ನಾನ್​-ವೆಜ್​​ ವಿಚಾರದಲ್ಲಿ ಅನು ಪ್ರಭಾಕರ್​ಗೆ ರೇಗಿಸಿದ್ದ ಪುನೀತ್​ ರಾಜ್​ಕುಮಾರ್​; ನೆನಪಿನ ಪುಟ ತೆರೆದ ನಟಿ

Puneeth Rajkumar: ಕನ್ನಡ ಚಿತ್ರರಂಗದಲ್ಲಿ ಪುನೀತ್​ ರಾಜ್​ಕುಮಾರ್​ ಬಿಟ್ಟು ಹೋದ ನೆನಪುಗಳು ಅಪಾರ. ಅವರ ಜತೆ ಕಳೆದ ದಿನಗಳನ್ನು ಅನು ಪ್ರಭಾಕರ್​ ಮೆಲುಕು ಹಾಕಿದ್ದಾರೆ.

TV9kannada Web Team

| Edited By: Madan Kumar

May 21, 2022 | 9:35 AM

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಸ್ನೇಹ ಜೀವಿ ಆಗಿದ್ದರು. ಅವರ ಜೊತೆ ಕೆಲಸ ಮಾಡಿದ ಎಲ್ಲರೂ ಅವರ ಆ ಗುಣವನ್ನು ಇಷ್ಟಪಡುತ್ತಿದ್ದರು. ‘ಜೇಮ್ಸ್​’ (James Movie) ಸಿನಿಮಾದ ಶೂಟಿಂಗ್​ ಅನುಭವವನ್ನು ನಟಿ ಅನು ಪ್ರಭಾಕರ್​ ಅವರು ನೆನಪು ಮಾಡಿಕೊಂಡಿದ್ದಾರೆ. ‘ಸಾರಾ ವಜ್ರ’ ಸಿನಿಮಾ ಸಲುವಾಗಿ  ಟಿವಿ9ಗೆ ನೀಡಿದ ಸಂದರ್ಶನದ ವೇಳೆ ಅನು ಪ್ರಭಾಕರ್​ (Anu Prabhakar) ಅವರು ಅನೇಕ ವಿಚಾರಗಳ ಕುರಿತು ಮಾತನಾಡಿದ್ದಾರೆ. ‘ನಾನು ಮೊದಲಿನಿಂದಲೂ ಸಸ್ಯಹಾರಿ. ಅದಕ್ಕಾಗಿ ಪುನೀತ್​ ರೇಗಿಸುತ್ತಿದ್ದರು. ನಾನ್​-ವೆಜ್​ ತಿನ್ನದೇ ಇರಲು ಹೇಗೆ ಸಾಧ್ಯ ಅಂತ ಕೇಳುತ್ತಿದ್ದರು. ನಾನು ತುಂಬ ಚೆನ್ನಾಗಿ ನಾನ್​-ವೆಜ್​ ಅಡುಗೆ ಮಾಡುತ್ತೇನೆ. ನಿಮಗಾಗಿ ಮಾಡಿಕೊಡುತ್ತೇನೆ ಅಂತ ನಾನು ಹೇಳ್ತಿದ್ದೆ’ ಎಂದು ಆ ದಿನಗಳ ನೆನಪಿನ ಪುಟವನ್ನು ತೆರೆದಿದ್ದಾರೆ ಅನು ಪ್ರಭಾಕರ್​. ಇಂದು ಪುನೀತ್​ ರಾಜ್​ಕುಮಾರ್​ ಅವರು ನಮ್ಮೊಂದಿಗೆ ಇಲ್ಲ ಎಂಬುದು ಬೇಸರದ ಸಂಗತಿ. ಆಪ್ತರಿಗೆ, ಅಭಿಮಾನಿಗಳಿಗೆ ಅವರ ನೆನಪು ಪ್ರತಿ ದಿನವೂ ಕಾಡುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Follow us on

Click on your DTH Provider to Add TV9 Kannada