ಪಾದಮಟ್ಟದ ನೀರಿನಲ್ಲಿ 10-ಅಡಿ ದೂರ ಕ್ರಮಿಸಲು ಅಸ್ಸಾಂ ಶಾಸಕನಿಗೆ ಪಿಗ್ಗಿಬ್ಯಾಕ್ ರೈಡ್ ಬೇಕಾಯಿತು!

ಇಲ್ಲಿಗೆ ಆಗಮಿಸಿದ ಬಳಿಕ ಅವರಿಗೆ ಪಾದಮಟ್ಟದ ನೀರು ಉಕ್ಕಿ ಹರಿಯುವ ಪ್ರವಾಹದಂತೆ ಕಂಡಿದೆ! ಹಾಗಾಗೇ, ಅವರು ಎಸ್ ಡಿ ಆರ್ ಎಫ್ ಸಿಬ್ಬಂದಿಗೆ ನನ್ನನ್ನು ಬೆನ್ನ ಮೇಲೆ ಹೊತ್ತುಕೊಂಡು ಆ ಭಾಗ ತಲುಪಿಸು ಅಂತ ಆಜ್ಞಾಪಿಸಿದ್ದಾರೆ.

TV9kannada Web Team

| Edited By: Arun Belly

May 20, 2022 | 11:42 PM

Assam:  ಇದು ದುರಹಂಕಾರ ಮತ್ತು ಅನಾಗರಿಕತೆಯ ಪರಮಾವಧಿ. ಶಾಸಕರೊಬ್ಬರ (legislator) ದರ್ಪ ಮತ್ತು ಅಹಂಕಾರಕ್ಕೆ ಇಡೀ ದೇಶವೇ ಉಗಿಯುತ್ತಿದೆ. ಅವರ ಕೈಕಾಲು ಮುರಿದಿಲ್ಲ ಮತ್ತು ಯಾವ ಕಾಯಿಲೆಯೂ ಅವರನ್ನು ಬಾಧಿಸುತ್ತಿಲ್ಲ. ಕೇವಲ ಪಾದ ಮುಳುಗುವಷ್ಟು ನೀರಿನಲ್ಲಿ ಇಳಿದು 10-20 ಅಡಿ ನಡೆಯುವುದೂ ಅವರಿಗೆ ಸಾಧ್ಯವಿಲ್ಲ. ಅವರಿಗೆ 20 ಅಡಿಗಳಿಗಿಂತಲೂ ಕಡಿಮೆ ದೂರದಲ್ಲಿರುವ ಬೋಟ್ ವರೆಗೆ (boat) ಹೋಗಬೇಕಾಗಿದೆ. ಅದಕ್ಕಾಗಿ ಅವರು ಪಿಗ್ಗಿಬ್ಯಾಕ್ ರೈಡ್ (piggyback ride), ಅಂದರೆ ಮತ್ತೊಬ್ಬ ವ್ಯಕ್ತಿಯ ಬೆನ್ನಮೇಲಿನ ಸವಾರಿ. ಅಂದಹಾಗೆ, ಈ ಮಹಾನುಭಾವರ ಹೆಸರು ಸಿಬು ಮಿಸ್ರಾ (Sibu Misra) ಮತ್ತು ಇವರು ಅಸ್ಸಾಂನಲ್ಲಿ ಬಿಜೆಪಿ ಶಾಸಕರಾಗಿದ್ದಾರೆ.

ಅವರನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ಬೆನ್ನ ಮೇಲೆ ಹೊತ್ತೊಯ್ಯುತ್ತಿರುವವರು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ನಿಧಿಯ ನೆರೆ ರಕ್ಷಣಾ ಸಿಬ್ಬಂದಿ. ಅಸ್ಸಾಂನಲ್ಲಿ ಎಡೆಬಿಡದೆ ಸುರಿಯುತ್ತಿರುವುದರಿಂದ ರಾಜ್ಯದ ಅನೇಕ ಭಾಗಗಳಲ್ಲಿ ಪ್ರವಾಹ ತಲೆದೋರಿದೆ. ಶಾಸಕ ಮಿಸ್ರಾ ಪರಿಸ್ಥಿತಿಯನ್ನು ಪರಿಶೀಲಿಸಲು ಹೊಜಾಯಿ ಜಿಲ್ಲೆಗೆ ಬಂದಿದ್ದರು.

ಇಲ್ಲಿಗೆ ಆಗಮಿಸಿದ ಬಳಿಕ ಅವರಿಗೆ ಪಾದಮಟ್ಟದ ನೀರು ಉಕ್ಕಿ ಹರಿಯುವ ಪ್ರವಾಹದಂತೆ ಕಂಡಿದೆ! ಹಾಗಾಗೇ, ಅವರು ಎಸ್ ಡಿ ಆರ್ ಎಫ್ ಸಿಬ್ಬಂದಿಗೆ ನನ್ನನ್ನು ಬೆನ್ನ ಮೇಲೆ ಹೊತ್ತುಕೊಂಡು ಆ ಭಾಗ ತಲುಪಿಸು ಅಂತ ಆಜ್ಞಾಪಿಸಿದ್ದಾರೆ. ಪಾಪದ ಸಿಬ್ಬಂದಿ ಸಾಹೇಬರ ಅದೇಶವನ್ನು ಪಾಲಿಸಿದರೆ ಅವರ ಸಹೋದ್ಯೋಗಿಗಳು ಅಸಹಾಯಕರಾಗಿ ಈ ದೃಶ್ಯವನ್ನು ವೀಕ್ಷಿಸುತ್ತಿದ್ದಾರೆ.

ಅಸ್ಸಾಂ 27 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ ಮತ್ತು ಆರೂವರೆ ಲಕ್ಷಕ್ಕಿಂತ ಹೆಚ್ಚು ಜನ ತೊಂದರೆಗೆ ಸಿಕ್ಕಿದ್ದಾರೆ. ಲಕ್ಷಾಂತರ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ನೆರೆಯಿಂದಾಗಿ ಇದುವರೆ 9 ಜನ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ:    Rain Updates: ಅಸ್ಸಾಂನಲ್ಲಿ ಭಾರೀ ಮಳೆಯಿಂದ 8 ಜನ ಸಾವು; ದಕ್ಷಿಣ ಭಾರತದಲ್ಲಿ ರೆಡ್ ಅಲರ್ಟ್​ ಘೋಷಣೆ

Follow us on

Click on your DTH Provider to Add TV9 Kannada