‘ರ‍್ಯಾಂಬೊ 2’ ಸಿನಿಮಾದಲ್ಲಿ ಶರಣ್ ಹಾಗೂ ಆಶಿಕಾ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಇವರ ಕಾಂಬಿನೇಷನ್ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಅದೇ ರೀತಿ, ಈ ಸಿನಿಮಾದಲ್ಲಿದ್ದ ಉತ್ತರ ಕರ್ನಾಟಕದ ಸಾಂಗ್ ‘ಚುಟು ಚುಟು..’ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. 2018ರಲ್ಲಿ ರಿಲೀಸ್ ಆದ ಈ ಹಾಡು ಒಂದಲ್ಲ, ಎರಡಲ್ಲ ಬರೋಬ್ಬರಿ 15 ಕೋಟಿ ಬಾರಿ ವೀಕ್ಷಣೆ ಕಂಡಿದೆ. ಜನರು ಈ ಹಾಡನ್ನು ಎಷ್ಟು ಇಷ್ಟಪಟ್ಟಿದ್ದಾರೆ ಎಂಬುದಕ್ಕೆ ವೀವ್ಸ್ ಸಾಕ್ಷಿ. ಈಗ ‘ಅವತಾರ ಪುರುಷ’ ಸಿನಿಮಾದಲ್ಲೂ ಉತ್ತರ ಕರ್ನಾಟಕ ಸಾಂಗ್ ಬಳಕೆ ಮಾಡಿಕೊಳ್ಳಲಾಗಿದೆ.
‘ಹೀರೋ ಹೊಂಡ’ ಹೆಸರಿನ ಸಾಂಗ್ ‘ಅವತಾರ ಪುರುಷ’ ಸಿನಿಮಾದಲ್ಲಿದೆ. ಈ ಹಾಡಿಗಾಗಿ ಕಲರ್ಫುಲ್ ಸೆಟ್ ಹಾಕಲಾಗಿದ್ದು, ಶರಣ್ ಹಾಗೂ ಆಶಿಕಾ ರಂಗನಾಥ್ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಆಶಿಕಾ ರಂಗನಾಥ್ ಅವರ ಗ್ಲಾಮರಸ್ ಲುಕ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ‘ಚುಟು ಚುಟು..’ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದರು. ವಿಶೇಷ ಎಂದರೆ, ‘ಹೀರೋ ಹೊಂಡ..’ ಹಾಡಿಗೂ ಅವರದ್ದೇ ಸಂಗೀತ ಸಂಯೋಜನೆ ಇದೆ.
ಯುಗಾದಿ ಹಬ್ಬದ ಪ್ರಯುಕ್ತ ನಮ್ಮ #ಅವತಾರಪುರುಷ ಚಿತ್ರದ ‘ಹೀರೋ ಹೊಂಡ’ ಹಾಡು ನಿಮ್ಮ ಮುಂದೆ 😊#HeroHonda song from #AvataraPurusha is now out! https://t.co/vALIYyZ3GB @PushkarFilms @SimpleSuni @AshikaRanganath @ArjunJanyaMusic @Pushkara_M
— Sharaan (@realSharaan) April 2, 2022
ಮೇ 6ರಂದು ‘ಅವತಾರ ಪುರುಷ’ ಸಿನಿಮಾ ತೆರೆಗೆ ಬರುತ್ತಿದೆ. ಪುಷ್ಕರ್ ಫಿಲ್ಮ್ಸ್ ಅಡಿಯಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸುನಿ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್ ಚಿತ್ರದ ಛಾಯಾಗ್ರಹಣ ಜವಾಬ್ದಾರಿ ನಿಭಾಯಿಸಿದ್ದಾರೆ.
ಇದನ್ನೂ ಓದಿ: ರಿಸರ್ಚ್ ಮಾಡಿ ಫೀಲ್ಡ್ಗೆ ಇಳಿದ ಸುನಿ; ‘ಅವತಾರ ಪುರುಷ’ ಟೀಸರ್ನಲ್ಲಿ ಮತ್ತೊಂದು ಮುಖ ಅನಾವರಣ
‘ಅವತಾರ ಪುರುಷ’ ಪ್ರಚಾರಕ್ಕೆ ಬಳಕೆ ಆಗ್ತಿದೆ ‘ಆರ್ಸಿಬಿ’ ಮ್ಯಾಚ್; ಸಿಂಪಲ್ ಸುನಿಯ ಹೊಸ ಐಡಿಯಾ