‘ವಿಕ್ರಾಂತ್ ರೋಣ’ ಸಿನಿಮಾ ವಿತರಣೆಗೆ ಮುಂದೆಬಂದ ಸಂಸ್ಥೆಗಳಿವು; ಇಲ್ಲಿದೆ ಮಾಹಿತಿ
ಸುದೀಪ್ಗೆ ಪರಭಾಷೆಯಲ್ಲೂ ಅಭಿಮಾನಿಗಳು ಇದ್ದಾರೆ. ಈಗಾಗಲೇ ಹಿಂದಿ, ತೆಲುಗು ಭಾಷೆಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಈ ಕಾರಣಕ್ಕೂ ಹಲವು ದೊಡ್ಡ ನಿರ್ಮಾಣ ಸಂಸ್ಥೆಗಳು ‘ವಿಕ್ರಾಂತ್ ರೋಣ’ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿವೆ.
‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ಸಾಕಷ್ಟು ಹೈಪ್ ಸೃಷ್ಟಿ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾ 3ಡಿಯಲ್ಲಿ ತೆರೆಗೆ ಬರುತ್ತಿದೆ ಅನ್ನೋದು ವಿಶೇಷ. ಈ ಚಿತ್ರಕ್ಕೆ ಅನೂಪ್ ಭಂಡಾರಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ, ತಮಿಳು, ತೆಲುಗು ಮೊದಲಾದ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ವಿಶೇಷ ಎಂದರೆ ಪರಭಾಷೆಯಲ್ಲಿ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಈ ಚಿತ್ರವನ್ನು ಬಿಡುಗಡೆ ಮಾಡುವ ಜವಾಬ್ದಾರಿ ವಹಿಸಿಕೊಂಡಿದೆ. ತಮಿಳಿನಲ್ಲಿ ಈ ಚಿತ್ರವನ್ನು ಜೀ ಸ್ಟುಡಿಯೋಸ್ (Zee Studios) ವಿತರಣೆ ಮಾಡಲು ಮುಂದೆ ಬಂದಿದ್ದು, ಚಿತ್ರಕ್ಕೆ ದೊಡ್ಡ ಬಲ ಸಿಕ್ಕಂತೆ ಆಗಿದೆ.
ಸುದೀಪ್ಗೆ ಪರಭಾಷೆಯಲ್ಲೂ ಅಭಿಮಾನಿಗಳು ಇದ್ದಾರೆ. ಈಗಾಗಲೇ ಹಿಂದಿ, ತೆಲುಗು ಭಾಷೆಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಈ ಕಾರಣಕ್ಕೂ ಹಲವು ದೊಡ್ಡ ನಿರ್ಮಾಣ ಸಂಸ್ಥೆಗಳು ‘ವಿಕ್ರಾಂತ್ ರೋಣ’ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿವೆ. ಈ ವಿಚಾರ ಕೇಳಿ ಸುದೀಪ್ ಫ್ಯಾನ್ಸ್ ಸಖತ್ ಖುಷಿ ಪಟ್ಟಿದ್ದಾರೆ.
ಕರ್ನಾಟಕದಲ್ಲಿ ‘ಕಿಚ್ಚ ಕ್ರಿಯೇಶನ್ಸ್’ ಹಾಗೂ ‘ಶಾಲಿನಿ ಆರ್ಟ್ಸ್’ ಮೂಲಕ ‘ವಿಕ್ರಾಂತ್ ರೋಣ’ ವಿತರಣೆ ಆಗಲಿದೆ. ಕರ್ನಾಟಕದಲ್ಲಿ ಈ ಚಿತ್ರ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಆ ಸಂದರ್ಭದಲ್ಲಿ ಯಾವುದೇ ದೊಡ್ಡ ಸಿನಿಮಾಗಳು ತೆರೆಗೆ ಬರುತ್ತಿಲ್ಲ. ಹೀಗಾಗಿ, ಸುದೀಪ್ ಚಿತ್ರಕ್ಕೆ ಹೆಚ್ಚು ಪರದೆಗಳು ಸಿಗುವ ಸಾಧ್ಯತೆ ಹೆಚ್ಚಿದೆ.
Welcome aboard,,,,, Once againnnnn@ZeeStudios_ ?????
One question??? Why coming jn,,,in installments though ??? ? https://t.co/e1FdTFQWJU
— Kichcha Sudeepa (@KicchaSudeep) July 14, 2022
ಇದನ್ನೂ ಓದಿ: BBK 9: ‘ಬಿಗ್ ಬಾಸ್ ಕನ್ನಡ ಸೀಸನ್ 9’ ಪ್ರೋಮೋ ಶೂಟಿಂಗ್; ಕಿಚ್ಚ ಸುದೀಪ್ ಗೆಟಪ್ ನೋಡಿ ಫ್ಯಾನ್ಸ್ ಫಿದಾ
ಬಾಲಿವುಡ್ನಲ್ಲಿ ಸುದೀಪ್ಗೆ ಸಲ್ಮಾನ್ ಖಾನ್ ಸಾಥ್ ನೀಡಿದ್ದಾರೆ. ‘ಸಲ್ಮಾನ್ ಖಾನ್ ಫಿಲಮ್ಸ್’ ಹಾಗೂ ‘ಪಿವಿಆರ್ ಪಿಕ್ಚರ್ಸ್’ ಉತ್ತರ ಭಾರತದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ‘ಕಾಸ್ಮೋಸ್ ಎಂಟರ್ಟೇನ್ಮೆಂಟ್ಸ್’ ಮೂಲಕ ‘ವಿಕ್ರಾಂತ್ ರೋಣ’ ಸಿನಿಮಾ ಹಂಚಿಕೆ ಆಗಲಿದೆ. ತಮಿಳಿನಲ್ಲಿ ‘ಜೀ ಸ್ಟುಡಿಯೋಸ್’ ಮೂಲಕ ಸುದೀಪ್ ಸಿನಿಮಾ ವಿತರಣೆಯಾಗಲಿದೆ. ಮಲಯಾಳಂನಲ್ಲಿ ದುಲ್ಖರ್ ಸಲ್ಮಾನ್ ಅವರ ‘ವೇಫೇರರ್ ಫಿಲಮ್ಸ್’ ಮೂಲಕ ಚಿತ್ರ ವಿತರಣೆಯಾಗಲಿದೆ. ವಿದೇಶದಲ್ಲಿ ‘ಒನ್ ಟ್ವೆಂಟಿ 8 ಮೀಡಿಯಾ’ ಈ ಚಿತ್ರವನ್ನು ವಿತರಣೆ ಮಾಡಲಿದೆ.
Published On - 8:22 pm, Thu, 14 July 22