Sandalwood: ಕಾಂತಾರದಂತೆ ಕ್ರೇಜ್ ಕ್ರಿಯೇಟ್ ಮಾಡಲಿದೆಯಂತೆ ಈ 'ಕರಿಹೈದ ಕರಿ ಅಜ್ಜ' ಸಿನಿಮಾ

Sandalwood: ಕಾಂತಾರದಂತೆ ಕ್ರೇಜ್ ಕ್ರಿಯೇಟ್ ಮಾಡಲಿದೆಯಂತೆ ಈ ‘ಕರಿಹೈದ ಕರಿ ಅಜ್ಜ’ ಸಿನಿಮಾ

TV9 Web
| Updated By: Rakesh Nayak Manchi

Updated on:Jan 14, 2023 | 7:49 PM

ಸುಧೀರ್ ಅತ್ತಾವರ್ ನಿರ್ದೇಶನದ ಕರಿಹೈದ ಕರಿ ಅಜ್ಜ ಸಿನ್ಮಾ ಇನ್ನೇನು ರಿಲೀಸ್​ಗೆ ರೆಡಿಯಾಗಿದೆ. ಈ ಸಿನ್ಮಾದಲ್ಲಿ ಬಾಲಿವುಡ್ ಹಾಗೂ ಸ್ಯಾಂಡಲ್​ವುಡ್ ನಟ-ನಟಿಯರು ಅಭಿನಯಿಸಿದ್ದಾರೆ.

ಬೆಂಗಳೂರು: ಸುಧೀರ್ ಅತ್ತಾವರ್ ನಿರ್ದೇಶನದ ಕರಿಹೈದ ಕರಿ ಅಜ್ಜ ಸಿನಿಮಾ (Karihaida Kari Ajja Film) ಇನ್ನೇನು ರಿಲೀಸ್​ಗೆ ರೆಡಿಯಾಗಿದೆ. ಈ ಸಿನ್ಮಾದಲ್ಲಿ ಬಾಲಿವುಡ್ ಹಾಗೂ ಸ್ಯಾಂಡಲ್​ವುಡ್ ನಟ-ನಟಿಯರು ಅಭಿನಯಿಸಿದ್ದಾರೆ. ನಟಿ ಭವ್ಯ ಹಾಗೂ ಶೃತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಶೃತಿ (Actress Shruthi), ದೈವತ್ವ ಗುಣಗಳಿರುವ ತನಿಯನ ಮೇಲೆ ತಾಯಿಯ ಪ್ರೀತಿ ಮತ್ತು ತಾಯಿ ಮೇಲೆ ತನಿಯನಿಗಿದ್ದ ಪ್ರೀತಿ ಅಪಾರವಾಗಿತ್ತು. ಇಂತಹ ತನಿಯನ ಸಾಕು ತಾಯಿಯಾಗಿ ಸಿನಿಮಾದಲ್ಲಿ ನಟಿಸಿರುವುದು ನನಗೆ ಹೆಮ್ಮೆಯ ವಿಚಾರವಾಗಿದೆ. ಈ ಸಿನಿಮಾದ ಮೂಲಕ ಉತ್ತಮ ಅನುಭವ ಸಿಕ್ಕಿದೆ. ಕಾಂತಾರ (Kantara) ದೈವದ ಸಿನಿಮಾ ಇಡೀ ಕನ್ನಡ ಚಿತ್ರರಂಗವನ್ನೇ ಗೆಲ್ಲಿಸಿತು ಅಂತ ನನ್ನ ಭಾವನೆಯಾಗಿದೆ ಎಂದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Jan 14, 2023 07:49 PM