Mental Health: ಜೀವನದಲ್ಲಿ ನಡೆದ ಕಹಿಘಟನೆಯಿಂದ ಹೊರಬರುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ

TV9 Web
| Updated By: ganapathi bhat

Updated on: Apr 03, 2022 | 9:40 AM

ನಮ್ಮ ಎಲ್ಲರ ಜೀವನದಲ್ಲೂ ಕಹಿ ಘಟನೆಗಳು ಮತ್ತು ಸಿಹಿ ಘಟನೆಗಳು ಎರಡೂ ನಡೆದಿರುತ್ತದೆ. ಆದರೆ ನಾವು ಕಹಿ ಘಟನೆಗಳನ್ನೇ ಹೆಚ್ಚಾಗಿ ನೆನೆಸಿಕೊಂಡು ಜೀವನದಲ್ಲಿ ಕೊರಗುತ್ತೇವೆ. ಆದರೆ ಒಂದು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಎಂತಹ ಬಡವ ಅಥವಾ ಶ್ರೀಮಂತನಿಗೂ ಕಷ್ಟಗಳು ಇರುತ್ತವೆ.

ನಮ್ಮ ಎಲ್ಲರ ಜೀವನದಲ್ಲೂ ಕಹಿ ಘಟನೆಗಳು ಮತ್ತು ಸಿಹಿ ಘಟನೆಗಳು ಎರಡೂ ನಡೆದಿರುತ್ತದೆ. ಆದರೆ ನಾವು ಕಹಿ ಘಟನೆಗಳನ್ನೇ ಹೆಚ್ಚಾಗಿ ನೆನೆಸಿಕೊಂಡು ಜೀವನದಲ್ಲಿ ಕೊರಗುತ್ತೇವೆ. ಆದರೆ ಒಂದು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಎಂತಹ ಬಡವ ಅಥವಾ ಶ್ರೀಮಂತನಿಗೂ ಕಷ್ಟಗಳು ಇರುತ್ತವೆ. ಇರುವೆಗೆ ಇರುವೆ ಭಾರ, ಆನೆಗೆ ಆನೆ ಭಾರ ಎಂಬ ಮಾತಿನ ಹಾಗೆ. ಹಾಗಾಗಿ ಕಷ್ಟಕ್ಕೆ ಕೊರಗುತ್ತಾ ಇರುವುದು ಒಳ್ಳೆಯದಲ್ಲ. ಶತ್ರುಗೂ ನನ್ನ ಕಷ್ಟ ಬೇಡ ಇತ್ಯಾದಿ ಹೇಳುತ್ತಾ ನೋವಿನಲ್ಲೇ ಇರುವುದು ಸರಿಯಲ್ಲ. ಕಹಿ ಘಟನೆ ಅಸುರಕ್ಷಿತ, ಭಯದ ಭಾವ ಕೊಡುತ್ತದೆ. ಅದನ್ನು ಮರೆತು ಸುರಕ್ಷಿತ, ಸಂತಸದ ನೆನಪು ಮಾಡಿಕೊಳ್ಳಿ. ಅಂತಹ ಒಳ್ಳೆಯ ನೆನಪನ್ನು ಮತ್ತೆ ಬದುಕಿ, ಅದನ್ನು ಅನುಭವಿಸಿ. ನೋವಾದಾಗ ಅಥವಾ ಕಹಿ ಘಟನೆ ನೆನಪಾದಾಗ ಎಲ್ಲಾ ಪಾಸ್ ಆಗಿದ್ದು, ಕೆಲಸ ಸಿಕ್ಕಿರೋದು, ಮದುವೆ ಆಗಿರೋದು, ಆಪ್ತರ ಜೊತೆಗೆ ಕಳೆದ ಸಮಯ ಇತ್ಯಾದಿ ಒಳ್ಳೆಯ ಘಟನೆಗಳನ್ನು ನೆನಪಿಸಿಕೊಳ್ಳಿ.

ಕಹಿ ಘಟನೆಗಳನ್ನು ಎಲ್ಲವನ್ನೂ ಮರೆತು ಬದುಕುವುದು ಒಳ್ಳೆಯದು. ಪ್ರತಿ ದಿನವೂ ಒಂದೊಂದು ನೆನಪುಗಳ ಕೂಡಿಸುವಿಕೆ. ಅಲ್ಲಿ ಸಂತಸವನ್ನು ಕಾಣಲು, ಉತ್ತಮ ನೆನಪುಗಳನ್ನು ಸಂಗ್ರಹಿಸುತ್ತಾ ಬದುಕಬೇಕು. ದಿನವೂ ಒಳ್ಳೆಯ ನೆನಪುಗಳು ನಡೆಯುತ್ತವೆ ಅವುಗಳನ್ನು ಫೋಟೊ ತೆಗೆದು ಇಟ್ಟುಕೊಳ್ಳಬೇಕು. ನೋವಾದಾಗ ಅದನ್ನು ನೋಡಬಹುದು. ಪವರ್ ಆಫ್ ಇಮ್ಯಾಜಿನೇಷನ್ ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯರಲ್ಲಿದೆ. ಒಳ್ಳೆಯ ನೆನಪುಗಳಲ್ಲಿ ಬದುಕುವುದು. ಒಳ್ಳೆಯದನ್ನು ನೆನಪಿಸಿಕೊಳ್ಳುವುದು ಮುಖ್ಯ.

ಆಗ ಉತ್ತಮ ನೆನಪುಗಳ ಜೊತೆಗೆ ನೀವು ಬದುಕಬಹುದು. ಈ ಒಂದು ಆಯ್ಕೆ ನಮ್ಮ ಬಳಿಯೇ ಇದೆ. ಒಳ್ಳೆಯ ನೆನಪು ಮತ್ತು ಕೆಟ್ಟ ನೆನಪು ಯಾವುದು ಬೇಕು ಎಂದು ಆಯ್ಕೆ ಮಾಡುವುದು. ಬದುಕಲ್ಲಿ ಧನಾತ್ಮಕವಾಗಿ ಇರೋಣ, ನಾವು ಸಂತೋಷವಾಗಿದ್ದು ನಮ್ಮ ಜೊತೆಗೆ ಇರುವವರನ್ನು ಖುಷಿಯಾಗಿ ಇರಿಸೋಣ. ಅದಕ್ಕಾಗಿ ಆದಷ್ಟು ಒಳ್ಳೆಯ ನೆನಪುಗಳನ್ನೇ ಕೂಡಿಟ್ಟುಕೊಳ್ಳಿ. ಕೆಟ್ಟದನ್ನು ಮರೆಯಲು ಕಲಿಯಿರಿ. ಅದು ಹೇಗೆ ಸಾಧ್ಯ ಎಂದು ಈ ವಿಡಿಯೋದಲ್ಲಿ ವಿವರವಾಗಿ ತಿಳಿಯಿರಿ.

ಇದನ್ನೂ ಓದಿ: Mental Health: ಮಾನಸಿಕ ನೆಮ್ಮದಿ ಕಾಡಿಕೊಳ್ಳಲು ಏನು ಮಾಡಬೇಕು ಗೊತ್ತಾ! ಇಲ್ಲಿದೆ ಮಾಹಿತಿ

ಇದನ್ನೂ ಓದಿ: Mental Health: ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಆಹಾರದ ಕ್ರಮ ಹೀಗಿರಲಿ