ಯಾನರ್​ ಮೂಲಕ ‘ಅಪರೂಪ’ ಚಿತ್ರ ಮೂಡಿಬಂದಿದೆ. ಪ್ರಜ್ವಲ್​ ಪೈ ಸಂಗೀತ ನಿರ್ದೇಶನ ಮಾಡಿದ್ದಾರೆ. ಡಾ. ವಿ. ನಾಗೇಂದ್ರ ಪ್ರಸಾದ್​ ಲೇಖನಿಯಲ್ಲಿ ‘ಯೂ ಆರ್​ ಮೈ ಕರೀನಾ..’ ಹಾಡು ಮೂಡಿಬಂದಿದೆ. ಭಜರಂಗಿ ಮೋಹನ್​ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಗೀತೆಯಲ್ಲಿ ಸುಘೋಷ್​ ಮತ್ತು ಹೃತಿಕಾ ಭರ್ಜರಿಯಾಗಿ ಸ್ಟೆಪ್​ ಹಾಕಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada