AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Varisu Movie Review: ಇವ ಎಂಟರ್​​ಟೇನರ್ ವಾರಸುದಾರ; ಎಳೆದಾಟವೇ ಪ್ರೇಕ್ಷಕನಿಗೆ ಭಾರ

ವಾರಿಸು ಚಿತ್ರ ವಿಮರ್ಶೆ: ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ವಾರಿಸು’ ಸಿನಿಮಾ ರಿಲೀಸ್ ಆಗಿದೆ. ತಮಿಳಿನಲ್ಲಿ ರಶ್ಮಿಕಾ ನಟನೆಯ ಎರಡನೇ ಸಿನಿಮಾ ಇದು. ಈ ಚಿತ್ರದ ವಿಮರ್ಶೆ ಇಲ್ಲಿದೆ.

Varisu Movie Review: ಇವ ಎಂಟರ್​​ಟೇನರ್ ವಾರಸುದಾರ; ಎಳೆದಾಟವೇ ಪ್ರೇಕ್ಷಕನಿಗೆ ಭಾರ
Varisu Movie Review
TV9 Web
| Updated By: Digi Tech Desk|

Updated on:Jan 11, 2023 | 10:31 AM

Share

ಸಿನಿಮಾ: ವಾರಿಸು

ನಟನೆ: ದಳಪತಿ ವಿಜಯ್, ರಶ್ಮಿಕಾ ಮಂದಣ್ಣ, ಪ್ರಕಾಶ್ ರೈ, ಜಯಸುಧಾ, ಪ್ರಭು ಮೊದಲಾದವರು

ನಿರ್ದೇಶನ: ವಂಶಿ ಪೈಡಿಪಲ್ಲಿ

ನಿರ್ಮಾಣ: ದಿಲ್ ರಾಜು

ಸಂಗೀತ: ಎಸ್​. ಥಮನ್

ಸ್ಟಾರ್: 3/5

ನಿರ್ದೇಶಕ ವಂಶಿ ಪೈಡಿಪಲ್ಲಿ ಅವರು ತೆಲುಗು ಸಿನಿಮಾಗಳನ್ನು ನಿರ್ದೇಶನ ಮಾಡಿ ಭೇಷ್​ ಎನಿಸಿಕೊಂಡವರು. ಮಾಸ್ ಎಂಟರ್​​ಟೇನರ್​ ಚಿತ್ರಗಳನ್ನು ತೆರೆಮೇಲೆ ತರೋಕೆ ಅವರು ಎತ್ತಿದ ಕೈ. ಈಗ ತಮಿಳು ಹೀರೋ ದಳಪತಿ ವಿಜಯ್​ಗೆ ಆ್ಯಕ್ಷನ್ ಕಟ್ ಹೇಳಿರುವ ‘ವಾರಿಸು’ (ವಾರಸುದಾರ) ಚಿತ್ರ ರಿಲೀಸ್ ಆಗಿದೆ. ಇದೊಂದು ಕೌಟುಂಬಿಕ ಕಥಾಹಂದರದ ಸಿನಿಮಾ ಎಂಬುದು ಟ್ರೇಲರ್​ನಲ್ಲಿ ಗೊತ್ತಾಗಿತ್ತು. ಹಾಗಾದರೆ, ಈ ಸಿನಿಮಾ ನಿರೀಕ್ಷೆಯ ಮಟ್ಟ ತಲುಪಿದೆಯೇ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅದೊಂದು ಕೂಡು ಕುಟುಂಬ. ರಾಜೇಂದ್ರನ್ (ಶರತ್​ ಕುಮಾರ್​) ಈ ಕುಟುಂಬದ ಯಜಮಾನ. ಸಾವಿರಾರು ಕೋಟಿ ಆಸ್ತಿ ಹೊಂದಿರುವ ಈತನಿಗೆ ಮೂವರು ಮಕ್ಕಳು. ಆ ಪೈಕಿ ಕಿರಿಯವನೇ ವಿಜಯ್ ರಾಜೇಂದ್ರನ್​ (ದಳಪತಿ ವಿಜಯ್​). ಅಪ್ಪನ ಆಸ್ತಿಯಲ್ಲಿ ಒಂದು ಪೈಸೆಯೂ ಬೇಡ ಎಂದು ಮನೆ ಬಿಟ್ಟು ಹೋಗುತ್ತಾನೆ. ಉಳಿದಿಬ್ಬರು ಈ ಆಸ್ತಿಯ ವಾರಸುದಾರ ಆಗಲು ರೇಸ್​ಗೆ ಇಳಿಯುತ್ತಾರೆ. ದ್ವೇಷ ಹುಟ್ಟುತ್ತದೆ. ಹೀಗಿರುವಾಗಲೇ ವಿಜಯ್ ಮನೆಗೆ ಮರಳುತ್ತಾನೆ. ಹೀಗೆ ಮರಳೋಕೆ ಕಾರಣ ಏನು? ಆತ ಹೇಗೆ ವಾರಸುದಾರನಾಗುತ್ತಾನೆ? ಒಡೆಯುವ ಕುಟುಂಬ ಮತ್ತೆ ಹೇಗೆ ಒಂದಾಗುತ್ತದೆ ಅನ್ನೋದು ಸಿನಿಮಾದ ಕಥೆ.

ದಳಪತಿ ವಿಜಯ್ ಅವರು ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ‘ವಾರಿಸು’ ಚಿತ್ರಕ್ಕೆ ಅವರೇ ವಾರಸುದಾರ. ಚಿತ್ರದುದ್ದಕ್ಕೂ ಅವರು ಆವರಿಸಿಕೊಳ್ಳುತ್ತಾರೆ. ಫೈಟ್, ಕಾಮಿಡಿ, ಮಾಸ್ ಹಾಗೂ ತಮ್ಮ ಡ್ಯಾನ್ಸ್ ಮೂಲಕ ಸಾಕಷ್ಟು ಮನರಂಜನೆ ನೀಡುತ್ತಾರೆ. ವಿಜಯ್ ಫ್ಯಾನ್ಸ್​ಗೆ ಈ ಸಿನಿಮಾ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಓರ್ವ ಸಾಮಾನ್ಯ ಪ್ರೇಕ್ಷಕನಿಗೆ ‘ವಾರಿಸು’ ಇಷ್ಟವಾಗುತ್ತದೆಯೇ? ಅದನ್ನು ನೀವೇ ನಿರ್ಧರಿಸಬೇಕು.

ಸಿನಿಮಾದಲ್ಲಿ ಮಾಸ್ ಅಂಶಗಳಿವೆ. ಫೈಟ್ ಇದೆ. ಇದರ ಜತೆಗೆ ಎಳೆದಾಟವೂ ಇದೆ. ಸಿನಿಮಾದ ಅವಧಿ ಎರಡು ಗಂಟೆ ಐವತ್ತು ನಿಮಿಷ. ಈ ಸಿನಿಮಾ ನೋಡುವಾಗ ‘ಇದನ್ನು ವೆಬ್​ ಸೀರಿಸ್​ ಮಾಡಬಹುದಿತ್ತು’ ಎನ್ನುವ ಆಲೋಚನೆ ಪ್ರೇಕ್ಷಕನ ತಲೆಯಲ್ಲಿ ಹಾದು ಹೋದರೂ ಅಚ್ಚರಿ ಏನಿಲ್ಲ. ಹೀಗಾಗಿ, ಪ್ರೇಕ್ಷಕನಿಗೆ ಆಗಾಗ ಪ್ರಯಾಸ ಎನಿಸುತ್ತದೆ. ಹೀಗಾಗಿ, ನಿರ್ದೇಶಕರು ಹಲವು ಅನಾವಶ್ಯಕ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಬಹುದಿತ್ತು. ಸಿದ್ಧ ಸೂತ್ರಗಳನ್ನು ಬಿಟ್ಟು ಬೇರೆಯ ಪ್ರಯತ್ನ ಇಲ್ಲಿ ಆಗಿಯೇ ಇಲ್ಲ. ಹೀಗಾಗಿ, ಈ ಸಿನಿಮಾ ನೋಡುವಾಗ ತೆಲುಗಿನ ಅನೇಕ ಚಿತ್ರಗಳ ಕಥೆಯ ಎಳೆ ನೆನಪಾಗಬಹುದು. ವಿಜಯ್ ಹಳೆಯ ಸಿನಿಮಾಗಳ ಡೈಲಾಗ್​​ಗಳನ್ನು ಇಲ್ಲಿ ಭಿನ್ನ ರೀತಿಯಲ್ಲಿ ಬಳಕೆ ಮಾಡಲಾಗಿದೆ. ಅದು ನಗುವಿನ ಕಿಕ್ ಕೊಡುತ್ತದೆ.

ಒಂದು ಆಗರ್ಭ ಶ್ರೀಮಂತರ ಮನೆ ಹೇಗಿರುತ್ತದೆ ಎಂಬುದನ್ನು ತೋರಿಸಲು ನಿರ್ಮಾಪಕ ದಿಲ್ ರಾಜ್ ಅವರು ಸಾಕಷ್ಟು ಹಣ ಸುರಿದಿದ್ದಾರೆ. ಇಡೀ ಚಿತ್ರದಲ್ಲಿ ವೈಭವೀಕರಣವೇ ಎದ್ದು ಕಂಡು, ಸಿನಿಮಾದ ನಿಜವಾದ ಆಶಯ ಹಿನ್ನಲೆಗೆ ಸರಿಯುತ್ತದೆ. ಕಡ್ಡಿಯಲ್ಲಿ ಹೋಗುವುದನ್ನು ಕೊಡಲಿಯಲ್ಲೇ ಹೋಗಿಸಬೇಕು ಎಂದು ನಿರ್ದೇಶಕರು ಹಾಗೂ ನಿರ್ಮಾಪಕರು ನಿರ್ಧರಿಸಿದಂತಿದೆ. ವೈಭವೀಕರಣವೇ ನಮ್ಮ ಧ್ಯೇಯ ಎಂದು ಸಿನಿಮಾ ಮಾಡಿದಂತೆ ಕಾಣುತ್ತದೆ. ಸುಖಾಸುಮ್ಮನೆ ಹುಡಿಯಾದ ಕಾರುಗಳಿಗೆ ಇಲ್ಲಿ ಲೆಕ್ಕವೇ ಇಲ್ಲ.

ಇದನ್ನೂ ಓದಿ: ‘ವಾರಿಸು’ ಸಿನಿಮಾದಲ್ಲಿ ನಟಿಸಲು 150 ಕೋಟಿ ರೂಪಾಯಿ ಸಂಭಾವನೆ ಪಡೆದ ದಳಪತಿ ವಿಜಯ್​

ವಿಜಯ್ ತಂದೆಯ ಪಾತ್ರದಲ್ಲಿ ಶರತ್​ಕುಮಾರ್ ಅವರದ್ದು ಪ್ರಬುದ್ಧ ನಟನೆ. ಪ್ರಕಾಶ್ ರೈ ಅವರು ನೆಗೆಟಿವ್ ರೋಲ್​ನ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಕಥಾ ನಾಯಕನ ಸಹೋದರ ಅಜಯ್ ರಾಜೇಂದ್ರನ್, ಜೈ ರಾಜೇಂದ್ರನ್ ಪಾತ್ರದಲ್ಲಿ ಶ್ಯಾಮ್ ಹಾಗೂ ಶ್ರೀಕಾಂತ್ ಇಷ್ಟವಾಗುತ್ತಾರೆ. ಯೋಗಿ ಬಾಬು ಅವರು ತೆರೆಮೇಲೆ ಇದ್ದಷ್ಟು ಹೊತ್ತು ಕಾಮಿಡಿ ಕಿಕ್ ಕೊಡುತ್ತಾರೆ. ಜಯಸುಧಾ, ಪ್ರಭು ಅವರು ಪೋಷಕ ಪಾತ್ರದಲ್ಲಿ ಜವಾಬ್ದಾರಿಯುತವಾಗಿ ನಟಿಸಿದ್ದಾರೆ. ಎಸ್​.ಜೆ. ಸೂರ್ಯ ಅವರು ಕೆಲವೇ ನಿಮಿಷ ಬಂದು ಹೋದರೂ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ. ನಾಯಕಿ ರಶ್ಮಿಕಾ ಮಂದಣ್ಣ ಅವರ ಪಾತ್ರ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ. ಎಸ್​. ತಮನ್ ಸಂಗೀತ ಕೆಲಸ ಮಾಡಿದೆ. ಕಾರ್ತಿಕ್ ಪಲಾನಿ ಛಾಯಾಗ್ರಾಹಣ ಕಣ್ಣಿಗೆ ಮುದ ನೀಡುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:25 am, Wed, 11 January 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ