Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲಿವ್​ಇನ್ ರಿಲೇಶನ್​ಶಿಪ್, ಮದುವೆ ಎರಡರಲ್ಲೂ ವ್ಯತ್ಯಾಸವಿಲ್ಲ ಅಂದುಕೊಂಡಿದ್ದೆ, ಆದರೆ..’; ವೈಯಕ್ತಿಕ ವಿಚಾರ ಹಂಚಿಕೊಂಡ ವಿದ್ಯಾ ಬಾಲನ್

Vidya Balan | Siddharth Roy Kapoor: ಬಾಡಿಶೇಮಿಂಗ್​ ಬಗ್ಗೆ, ಫಿಟ್​ನೆಸ್ ಬಗ್ಗೆ ವಿದ್ಯಾ ಬಾಲನ್ ಮುಕ್ತವಾಗಿ ಮಾತನಾಡಿದಷ್ಟು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದು ಕಡಿಮೆ. ಇದೀಗ ನಟಿ ತಮ್ಮ ವೈವಾಹಿಕ ಬದುಕಿನ ಬಗ್ಗೆ, ಪತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

‘ಲಿವ್​ಇನ್ ರಿಲೇಶನ್​ಶಿಪ್, ಮದುವೆ ಎರಡರಲ್ಲೂ ವ್ಯತ್ಯಾಸವಿಲ್ಲ ಅಂದುಕೊಂಡಿದ್ದೆ, ಆದರೆ..’; ವೈಯಕ್ತಿಕ ವಿಚಾರ ಹಂಚಿಕೊಂಡ ವಿದ್ಯಾ ಬಾಲನ್
ವಿದ್ಯಾ ಬಾಲನ್
Follow us
TV9 Web
| Updated By: shivaprasad.hs

Updated on: Apr 04, 2022 | 7:00 AM

ಬಾಲಿವುಡ್​​ನಲ್ಲಿ ಮಹಿಳಾ ಪ್ರಧಾನ ಪಾತ್ರಗಳಿಂದಲೇ ಗುರುತಿಸಿಕೊಂಡವರು ವಿದ್ಯಾ ಬಾಲನ್. 43 ವರ್ಷದ ನಟಿ ‘ಡರ್ಟಿ ಪಿಚ್ಚರ್’, ‘ಶೆರ್ನಿ’, ‘ಶಕುಂತಲಾ ದೇವಿ’, ‘ಮಿಷನ್ ಮಂಗಲ್’ ಮೊದಲಾದ ಚಿತ್ರಗಳಿಂದ ಖ್ಯಾತಿ ಗಳಿಸಿದವರು. ಈಗಲೂ ಚಿತ್ರರಂಗದಲ್ಲಿ ಅವರಿಗೆ ಬೇಡಿಕೆ ಇದೆ. ಸದ್ಯ ಒಟಿಟಿಯಲ್ಲೂ ಅವರು ಸಕ್ರಿಯರಾಗಿದ್ದಾರೆ. ಬಾಲಿವುಡ್​ನಲ್ಲಿ ಸಾಮಾನ್ಯವಾಗಿ ಖ್ಯಾತ ತಾರೆಯರ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಅಥವಾ ತಾರೆಯರೇ ಸಾಮಾಜಿಕ ಜಾಲತಾಣಗಳಲ್ಲಿ ಕುಟುಂಬದ ಫೋಟೋ, ವಿಡಿಯೋ ಹಾಗೂ ಬರಹ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ವಿದ್ಯಾ ಬಾಲನ್ (Vidya Balan) ಇದಕ್ಕೆ ಭಿನ್ನ. ಬಾಡಿಶೇಮಿಂಗ್​ ಬಗ್ಗೆ, ಫಿಟ್​ನೆಸ್ ಬಗ್ಗೆ ವಿದ್ಯಾ ಬಾಲನ್ ಮುಕ್ತವಾಗಿ ಮಾತನಾಡಿದಷ್ಟು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದು ಕಡಿಮೆ. ಇದೀಗ ನಟಿ ತಮ್ಮ ವೈವಾಹಿಕ ಬದುಕಿನ ಬಗ್ಗೆ, ಪತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ವಿದ್ಯಾ ಬಾಲನ್ 2012ರಲ್ಲಿ ಖ್ಯಾತ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್​ರನ್ನು ವಿವಾಹವಾದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ತಮ್ಮ ದಾಂಪತ್ಯದ ಬಗ್ಗೆ ಮಾತನಾಡಿದ್ದಾರೆ. ಮದುವೆಗೂ ಮುನ್ನ ವಿದ್ಯಾ, ಲಿವ್​ಇನ್ ರಿಲೇಶನ್​ಶಿಪ್​ನಲ್ಲಿರುವುದು ಅಥವಾ ಮದುವೆಯಾಗುವುದು ಎರಡೂ ಒಂದೇ. ಎರಡರಲ್ಲೂ ಯಾವ ವ್ಯತ್ಯಾಸವೂ ಇಲ್ಲ ಎಂದು ಭಾವಿಸಿದ್ದರಂತೆ. ಆದರೆ ಇದೀಗ ತಮ್ಮ ಪತಿಯಿಂದಾಗಿ ವೈವಾಹಿಕ ಜೀವನ ಬಹಳ ವಿಶೇಷವಾಗಿದೆ ಎಂದಿದ್ದಾರೆ ವಿದ್ಯಾ ಬಾಲನ್.

ಸಿದ್ಧಾರ್ಥ್​ ರಾಯ್ ಕಪೂರ್​ರಿಂದಾಗಿ ದಾಂಪತ್ಯ ಜೀವನ ಸುಂದರವಾಗಿದೆ ಎಂದಿರುವ ವಿದ್ಯಾ ಬಾಲನ್, ಪತಿಯನ್ನು ‘ಅತ್ಯಂತ ಸಾವಧಾನವಾಗಿ ಆಲಿಸುವ ವ್ಯಕ್ತಿ’ ಎಂದು ವ್ಯಾಖ್ಯಾನಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿರುವ ನಟಿ, ‘‘ಮತ್ತೊಬ್ಬರ ಮಾತುಗಳನ್ನು ಸಿದ್ಧಾರ್ಥ್ ರಾಯ್ ಕಪೂರ್​ರಷ್ಟು ತಾಳ್ಮೆ ಇಂದ ಆಲಿಸುವ ಮತ್ತೋರ್ವರನ್ನು ನಾನು ಕಂಡಿಲ್ಲ. ಅವರೆಷ್ಟು ಕೇಳುತ್ತಾರೆಂದರೆ, ನಾನು ಅವರಿಗೆ ವಿವರಿಸುತ್ತಾ ನನಗೇ ವಿಚಾರಗಳು ಸ್ಪಷ್ಟವಾಗುತ್ತವೆ. ಅವರಿಂದ ಸಲಹೆಗಳೇ ಬೇಕಾಗುವುದಿಲ್ಲ’’ ಎಂದಿದ್ದಾರೆ.

ಸಿದ್ಧಾರ್ಥ್​​ರನ್ನು ಗೆಳೆಯನಾಗಿ ಪಡೆಯುವುದಕ್ಕೆ ಪುಣ್ಯ ಮಾಡಿದ್ದೆ ಎಂದಿರುವ ವಿದ್ಯಾ ಬಾಲನ್, ‘‘ಅವರು ನನ್ನ ಜೀವನದ ಕೆಟ್ಟ ದಿನಗಳಲ್ಲಿ, ಖುಷಿಯ ದಿನಗಳಲ್ಲಿ ನಾನಿದ್ದಂತೆಯೇ ಸ್ವೀಕರಿಸುತ್ತಾರೆ. ಮದುವೆಯಾಗಿ ಸುಮಾರು 10 ವರ್ಷಗಳಾಗುತ್ತಾ ಬಂದಿದೆ. ಈಗ ಸಿದ್ಧಾರ್ಥ್​ರಿಂದಾಗಿ ನಾನು ವಿವಾಹವನ್ನು ಹೊಗಳುತ್ತೇನೆ. ಮೊದಲಿಗೆ ಲಿವ್​ಇನ್ ರಿಲೇಶನ್​ಶಿಪ್​ ಅಥವಾ ಮದುವೆಯಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಭಾವಿಸಿದ್ದೆ. ಆದರೆ ಸಿದ್ಧಾರ್ಥ್​ರಿಂದಾಗಿ ವೈವಾಹಿಕ ಬದುಕು ಅದ್ಭುತವಾಗಿದೆ’’ ಎಂದಿದ್ಧಾರೆ.

2012ರಲ್ಲಿ ವಿದ್ಯಾ ಬಾಲನ್ ಹಾಗೂ ಸಿದ್ಧಾರ್ಥ್ ರಾಯ್ ಕಪೂರ್ ಡೇಟಿಂಗ್ ಮಾಡುತ್ತಿರುವುದಾಗಿ ಅನೌನ್ಸ್ ಮಾಡಿದ್ದರು. ಅದೇ ವರ್ಷ ಈರ್ವರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೂ ಈರ್ವರ ಫೋಟೋಗಳು ಹೆಚ್ಚಾಗಿ ಎಲ್ಲೂ ಲಭ್ಯವಿಲ್ಲ. ಇಬ್ಬರೂ ಕೂಡ ಕೆಲಸದ ಹೊರತಾದ ವೈಯಕ್ತಿಕ ಫೋಟೋಗಳನ್ನು ಹಂಚಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಈ ಬಗ್ಗೆ ಮಾತನಾಡಿದ ವಿದ್ಯಾ ಬಾಲನ್, ‘‘ನಾನು ಒಂದು ರೀತಿಯ ಖಾಸಗಿ ವ್ಯಕ್ತಿ. ಕೆಲಸದ ಹೊರತಾದ ಫೋಟೋಗಳನ್ನು ಹಂಚಿಕೊಳ್ಳುವುದು ಇಷ್ಟವಾಗುವುದಿಲ್ಲ’’ ಎಂದಿದ್ದಾರೆ.

Vidya Balan and Siddarth Roy Kapoor

ವಿದ್ಯಾ ಬಾಲನ್- ಸಿದ್ಧಾರ್ಥ್ ರಾಯ್ ಕಪೂರ್

ಚಿತ್ರಗಳ ವಿಷಯಕ್ಕೆ ಬಂದರೆ ವಿದ್ಯಾ ಇತ್ತೀಚೆಗೆ ಅಮೆಜಾನ್ ಪ್ರೈಮ್​ನಲ್ಲಿ ತೆರೆಕಂಡ ‘ಜಲ್ಸಾ’ದಲ್ಲಿ ನಟಿಸಿದ್ದರು. ಅದಕ್ಕೂ ಮೊದಲು ‘ಶೆರ್ನಿ’ಯಲ್ಲಿ ವಿದ್ಯಾ ಕಾಣಿಸಿಕೊಂಡಿದ್ದರು. ಎರಡೂ ಚಿತ್ರಗಳು ವೀಕ್ಷಕರಿಂದ ಮೆಚ್ಚುಗೆ ಪಡೆದಿದ್ದವು.

ಇದನ್ನೂ ಓದಿ: Vidya Balan: ಫೊಟೊಶಾಪ್ ಮಾಡಿ ನನ್ನನ್ನು ತೆಳ್ಳಗೆ ತೋರಿಸಬೇಡಿ; ವಿದ್ಯಾ ಬಾಲನ್​ ಹೀಗೆ ಖಡಕ್ ವಾರ್ನಿಂಗ್ ಮಾಡಿದ್ದೇಕೆ?

Taapsee Pannu: ಬಹುಭಾಷಾ ತಾರೆ ತಾಪ್ಸಿ ಪನ್ನು ಕ್ಯೂಟ್ ಫೋಟೋ ಗ್ಯಾಲರಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !