AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vikram Movie: ‘ವಿಕ್ರಮ್’ ಚಿತ್ರ ಬೆಂಬಲಿಸಿದ್ದಕ್ಕೆ ಕನ್ನಡದಲ್ಲೇ ಧನ್ಯವಾದ ತಿಳಿಸಿದ ಕಮಲ್ ಹಾಸನ್; ವಿಡಿಯೋದಲ್ಲಿ ನಟ ಹೇಳಿದ್ದೇನು?

Kamal Haasan Kannada talk | Lokesh Kanagaraj: ಈ ಹಿಂದೆ ಚಿತ್ರತಂಡ ಪ್ರಚಾರಕ್ಕೆಂದು ಕರ್ನಾಟಕಕ್ಕೆ ಬಂದಿದ್ದಾಗ ಕಮಲ್ ಕನ್ನಡ ಮಾತನಾಡದೇ ಇರುವುದು ಟೀಕೆಗೆ ಗುರಿಯಾಗಿತ್ತು. ಇದೀಗ ಚಿತ್ರದ ಯಶಸ್ಸಿನ ಬೆನ್ನಲ್ಲೇ ಕನ್ನಡಿಗರಿಗೆ ವಿಡಿಯೋ ಸಂದೇಶದ ಮೂಲಕ ಧನ್ಯವಾದ ಹೇಳಿದ್ದಾರೆ ಕಮಲ್.

Vikram Movie: 'ವಿಕ್ರಮ್' ಚಿತ್ರ ಬೆಂಬಲಿಸಿದ್ದಕ್ಕೆ ಕನ್ನಡದಲ್ಲೇ ಧನ್ಯವಾದ ತಿಳಿಸಿದ ಕಮಲ್ ಹಾಸನ್; ವಿಡಿಯೋದಲ್ಲಿ ನಟ ಹೇಳಿದ್ದೇನು?
ಕಮಲ್ ಹಾಸನ್​
TV9 Web
| Updated By: shivaprasad.hs|

Updated on: Jun 08, 2022 | 10:09 AM

Share

ಕಮಲ್ ಹಾಸನ್ (Kamal Haasan) ನಟನೆಯ ‘ವಿಕ್ರಮ್’ (Vikram) ಚಿತ್ರ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರವು ಬಾಕ್ಸಾಫೀಸ್ ನಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ಬರೆದಿದೆ. ಲೋಕೇಶ್ ಕನಗರಾಜ್ ಹಾಗೂ ಕಮಲ್ ಹಾಸನ್ ಕಾಂಬಿನೇಷನನ್ನು ಚಿತ್ರಪ್ರೇಮಿಗಳು ಇಷ್ಟಪಟ್ಟಿದ್ದಾರೆ. ಹಾಗೆಯೇ ‘ವಿಕ್ರಮ್’ನಲ್ಲಿ ಸ್ಟಾರ್ ನಟರ ದಂಡೇ ಇರುವುದು ಚಿತ್ರಕ್ಕೆ ಪ್ಲಸ್ ಆಗಿದೆ. ಫಹಾದ್ ಫಾಸಿಲ್, ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೆ, ಸೂರ್ಯ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಆದರೆ ದೊಡ್ಡ ಕ್ಯಾನ್ವಾಸ್ ನಲ್ಲಿ ತಯಾರಾಗುತ್ತಿರುವ ಚಿತ್ರ ಕನ್ನಡದಲ್ಲಿ ರಿಲೀಸ್ ಆಗುತ್ತಿಲ್ಲ ಎಂಬ ಬೇಸರವನ್ನು ಚಿತ್ರಪ್ರೇಮಿಗಳು ಹೊರಹಾಕಿದ್ದರು. ಅಲ್ಲದೇ ಕನ್ನಡ ಅವತರಣಿಕೆಯನ್ನೇ ಕರ್ನಾಟಕದಲ್ಲಿ ಪ್ರದರ್ಶಿಸಬೇಕು ಎಂಬ ಒತ್ತಾಯವೂ ಕೇಳಿಬಂದಿತ್ತು. ಇವುಗಳ ನಡುವೆ ‘ವಿಕ್ರಮ್’ ಚಿತ್ರ ಕರ್ನಾಟಕದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಕನ್ನಡಿಗರು ಒಳ್ಳೆಯ ಚಿತ್ರವೊಂದರ ಕೈಹಿಡಿದಿದ್ದಾರೆ‌.‌ ಇದಕ್ಕೆ ಕಮಲ್ ಹಾಸನ್ ಕನ್ನಡದಲ್ಲೇ ಧನ್ಯವಾದ ಹೇಳಿದ್ದಾರೆ‌.

ಈ ಹಿಂದೆ ಚಿತ್ರತಂಡ ಪ್ರಚಾರಕ್ಕೆಂದು ಕರ್ನಾಟಕಕ್ಕೆ ಬಂದಿದ್ದಾಗ ಕಮಲ್ ಕನ್ನಡ ಮಾತನಾಡದೇ ಇರುವುದು ಟೀಕೆಗೆ ಗುರಿಯಾಗಿತ್ತು. ಇದೀಗ ಚಿತ್ರದ ಯಶಸ್ಸಿನ ಬೆನ್ನಲ್ಲೇ ಕನ್ನಡಿಗರಿಗೆ ವಿಡಿಯೋ ಸಂದೇಶದ ಮೂಲಕ ಧನ್ಯವಾದ ಹೇಳಿದ್ದಾರೆ ಕಮಲ್. ‘ಕನ್ನಡಿಗರು ಮೊದಲಿನಿಂದಲೂ ಒಳ್ಳೆಯ ಸಿನಿಮಾಗಳನ್ನು ಹಾಗೂ ಒಳ್ಳೆಯ ನಟರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅದೇ ರೀತಿ ವಿಕ್ರಮ್ ಸಿನಿಮಾವನ್ನು ಹಾಗೂ ನನ್ನನ್ನು ಬೆಂಬಲಿಸುತ್ತಿರುವುದು ಅತೀವ ಸಂತೋಷ ತಂದುಕೊಟ್ಟಿದೆ” ಎಂದಿದ್ದಾರೆ ಸ್ಟಾರ್ ನಟ.

ಇದನ್ನೂ ಓದಿ
Image
Rakshit Shetty: ಕರ್ನಾಟಕದ 100ಕ್ಕೂ ಅಧಿಕ ಕಡೆಗಳಲ್ಲಿ ‘777 ಚಾರ್ಲಿ’ ಪ್ರೀಮಿಯರ್​; ಹೊರರಾಜ್ಯದ ಪ್ರೇಕ್ಷಕರಿಂದ ಮೆಚ್ಚುಗೆ
Image
Vivek Agnihotri: ‘ದಿ ಕಾಶ್ಮೀರ್ ಫೈಲ್ಸ್’ ಸೀಕ್ವೆಲ್ ಬರಲಿದೆಯೇ? ವಿವೇಕ್ ಅಗ್ನಿಹೋತ್ರಿ ನೀಡಿದ್ರು ಉತ್ತರ
Image
Chiranjeevi Sarja: ಚಿತ್ರರಂಗಕ್ಕೆ ಚಿರು ಪುತ್ರ ರಾಯನ್​ ರಾಜ್​ ಸರ್ಜಾ ಎಂಟ್ರಿ ನೀಡುವ ಬಗ್ಗೆ ಅರ್ಜುನ್​ ಸರ್ಜಾ ಹೇಳಿದ್ದೇನು?
Image
Vikrant Rona: ಕಿಚ್ಚನ ‘ರಾ ರಾ ರಕ್ಕಮ್ಮ..’ ಹಾಡಿಗೆ ಹೆಜ್ಜೆ ಹಾಕಿದ ಬಾಲಿವುಡ್​ ಸ್ಟಾರ್​ ನಟ ರಿತೇಶ್​ ದೇಶಮುಖ್​

ಚಿತ್ರದ ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದ ಹೇಳಿರುವ ಕಮಲ್, ಗೆಲುವಿಗೆ ಸಹನಟರ ಪರಿಶ್ರಮ ಮುಖ್ಯ ಕಾರಣ ಎಂದು ನುಡಿದಿದ್ದಾರೆ. ಕೊನೆಯ ಮೂರು ನಿಮಿಷಗಳಲ್ಲಿ ಬೆಳ್ಳಿತೆರೆಯನ್ನೇ ನಡುಗಿಸಿದ ಸೂರ್ಯ ಅವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದು ತಮ್ಮ ಮೇಲಿನ ಪ್ರೀತಿಗಾಗಿ, ಅವರಿಗೆ ಧನ್ಯವಾದವನ್ನು ಈರ್ವರೂ ಜತೆಯಾಗಿ ನಡೆಸುವ ಮುಂದಿನ ಸಿನಿಮಾದ ಮೂಲಕ ತಿಳಿಸುತ್ತೇನೆ ಎಂದಿದ್ದಾರೆ ಕಮಲ್.

ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಪರಿಶ್ರಮ ಹೊಗಳಿದ ಕಮಲ್ ಹಾಸನ್​, ಅವರ ಪ್ರೀತಿ ಹಾಗೂ ಶ್ರದ್ಧೆ ಪ್ರತಿ ಫ್ರೇಮ್ ನಲ್ಲೂ ಕಾಣಿಸುತ್ತಿತ್ತು.ಅದೇ ರೀತಿ ಅಭಿಮಾನಿಗಳ ಪ್ರೀತಿ ಕೂಡ ಅಷ್ಟೇ ಅಗಾಧವಾಗಿದೆ. ಈ ಪ್ರೀತಿ ಮುಂದುವರೆಯಲಿ ಎಂದಿದ್ದಾರೆ. ಜತೆಗೆ ತಮ್ಮನ್ನು ತಾವು ‘ರಾಜ್ ಕಮಲ್ ಫಿಲ್ಮ್ಸ್ ನ ಕಾರ್ಮಿಕ ಎಂದು ಕರೆದುಕೊಂಡಿದ್ದಾರೆ ನಟ. ಕನ್ನಡದ ಜೊತೆಗೆ ಇತರ ಭಾಷೆಗಳಲ್ಲೂ ವಿಡಿಯೋ ಸಂದೇಶ ಹಂಚಿಕೊಂಡಿರುವ ನಟ, ಎಲ್ಲಾ ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!