ಯುಗಾದಿ ಹಬ್ಬದಂದು ಪುನೀತ್​ ವಿಡಿಯೋ ವೈರಲ್​; ಆ ಧ್ವನಿ ಕೇಳಿ ಮರುಗಿದ ಅಪ್ಪು ಅಭಿಮಾನಿಗಳು

‘ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಯುಗಾದಿ ನಿಮ್ಮೆಲ್ಲರಿಗೂ ಸುಖ ಸಂತೋಷ ನೀಡಲಿ’ ಎಂದು ಪುನೀತ್​ ರಾಜ್​ಕುಮಾರ್​ ಹೇಳಿದ್ದರು. ಆ ವಿಡಿಯೋ ಈಗ ವೈರಲ್​ ಆಗಿದೆ.

ಯುಗಾದಿ ಹಬ್ಬದಂದು ಪುನೀತ್​ ವಿಡಿಯೋ ವೈರಲ್​; ಆ ಧ್ವನಿ ಕೇಳಿ ಮರುಗಿದ ಅಪ್ಪು ಅಭಿಮಾನಿಗಳು
ಪುನೀತ್​ ರಾಜ್​ಕುಮಾರ್​
Follow us
TV9 Web
| Updated By: ಮದನ್​ ಕುಮಾರ್​

Updated on: Apr 02, 2022 | 12:51 PM

ಅಭಿಮಾನಿಗಳಿಗೆ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ನೆನಪು ಪ್ರತಿ ದಿನವೂ ಕಾಡುತ್ತದೆ. ಎಲ್ಲಿ ನೋಡಿದರೂ ಅವರೇ ಕಾಣಿಸುತ್ತಾರೆ ಎಂಬಷ್ಟು ನೆನಪುಗಳನ್ನು ಕೊಟ್ಟು ಹೋಗಿದ್ದಾರೆ ಅಪ್ಪು. ಅದರಲ್ಲೂ ಯಾವುದೇ ವಿಶೇಷ ದಿನಗಳ ಬಂದರೂ ಕೂಡ ಪುನೀತ್​ ರಾಜ್​ಕುಮಾರ್​ ಅವರನ್ನು ಫ್ಯಾನ್ಸ್​ ಸ್ಮರಿಸಿಕೊಳ್ಳುತ್ತಾರೆ. ‘ಒಂದು ವೇಳೆ ನಮ್ಮ ಅಪ್ಪು ಇದ್ದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು’ ಎಂದು ನೊಂದುಕೊಳ್ಳುತ್ತಾರೆ. ಎಲ್ಲ ಹಬ್ಬ, ಉತ್ಸವಗಳಲ್ಲೂ ‘ಪವರ್​ ಸ್ಟಾರ್​’ ನೆನಪಾಗುತ್ತಾರೆ. ಇಂದು (ಏ.2) ಯುಗಾದಿ ಹಬ್ಬ. ಎಲ್ಲರ ಮನೆಯಲ್ಲೂ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ಆದರೆ ಈ ಖುಷಿಯ ನಡುವೆ ಅಪ್ಪು ಇಲ್ಲ ಎಂಬ ನೋವು ಇದ್ದೇ ಇರುತ್ತದೆ. ಈ ಸಂದರ್ಭದಲ್ಲಿ ದೊಡ್ಮನೆ ಹುಡುಗನ ಒಂದು ವಿಡಿಯೋ ವೈರಲ್​ ಆಗಿದೆ. ಯುಗಾದಿ ((Ugadi 2022) ಹಬ್ಬದ ಸಲುವಾಗಿ ಪುನೀತ್​ ರಾಜ್​ಕುಮಾರ್​​ ಅವರು ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದ ವಿಡಿಯೋ ಇದು. ಅದನ್ನು ಕಂಡು ಫ್ಯಾನ್ಸ್​ ಇನ್ನಷ್ಟು ಭಾವುಕರಾಗುತ್ತಿದ್ದಾರೆ. ಅಭಿಮಾನಿಗಳ (Puneeth Rajkumar Fans) ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಈ ವಿಡಿಯೋ ರಾರಾಜಿಸುತ್ತಿದೆ. ‘ವಿ ಮಿಸ್​ ಯೂ’ ಎಂಬ ಕಮೆಂಟ್​ನೊಂದಿಗೆ ಎಲ್ಲರೂ ಅಪ್ಪು ಸ್ಮರಣೆ ಮಾಡುತ್ತಿದ್ದಾರೆ.

ಪುನೀತ್​ ರಾಜ್​ಕುಮಾರ್​ ಎಷ್ಟೇ ದೊಡ್ಡ ಸ್ಟಾರ್​ ನಟನಾಗಿದ್ದರೂ ಕೂಡ ಜನರ ಜೊತೆ ಸಂಪರ್ಕದಲ್ಲಿ ಇರುತ್ತಿದ್ದರು. ಎಲ್ಲರ ಜೊತೆ ಬೆರೆತು ಸಿಂಪಲ್​ ಆಗಿ ಬಾಳುತ್ತಿದ್ದರು. ಪ್ರತಿ ಹಬ್ಬ-ಹರಿದಿನಗಳಲ್ಲಿ ಅವರು ಅಭಿಮಾನಿಗಳಿಗೆ ಶುಭಾಶಯ ಕೋರುತ್ತಿದ್ದರು. ಅದೇ ರೀತಿ ಈ ಹಿಂದೆ ಅವರು ಯುಗಾದಿ ಹಬ್ಬಕ್ಕೆ ವಿಶ್​ ಮಾಡಿದ್ದರು. ‘ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಯುಗಾದಿ ನಿಮ್ಮೆಲ್ಲರಿಗೂ ಸುಖ-ಸಂತೋಷ ನೀಡಲಿ. ಹ್ಯಾಪಿ ಯುಗಾದಿ’ ಎಂದು ಅಪ್ಪು ಹೇಳಿದ್ದರು. ಆ ನಗುಮೊಗವನ್ನು ಕಂಡ ಎಲ್ಲರಿಗೂ ಈಗ ಪುನೀತ್​ ನೆನಪು ಕಾಡುತ್ತಿದೆ.

ಇದೇ ವಿಡಿಯೋವನ್ನು ರಾಘವೇಂದ್ರ ರಾಜ್​ಕುಮಾರ್​ ಅವರು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಆ ಮೂಲಕ ಅವರು ಎಲ್ಲ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಅದಕ್ಕೆ ಜನರು ಭಾವುಕವಾಗಿ ಕಮೆಂಟ್​ ಮಾಡಿದ್ದಾರೆ. ಪುನೀತ್​ ರಾಜ್​ಕುಮಾರ್​​ ಇಲ್ಲದೇ ಹಬ್ಬಕ್ಕೆ ಕಳೆ ಇಲ್ಲ ಎಂದು ಜನರು ಕಮೆಂಟ್​ ಮೂಲಕ ತಿಳಿಸಿದ್ದಾರೆ. ಅಭಿಮಾನಿಗಳ ಮನದಲ್ಲಿ ಅಪ್ಪು ಅವರಿಗೆ ಶಾಶ್ವತ ಸ್ಥಾನ ಇದೆ. ಕಳೆದ ತಿಂಗಳು ಮಾ.17ರಂದು ಪುನೀತ್​ ರಾಜ್​ಕುಮಾರ್​ ಅವರ ಜನ್ಮದಿನ ಆಚರಿಸಲಾಯಿತು. ಅಂದು ಕೂಡ ಅವರ ಹಳೇ ವಿಡಿಯೋ ವೈರಲ್​ ಆಗಿತ್ತು. ‘ರಾತ್ರಿ ನಾನು ಮನೆಯಲ್ಲಿ ಇರಲ್ಲ. ದಯವಿಟ್ಟು ಯಾರೂ ಮನೆ ಹತ್ತಿರ ಬರಬೇಡಿ’ ಅಂತ ಪುನೀತ್​ ಹೇಳಿದ್ದ ವಿಡಿಯೋ ನೋಡಿ ಅಭಿಮಾನಿಗಳು ಕಣ್ಣೀರು ಹಾಕಿದ್ದರು.

ಪುನೀತ್​ ರಾಜ್​ಕುಮಾರ್​ ಅವರು ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ‘ಜೇಮ್ಸ್​’ ಮಾ.17ರಂದು ತೆರೆಕಂಡಿತು. ನಾಲ್ಕು ದಿನಕ್ಕೆ 100 ಕೋಟಿ ರೂಪಾಯಿ ಗಳಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆಯಿತು. ಆ ಗೆಲುವನ್ನು ನೋಡಲು ಅಪ್ಪು ನಮ್ಮ ಜೊತೆ ಇರಬೇಕಿತ್ತು ಎಂದು ಫ್ಯಾನ್ಸ್​ ಮರುಗಿದರು. ಪುನೀತ್​ ಗೆಸ್ಟ್​ ರೋಲ್​ ಮಾಡಿರುವ ‘ಲಕ್ಕಿ ಮ್ಯಾನ್​’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಆ ಮೂಲಕ ಮತ್ತೆ ಅವರನ್ನು ದೊಡ್ಡ ಪರದೆ ಮೇಲೆ ನೀಡುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. ಪುನೀತ್​ ರಾಜ್​ಕುಮಾರ್​ ಅವರು ಬಹಳ ಪ್ರೀತಿಯಿಂದ ಮಾಡಿದ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಕೂಡ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಅದರ ಬಗ್ಗೆಯೂ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ.

ಇದನ್ನೂ ಓದಿ:

ಮೈಸೂರು ಜಾತ್ರೆಯಲ್ಲಿ ಎತ್ತಿನ ಕೊಂಬುಗಳಲ್ಲಿ ಮಿಂಚಿದ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್; ವಿಡಿಯೋ ಇಲ್ಲಿದೆ

ಶಾಲೆಯ ಪರೀಕ್ಷೆಯಲ್ಲಿ ಪುನೀತ್​ ಬಗ್ಗೆ ಪ್ರಶ್ನೆ; ಸಖತ್​ ವೈರಲ್​ ಆಗಿದೆ ಪ್ರಶ್ನೆಪತ್ರಿಕೆಯ ಫೋಟೋ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ