ಹೂಡಿಕೆ ಮಾಡೋ ಮುನ್ನ ಈ ಅಂಶಗಳತ್ತ ಗಮನಕೊಡಿ..!
ಕಂಪನಿಯ ಲಾಭ ನಷ್ಟದ ವಿವರಣೆ ಹಾಗೂ ಬ್ಯಾಲೆನ್ಸ್ ಶೀಟ್ಗಳ ಮೇಲೆ ಸಂಪೂರ್ಣ ಭರವಸೆ ಇಡ್ಬೇಡಿ. ಕಂಪನಿಯ ವಾರ್ಷಿಕ ವರದಿಯಲ್ಲಿರೋ ಕ್ಯಾಶ್ ಪ್ಲೋ ವಿಶ್ಲೇಷಣೆ ಮತ್ತು ಹಣಕಾಸು ಟಿಪ್ಪಣಿಗಳನ್ನು ಚೆನ್ನಾಗಿ ಓದಿ.
ಅನೇಕ ಚಿಲ್ಲರೆ ಹೂಡಿಕೆದಾರರು ಕಾರ್ಪೊರೇಟ್ (Corporate) ವಂಚನೆಗಳಲ್ಲಿ ತಮ್ಮ ಕೈ ಸುಟ್ಟುಕೊಂಡಿದ್ದಾರೆ. ಚಿಲ್ಲರೆ ಹೂಡಿಕೆ ಮಾಡಿದವರಿಗೆ ತಮ್ಮ ಕಂಪನಿಯಲ್ಲಿ ಏನಾದರೂ ಅವ್ಯವಹಾರ ನಡೆಯುತ್ತಿದ್ರೆ ಮಾಧ್ಯಮದಲ್ಲಿ ಬರುವುದಕ್ಕೂ ಮುಂಚೆ ಅದನ್ನ ತಿಳಿದುಕೊಳ್ಳುವುದಕ್ಕೆ ದಾರಿಗಳಿವೆ. ಯಾವುದೇ ಕಾರ್ಪೊರೇಟ್ ಕಂಪನಿಯಲ್ಲಿ ಏನಾದರೂ ಅವ್ಯವಹಾರ ನಡೆಯುತ್ತಿದೆ ಅನ್ನೋದನ್ನ ತಿಳಿಯೋಕೆ ದಾರಿಗಳಿವೆ. ಹಾಗಾದ್ರೆ ನೀವು ಯಾವ ವಿಷಯಗಳ ಬಗ್ಗೆ ಗಮನಹರಿಸಬೇಕು ಅಂಥ ನಾವು ಹೇಳುತ್ತೇವೆ ಕೇಳಿ. ಮೊದಲು ಕಂಪನಿಯ ವಾರ್ಷಿಕ ವರದಿಯನ್ನು ಓದಿ. ವಾರ್ಷಿಕ ವರದಿಯಲ್ಲಿ ಗಮನ ಹರಿಸಬೇಕಾದ ಅಂಶಗಳನ್ನು ಓದಿ. ಕಂಪನಿಯಲ್ಲಿ ನಡೆದಿರೋ ಹಣದ ವ್ಯವಹಾರದ ವಿವರ ಕ್ಯಾಶ್ ಪ್ಲೋದಲ್ಲಿ ಸಿಗತ್ತೆ. ಕಂಪನಿಯ ಲಾಭ ನಷ್ಟದ ವಿವರಣೆ ಹಾಗೂ ಬ್ಯಾಲೆನ್ಸ್ ಶೀಟ್ಗಳ ಮೇಲೆ ಸಂಪೂರ್ಣ ಭರವಸೆ ಇಡ್ಬೇಡಿ. ಕಂಪನಿಯ ವಾರ್ಷಿಕ ವರದಿಯಲ್ಲಿರೋ ಕ್ಯಾಶ್ ಪ್ಲೋ ವಿಶ್ಲೇಷಣೆ ಮತ್ತು ಹಣಕಾಸು ಟಿಪ್ಪಣಿಗಳನ್ನು ಚೆನ್ನಾಗಿ ಓದಿ.
ಇದನ್ನೂ ಓದಿ:
WhatsApp: ವಾಟ್ಸ್ಆ್ಯಪ್ನಲ್ಲಿರುವ ಅಟೊಮೆಟಿಕ್ ಡಿಲೀಟೆಡ್ ಫೀಚರ್ ಬಳಸಿದ್ದೀರಾ?: ಇಲ್ಲಿದೆ ನೋಡಿ