Suresh Raina: ಪ್ಲೇ ಆಫ್​ಗೆ ಎಂಟ್ರಿ ಕೊಡಲಿರುವ 4 ತಂಡಗಳನ್ನು ಹೆಸರಿಸಿದ ಸುರೇಶ್ ರೈನಾ

IPL 2022: ಈ ಸಲ ಮೆಗಾ ಹರಾಜಿನಲ್ಲಿ ಸುರೇಶ್ ರೈನಾ ಅವರನ್ನು ಯಾವುದೇ ತಂಡ ಖರೀದಿಸಿಲ್ಲ. 2 ಕೋಟಿ ರೂ ಮೂಲ ಬೆಲೆ ಹೊಂದಿದ್ದ ರೈನಾ ಅವರ ಖರೀದಿಗೆ ಈ ಹಿಂದಿನ ಫ್ರಾಂಚೈಸಿ ಸಿಎಸ್​ಕೆ ಕೂಡ ಒಲವು ತೋರಲಿಲ್ಲ. ಹೀಗಾಗಿ ಈ ಬಾರಿ ರೈನಾ ಅನ್​ಸೋಲ್ಡ್​ ಪಟ್ಟಿಯಲ್ಲಿ ಉಳಿದುಕೊಂಡಿದ್ದರು.

Suresh Raina: ಪ್ಲೇ ಆಫ್​ಗೆ ಎಂಟ್ರಿ ಕೊಡಲಿರುವ 4 ತಂಡಗಳನ್ನು ಹೆಸರಿಸಿದ ಸುರೇಶ್ ರೈನಾ
IPL 2022
Follow us
TV9 Web
| Updated By: ಝಾಹಿರ್ ಯೂಸುಫ್

Updated on: Apr 03, 2022 | 11:29 PM

ರಂಗೀನ್ ಕ್ರಿಕೆಟ್ ಟೂರ್ನಿ ಐಪಿಎಲ್ ಸೀಸನ್ (IPL 2022) 15 ಶುರುವಾಗಿದೆ. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್​ ಸಿಎಸ್​ಕೆ (CSK) ತಂಡಕ್ಕೆ ಕೆಕೆಆರ್ ತಂಡ ಸೋಲಿನ ರುಚಿ ತೋರಿಸಿದೆ. ಹಾಗೆಯೇ 2ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ (MI vs DC) ಮಣಿಸಿದೆ. ಇನ್ನು 3ನೇ ಪಂದ್ಯದಲ್ಲಿ ಆರ್​ಸಿಬಿ (RCB) ಪಂಜಾಬ್ ಕಿಂಗ್ಸ್ (PBKS) ವಿರುದ್ದ ಸೋತರೂ, ಕೆಕೆಆರ್ ವಿರುದ್ದ ಗೆಲ್ಲುವ ಮೂಲಕ ಫಾಫ್ ಡುಪ್ಲೆಸಿಸ್ ಪಡೆ ಗೆಲುವಿನ ಖಾತೆ ತೆರೆದಿದೆ. ಮತ್ತೊಂದೆಡೆ ಸತತ ಎರಡು ಸೋಲುಗಳಿಂದ ಸಿಎಸ್​ಕೆ ಹಾಗೂ ಮುಂಬೈ ಇಂಡಿಯನ್ಸ್ ಕಂಗೆಟ್ಟಿದೆ. ಒಟ್ಟಿನಲ್ಲಿ ಐಪಿಎಲ್​ನ ಆರಂಭದಲ್ಲೇ ಅನಿರೀಕ್ಷಿತ ಫಲಿತಾಂಶಗಳು ಮೂಡಿಬರುತ್ತಿರುವುದರಿಂದ ದಿನದಿಂದ ದಿನಕ್ಕೆ ಕುತೂಹಲ ಕೂಡ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಈ ಬಾರಿ ಅಂತಿಮವಾಗಿ 10 ರಲ್ಲಿ ಮೊದಲ 4 ಸ್ಥಾನಗಳನ್ನು ಪಡೆಯುವ ತಂಡ ಯಾವುದೆಂಬ ಲೆಕ್ಕಚಾರಗಳು ಆರಂಭದಲ್ಲೇ ಶುರುವಾಗಿದೆ. ಅದರಂತೆ ಸಿಎಸ್​ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಕೂಡ ಈ ಬಾರಿ ಪ್ಲೇ ಆಫ್ ಆಡಲಿರುವ ತಂಡಗಳಾವುವು ಎಂಬ ಭವಿಷ್ಯ ನುಡಿದಿದ್ದಾರೆ.

ಮೊದಲ ಎರಡು ಪಂದ್ಯಗಳ ಸೋಲಿನ ಹೊರತಾಗಿಯೂ ಈ ಬಾರಿ ಕೂಡ ಚೆನ್ನೈ ಸೂಪರ್ ಕಿಂಗ್ಸ್​ ತಂಡವು ಪ್ಲೇ ಆಫ್ ಪ್ರವೇಶಿಸಲಿದೆ ಎಂದಿದ್ದಾರೆ ಸುರೇಶ್ ರೈನಾ. ಇನ್ನು ಹೊಸ ತಂಡಗಳಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೂಡ ಪ್ಲೇ ಆಫ್​ಗೆ ಎಂಟ್ರಿ ಕೊಡಲಿದೆ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ತಿಳಿಸಿದ್ದಾರೆ.

ಇನ್ನು ರಿಷಭ್ ಪಂಡೆ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಈ ಸಲ ಪ್ಲೇ ಆಫ್ ಪ್ರವೇಶಿಸುವುದರಲ್ಲಿ ಅನುಮಾನವಿಲ್ಲ ಎಂದು ರೈನಾ ಹೇಳಿದ್ದಾರೆ. ಹಾಗೆಯೇ ಪ್ಲೇ ಆಫ್​ನಲ್ಲಿ ಸ್ಥಾನ ಪಡೆಯಲಿರುವ ನಾಲ್ಕನೇ ತಂಡವಾಗಿ ಆರ್​ಸಿಬಿಯನ್ನು ಆಯ್ಕೆ ಮಾಡಿದ್ದಾರೆ. ಈ ಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ನನ್ನ ಪ್ರಕಾರ ಪ್ಲೇ ಆಫ್ ಆಡಲಿದೆ ಎಂದು ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.

ಇದಾಗ್ಯೂ ಸುರೇಶ್ ರೈನಾ ಈ ಬಾರಿ ಮುಂಬೈ ಇಂಡಿಯನ್ಸ್​ ಮುಂದಿನ ಹಂತಕ್ಕೇರುವ ಬಗ್ಗೆ ಯಾವುದೇ ವಿಶ್ವಾಸ ಹೊಂದಿಲ್ಲ. ನನ್ನ ಪ್ರಕಾರ CSK, LSG, DC ಮತ್ತು RCB ತಂಡಗಳು ಲೀಗ್ ಹಂತದಿಂದ ಪ್ಲೇ ಆಫ್​ಗೆ ಎಂಟ್ರಿ ಕೊಡಲಿದೆ ಎಂದು ಸುರೇಶ್ ರೈನಾ ತಿಳಿಸಿದ್ದಾರೆ.

ಸುರೇಶ್ ರೈನಾ ಹೊಸ ಇನಿಂಗ್ಸ್​:

ಈ ಸಲ ಮೆಗಾ ಹರಾಜಿನಲ್ಲಿ ಸುರೇಶ್ ರೈನಾ ಅವರನ್ನು ಯಾವುದೇ ತಂಡ ಖರೀದಿಸಿಲ್ಲ. 2 ಕೋಟಿ ರೂ ಮೂಲ ಬೆಲೆ ಹೊಂದಿದ್ದ ರೈನಾ ಅವರ ಖರೀದಿಗೆ ಈ ಹಿಂದಿನ ಫ್ರಾಂಚೈಸಿ ಸಿಎಸ್​ಕೆ ಕೂಡ ಒಲವು ತೋರಲಿಲ್ಲ. ಹೀಗಾಗಿ ಈ ಬಾರಿ ರೈನಾ ಅನ್​ಸೋಲ್ಡ್​ ಪಟ್ಟಿಯಲ್ಲಿ ಉಳಿದುಕೊಂಡಿದ್ದರು. ಇದಾಗ್ಯೂ ರೈನಾ ಬದಲಿ ಆಟಗಾರನಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಗುಜರಾತ್ ತಂಡದಿಂದ ಜೇಸನ್ ರಾಯ್ ಹೊರನಡೆದಾಗ ಬದಲಿ ಆಟಗಾರನಾಗಿ ಅಫ್ಘಾನ್ ಆಟಗಾರ ರಹಮನುಲ್ಲಾ ಗುರ್ಬಾಜ್ ಆಯ್ಕೆಯಾಗಿದ್ದರು.

ಇನ್ನು ಕೆಕೆಆರ್​ ತಂಡದಿಂದ ಹೊರನಡೆದ ಅಲೆಕ್ಸ್ ಹೇಲ್ಸ್ ಬದಲಿಗೆ ಆರೋನ್ ಫಿಂಚ್​ಗೆ ಆಯ್ಕೆಯಾಗಿದ್ದರು. ಇದಾಗ್ಯೂ ರೈನಾ ಅವರ ಆಯ್ಕೆಗೆ ಯಾವುದೇ ಫ್ರಾಂಚೈಸಿ ಮುಂದಾಗಿರಲಿಲ್ಲ. ಇದೀಗ ಸುರೇಶ್ ರೈನಾ ಐಪಿಎಲ್​ ಪಂದ್ಯಗಳ ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಂಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಚಾನೆಲ್​ನಲ್ಲಿ ಪಂದ್ಯದ ವೀಕ್ಷಕ ವಿವರಣೆಗಾರನಾಗಿ ರೈನಾ ಹೊಸ ಇನಿಂಗ್ಸ್​ ಆರಂಭಿಸಿದ್ದಾರೆ.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು