ಪುನೀತ್​ ರಾಜ್​ಕುಮಾರ್​ ಫೋಟೋ ಹಿಡಿದು ಕೆಂಡ ಹಾಯ್ದ ಅಭಿಮಾನಿ; ಎಲ್ಲೆಲ್ಲೂ ಅಪ್ಪು ಸ್ಮರಣೆ

ಅಭಿಮಾನಿಗಳ ಎದೆಯಲ್ಲಿ ಅಪ್ಪು ನೆನಪು ಅಮರ. ಪುನೀತ್​ ರಾಜ್​ಕುಮಾರ್​ ಮೇಲೆ ಜನರು ಇಟ್ಟಿರುವ ಅಭಿಮಾನ ಶಾಶ್ವತ.

TV9kannada Web Team

| Edited By: Madan Kumar

Apr 04, 2022 | 10:01 AM

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಅನೇಕರು ದೇವರಂತೆ ಕಾಣುತ್ತಾರೆ. ಅಪ್ಪು ಮಾಡಿದ ಸಾಮಾಜಿಕ ಕೆಲಸಗಳು ಎಲ್ಲರಿಗೂ ಮಾದರಿ ಆಗುವಂಥದ್ದು. ಪುನೀತ್​ ಮೇಲಿನ ತಮ್ಮ ಅಭಿಮಾನವನ್ನು ಜನರು ವಿವಿಧ ರೀತಿಯಲ್ಲಿ ತೋರಿಸುತ್ತಿದ್ದಾರೆ. ಅನೇಕ ಜಾತ್ರೆ, ಹಬ್ಬ, ಉತ್ಸವಗಳಲ್ಲಿ ಅಪ್ಪು ಫೋಟೋ ರಾರಾಜಿಸುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ನಡೆದ ವೀರಭದ್ರೇಶ್ವರ ಜಾತ್ರೆಯಲ್ಲಿ ಅಭಿಮಾನಿಯೊಬ್ಬರು ಅಪ್ಪು ಫೋಟೋ (Puneeth Rajkumar Photo) ಹಿಡಿದು ಕೆಂಡ ಹಾಯ್ದಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಈ ರೀತಿ ಘಟನೆಗಳು ಮತ್ತೆ ಮತ್ತೆ ವರದಿ ಆಗುತ್ತಲೇ ಇವೆ. ಅದನ್ನು ಕಂಡಾಗ ಪುನೀತ್​ ರಾಜ್​ಕುಮಾರ್​ ಮೇಲೆ ಜನರು ಇಟ್ಟಿರುವ ಅಭಿಮಾನ ಶಾಶ್ವತ ಎಂಬುದು ಸಾಬೀತಾಗುತ್ತದೆ. ಅಪ್ಪು ಅವರ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಥಿಯೇಟರ್​ನಲ್ಲೇ ಬಿಡುಗಡೆ ಆಗಲಿದೆ. ಅದಕ್ಕಾಗಿ ಫ್ಯಾನ್ಸ್​ (Puneeth Rajkumar Fans) ಕಾದಿದ್ದಾರೆ.

ಇದನ್ನೂ ಓದಿ:

ಯುಗಾದಿ ಹಬ್ಬದಂದು ಪುನೀತ್​ ವಿಡಿಯೋ ವೈರಲ್​; ಆ ಧ್ವನಿ ಕೇಳಿ ಮರುಗಿದ ಅಪ್ಪು ಅಭಿಮಾನಿಗಳು

ಶಾಲೆಯ ಪರೀಕ್ಷೆಯಲ್ಲಿ ಪುನೀತ್​ ಬಗ್ಗೆ ಪ್ರಶ್ನೆ; ಸಖತ್​ ವೈರಲ್​ ಆಗಿದೆ ಪ್ರಶ್ನೆಪತ್ರಿಕೆಯ ಫೋಟೋ

Follow us on

Click on your DTH Provider to Add TV9 Kannada