Veera Simha Reddy: ಬಾಲಯ್ಯ-ದುನಿಯಾ ವಿಜಿ ನಟನೆಯ ‘ವೀರ ಸಿಂಹ ರೆಡ್ಡಿ’ ಚಿತ್ರಕ್ಕೆ ಭರ್ಜರಿ ಓಪನಿಂಗ್; ಹೇಗಿದೆ ಫಸ್ಟ್ ಹಾಫ್?
Veera Simha Reddy First Half Review: ದುನಿಯಾ ವಿಜಯ್ ಅವರು ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಆದ್ದರಿಂದ ಅವರ ಫ್ಯಾನ್ಸ್ ವಲಯದಲ್ಲೂ ಈ ಚಿತ್ರದ ಕ್ರೇಜ್ ಜೋರಾಗಿದೆ.
ನಂದಮೂರಿ ಬಾಲಕೃಷ್ಣ (Nandamuri Balakrishna) ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ವೀರ ಸಿಂಹ ರೆಡ್ಡಿ’ ಇಂದು (ಜ.12) ಬಿಡುಗಡೆ ಆಗಿದೆ. ತೆಲುಗಿನ ಈ ಸಿನಿಮಾಗೆ ಅದ್ದೂರಿ ಓಪನಿಂಗ್ ಸಿಕ್ಕಿದೆ. ಅನೇಕ ಕಡೆಗಳಲ್ಲಿ ಮುಂಜಾನೆಯೇ ಶೋ ಆರಂಭ ಆಗಿದೆ. ಬಾಲಯ್ಯ (Balayya) ಅಭಿಮಾನಿಗಳು ಮುಗಿಬಿದ್ದು ಈ ಚಿತ್ರವನ್ನು ನೋಡುತ್ತಿದ್ದಾರೆ. ಕನ್ನಡದ ಖ್ಯಾತ ನಟ ದುನಿಯಾ ವಿಜಯ್ (Duniya Vijay) ಕೂಡ ಈ ಸಿನಿಮಾದಲ್ಲಿ ನಟಿಸಿರುವುದರಿಂದ ಕರ್ನಾಟಕದಲ್ಲೂ ಚಿತ್ರದ ಹೈಪ್ ಹೆಚ್ಚಾಗಿದೆ. ಸಂಕ್ರಾಂತಿ ಪ್ರಯುಕ್ತ ಬಿಡುಗಡೆ ಆಗಿರುವ ‘ವೀರ ಸಿಂಹ ರೆಡ್ಡಿ’ ಸಿನಿಮಾದ ಫಸ್ಟ್ ಹಾಫ್ ಹೇಗಿದೆ ಎಂಬುದು ಈಗ ರಿವೀಲ್ ಆಗಿದೆ.
ವೀರ ಸಿಂಹ ರೆಡ್ಡಿ ಚಿತ್ರದ ಮೊದಲಾರ್ಧದಲ್ಲಿ ಏನೆಲ್ಲ ಹೈಲೈಟ್ ಆಗಿದೆ?
- ಪಕ್ಕಾ ಮಾಸ್ ಶೈಲಿಯಲ್ಲಿ ವೀರ ಸಿಂಹ ರೆಡ್ಡಿ ಸಿನಿಮಾ ಮೂಡಿ ಬಂದಿದೆ. ಆ ರೀತಿಯ ಮನರಂಜನೆ ಬಯಸುವವರಿಗೆ ಸಿನಿಮಾ ಹೇಳಿ ಮಾಡಿಸಿದಂತಿದೆ.
- ನಂದಮೂರಿ ಬಾಲಕೃಷ್ಣ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಂದೆ ಹಾಗೂ ಮಗನ ಪಾತ್ರದಲ್ಲಿ ಅವರು ಮಿಂಚಿದ್ದಾರೆ.
- ಭಯ ಹುಟ್ಟಿಸುವಂತಹ ವಿಲನ್ ಪಾತ್ರದಲ್ಲಿ ದುನಿಯಾ ವಿಜಯ್ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಗಮನ ಸೆಳೆಯುತ್ತಿದೆ. ಮ್ಯಾನರಿಸಂ ಭಿನ್ನವಾಗಿದೆ.
- ದುನಿಯಾ ವಿಜಯ್ ಹಾಗೂ ನಂದಮೂರಿ ಮುಖಾಮುಖಿ ಆಗುವುದನ್ನು ನೋಡಬೇಕು ಎಂದು ಪ್ರೇಕ್ಷಕರು ಕಾದಿದ್ದರು. ಅದು ಮೊದಲಾರ್ಧದಲ್ಲೇ ಸಿಗುತ್ತದೆ. ಅನೇಕ ಬಾರಿ ಇಬ್ಬರ ಮಧ್ಯೆ ಫೈಟ್ ನಡೆಯುತ್ತದೆ.
- ಇಸ್ತಾಂಬೂಲ್ ಹಾಗೂ ಆಂಧ್ರ ಪ್ರದೇಶದಲ್ಲಿ ಕಥೆ ಸಾಗುತ್ತದೆ. ಮಾಸ್ ಶೈಲಿಯಲ್ಲಿ ಮೊದಲಾರ್ಧ ಮೂಡಿ ಬಂದಿದೆ.
- ತಂದೆ ಹಾಗೂ ಮಗನ ಪಾತ್ರದ ಎಂಟ್ರಿ ಫೈಟಿಂಗ್ ಮೂಲಕವೇ ಆಗುತ್ತದೆ. ಇದು ಅಭಿಮಾನಿಗಳಿಗೆ ಹೆಚ್ಚು ಖುಷಿ ನೀಡುತ್ತದೆ.
- ಮೊದಲಾರ್ಧದಲ್ಲಿ ಶ್ರುತಿ ಹಾಸನ್ಗೆ ಹೆಚ್ಚಿನ ಸ್ಕ್ರೀನ್ಸ್ಪೇಸ್ ಇಲ್ಲ. ಅವರ ಎಂಟ್ರಿ ದೃಶ್ಯ ಕಾಮಿಡಿಯಾಗಿದೆ.
- ವರಲಕ್ಷ್ಮೀ ಶರತ್ಕುಮಾರ್ ಪಾತ್ರಕ್ಕೆ ನೆಗೆಟಿವ್ ಶೇಡ್ ಇದೆ. ಮಧ್ಯಂತರದಲ್ಲಿ ಅವರು ಕಥೆಗೆ ದೊಡ್ಡ ಟ್ವಿಸ್ಟ್ ಕೊಡುತ್ತಾರೆ.
- ಮೊದಲಾರ್ಧದಲ್ಲಿ ಐದಾರು ಫೈಟ್ ದೃಶ್ಯಗಳಿವೆ. ಬಾಲಯ್ಯ ಅವರು ತಮ್ಮ ಮಾಸ್ ಅವತಾರ ತೋರಿಸುವುದರ ಜತೆಗೆ ಡೈಲಾಗ್ ಮೂಲಕ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ.
ಇದನ್ನೂ ಓದಿ
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:33 am, Thu, 12 January 23