AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Veera Simha Reddy: ‘ವೀರ ಸಿಂಹ ರೆಡ್ಡಿ’ ಟ್ರೇಲರ್​ ರಿಲೀಸ್​: ಬಾಲಯ್ಯ ಜತೆ ಗಮನ ಸೆಳೆದ ದುನಿಯಾ ವಿಜಯ್​ ಮಾಸ್​ ಗೆಟಪ್​

Veera Simha Reddy trailer: ‘ವೀರ ಸಿಂಹ ರೆಡ್ಡಿ’ ಸಿನಿಮಾಗೆ ಗೋಪಿಚಂದ್​ ಮಲಿನೇನಿ ನಿರ್ದೇಶನ ಮಾಡಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಈ ಚಿತ್ರ ನಿರ್ಮಾಣ ಆಗಿದ್ದು, ಟ್ರೇಲರ್​ ಸಖತ್​ ಸದ್ದು ಮಾಡುತ್ತಿದೆ.

Veera Simha Reddy: ‘ವೀರ ಸಿಂಹ ರೆಡ್ಡಿ’ ಟ್ರೇಲರ್​ ರಿಲೀಸ್​: ಬಾಲಯ್ಯ ಜತೆ ಗಮನ ಸೆಳೆದ ದುನಿಯಾ ವಿಜಯ್​ ಮಾಸ್​ ಗೆಟಪ್​
ದುನಿಯಾ ವಿಜಯ್, ನಂದಮೂರಿ ಬಾಲಕೃಷ್ಣ
TV9 Web
| Updated By: ಮದನ್​ ಕುಮಾರ್​|

Updated on: Jan 06, 2023 | 9:49 PM

Share

ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ವೀರ ಸಿಂಹ ರೆಡ್ಡಿ’ (Veera Simha Reddy) ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಟ್ರೇಲರ್​ ರಿಲೀಸ್​ ಆಗಿದ್ದು, ಸಿನಿಪ್ರಿಯರ ವಲಯದಲ್ಲಿ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ಈ ಚಿತ್ರದ ಹೀರೋ. ಅವರ ಎದುರು ವಿಲನ್​ ಆಗಿ ಅಬ್ಬರಿಸೋದು ಕನ್ನಡದ ನಟ ದುನಿಯಾ ವಿಜಯ್​. ತೆಲುಗಿನಲ್ಲಿ ದುನಿಯಾ ವಿಜಯ್​ ನಟಿಸಿದ ಮೊದಲ ಸಿನಿಮಾ ಇದು. ಆ ಕಾರಣದಿಂದ ಅವರ ಅಭಿಮಾನಿಗಳ ಮನದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ. ‘ವೀರ ಸಿಂಹ ರೆಡ್ಡಿ’ ಟ್ರೇಲರ್​ನಲ್ಲಿ ದುನಿಯಾ ವಿಜಯ್​ (Duniya Vijay) ಅವರ ಉಗ್ರಾವತಾರ ಕಾಣಿಸಿದೆ. ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎಂದಿನಂತೆ ಖಡಕ್​ ಡೈಲಾಗ್​ಗಳ ಮೂಲಕ ಬಾಲಯ್ಯ ಘರ್ಜಿಸಿದ್ದಾರೆ.

ಹೀರೋ ಆಗುವುದಕ್ಕೂ ಮುನ್ನ ದುನಿಯಾ ವಿಜಯ್​ ಅವರು ನೆಗೆಟಿವ್​ ಶೇಡ್​ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ತೆಲುಗಿನಲ್ಲಿಯೂ ಅವರು ವಿಲನ್​ ರೋಲ್​ ಮೂಲಕ ಖಾತೆ ತೆರೆಯುತ್ತಿದ್ದಾರೆ. ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ಬಾಲಯ್ಯ ಎದುರು ಅವರು ಮುಖಾಮುಖಿ ಆಗುವ ದೃಶ್ಯಗಳನ್ನು ದೊಡ್ಡ ಪರದೆ ಮೇಲೆ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಟ್ರೇಲರ್​ ಲಕ್ಷಾಂತರ ಬಾರಿ ವೀಕ್ಷಣೆ ಕಂಡು ಧೂಳೆಬ್ಬಿಸುತ್ತಿದೆ.

ಇದನ್ನೂ ಓದಿ: Duniya Vijay: ‘ಭೀಮ’ ಸೆಟ್​ಗೆ ಭೇಟಿ ನೀಡಿ ದುನಿಯಾ ವಿಜಯ್​ಗೆ ವಿಶ್​ ಮಾಡಿದ ಶಿವಣ್ಣ-ಗೀತಾ ದಂಪತಿ

ಇದನ್ನೂ ಓದಿ
Image
Duniya Vijay: ದುನಿಯಾ ವಿಜಯ್ ಮೇಲೆ ಹಲ್ಲೆ ಪ್ರಕರಣ; ಪಾನಿಪುರಿ ಕಿಟ್ಟಿ ವಿರುದ್ಧ ಹೊಸ ಎಫ್​ಐಆರ್​
Image
Duniya Vijay: ‘ಭೀಮ’ ಸೆಟ್​ಗೆ ಭೇಟಿ ನೀಡಿ ದುನಿಯಾ ವಿಜಯ್​ಗೆ ವಿಶ್​ ಮಾಡಿದ ಶಿವಣ್ಣ-ಗೀತಾ ದಂಪತಿ
Image
ದುನಿಯಾ ವಿಜಯ್​ ನಿರ್ದೇಶನದ ‘ಭೀಮ’ ಚಿತ್ರದ ಮೇಕಿಂಗ್ ವಿಡಿಯೋ ಕಂಡು ಕಣ್ಣರಳಿಸಿದ ಫ್ಯಾನ್ಸ್​
Image
ದುನಿಯಾ ವಿಜಯ್​ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ಶುಭ ಕೋರಿದ ಅಭಿಮಾನಿ; ಇಲ್ಲಿವೆ ಫೋಟೋಗಳು​

‘ವೀರ ಸಿಂಹ ರೆಡ್ಡಿ’ ಸಿನಿಮಾಗೆ ಗೋಪಿಚಂದ್​ ಮಲಿನೇನಿ ನಿರ್ದೇಶನ ಮಾಡಿದ್ದಾರೆ. ಎಸ್​. ತಮನ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ಶ್ರುತಿ ಹಾಸನ್​ ನಟಿಸಿದ್ದಾರೆ. ಪಿ. ರವಿಶಂಕರ್​, ವರಲಕ್ಷ್ಮೀ ಶರತ್​ಕುಮಾರ್​, ಮುರಳಿ ಶರ್ಮಾ ಮುಂತಾದವರು ಕೂಡ ಬಣ್ಣ ಹಚ್ಚಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಟ್ರೇಲರ್​ನಲ್ಲಿ ಮೇಕಿಂಗ್​ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ಶ್ರೀಲೀಲಾ ನಟನೆ; ಯಾವ ಪಾತ್ರ? ಇಲ್ಲಿದೆ ಟ್ವಿಸ್ಟ್..​

‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಆಗುತ್ತಿರುವುದರಿಂದ ಭರ್ಜರಿ ಕಲೆಕ್ಷನ್​ ಆಗುವ ನಿರೀಕ್ಷೆ ಇದೆ. ಬಾಕ್ಸ್​ ಆಫೀಸ್​ನಲ್ಲಿ ಮೊದಲ ದಿನ ಎಷ್ಟು ಕಮಾಯಿ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

2021ರ ಡಿಸೆಂಬರ್​ನಲ್ಲಿ ಬಾಲಯ್ಯ ಅವರು ‘ಅಖಂಡ’ ಚಿತ್ರದ ಮೂಲಕ ದೊಡ್ಡ ಗೆಲುವು ಕಂಡಿದ್ದರು. 2022ರಲ್ಲಿ ಅವರ ಯಾವ ಚಿತ್ರವೂ ಬಿಡುಗಡೆ ಆಗಲಿಲ್ಲ. ಈಗ ‘ವೀರ ಸಿಂಹ ರೆಡ್ಡಿ’ ಚಿತ್ರ ರಿಲೀಸ್​ ಆಗುತ್ತಿದೆ. ಈ ಸಿನಿಮಾದ ‘ಜೈ ಬಾಲಯ್ಯ..’ ಹಾಡು ಅವರ ಅಭಿಮಾನಿಗಳ ಮನ ಗೆದ್ದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು