ಜಗಳವಾಡುವುದರಿಂದ ಮಕ್ಕಳ ಮೇಲಾಗುವ ಪರಿಣಾಮ ಏನು ಗೊತ್ತಾ..! ಇಲ್ಲಿದೆ ಮಾಹಿತಿ

ಜಗಳವಾಡುವುದರಿಂದ ಮಕ್ಕಳ ಮೇಲಾಗುವ ಪರಿಣಾಮ ಏನು ಗೊತ್ತಾ..! ಇಲ್ಲಿದೆ ಮಾಹಿತಿ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Apr 04, 2022 | 7:45 AM

ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಪ್ರತಿದಿನ ನಮ್ಮ ನಮ್ಮ ಮನೆಯೊಳಗೆ ನಾವು ಒಂದಿಲ್ಲ ಒಂದು ವಾದ (Argument) ವಿವಾದಕ್ಕೆ ಒಳಗಾಗುತ್ತೇವೆ. ಜಗಳ ಅನ್ನೋದು ಪ್ರತಿಯೊಂದು ಮನೆಯಲ್ಲಿ ನಡೆಯುವಂತಹದು. ಅದು ಗಂಡ-ಹೆಂಡತಿ, ಮಕ್ಕಳು, ಪೋಷಕರು ಹೀಗೆ ಯಾರೇ ಆಗಿರಬಹುದು. ಇಂತಹ ವಿವಾದ ಅಥವಾ ಜಗಳದಲ್ಲಿ ನಾವು ಗೆಲ್ಲುವುದು ಹೇಗೆ ಅಥವಾ ಈ ಜಗಳ ಮಾಡುವಾ ನಮ್ಮ ಮನಸ್ಸು ತುಂಬಾನೇ ಹದಗೆಡುತ್ತೆ. ಜೊತೆಗೆ ಮನೆ ವಾತಾವರಣ ಹಾಳಾಗುತ್ತೆ. ಗಂಡ ಹೆಂಡತಿರ ಜಗಳದಲ್ಲಿ ಕುಸು ಬಡವಾಯಿತು ಎನ್ನುವ ಗಾದೆಯನ್ನ ನಾವು ಕೇಳಿರುತ್ತೇವೆ. ಈ ವಾದ ಅಥವಾ ಜಗಳ ಬೆಳೆಯುತ್ತಿರುವ ನಮ್ಮ ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಮಾನಸಿಕವಾಗಿ ಅವರು ಮದುವೆಯ ಬಗ್ಗೆ ನಂಬಿಕೆಯನ್ನ ಕಳೆದುಕೊಳ್ಳುತ್ತಾರೆ. ಮತ್ತೆ ಅಂತಹ ಮಕ್ಕಳಿಗೆ ಅಭದ್ರತೆ ಕಾಡುತ್ತೆ, ಅವರು ಯಾರನ್ನು ಅಷ್ಟು ಬೇಗ ನಂಬುದಕ್ಕೆ ಹೋಗುದಿಲ್ಲ. ಮನುಷ್ಯನಲ್ಲಿ ಆತಂಕ ಇರೋದು ಕಾಮನ್​. Anxietyಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಇದನ್ನೂ ಓದಿ:

ಹೂಡಿಕೆ ಮಾಡೋ ಮುನ್ನ ಈ ಅಂಶಗಳತ್ತ ಗಮನಕೊಡಿ..!

Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಕೆಲಸಕ್ಕೆ ಸಂಬಂಧಿಸಿದ ಒತ್ತಡ ಸಂಪೂರ್ಣವಾಗಿ ದಣಿಸುತ್ತದೆ