Duniya Vijay: ದುನಿಯಾ ವಿಜಯ್ ಮೇಲೆ ಹಲ್ಲೆ ಪ್ರಕರಣ; ಪಾನಿಪುರಿ ಕಿಟ್ಟಿ ವಿರುದ್ಧ ಹೊಸ ಎಫ್ಐಆರ್
FIR on Panipuri Kitty: 2018ರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುನಿಯಾ ವಿಜಯ್ ಅವರು ಪ್ರತಿದೂರು ನೀಡಿದ್ದಾರೆ. ಕೋರ್ಟ್ ಆದೇಶದ ಮೇರೆಗೆ ಹೊಸದಾಗಿ ಎಫ್ಐಆರ್ ದಾಖಲಿಸಲಾಗಿದೆ.
ನಟ ದುನಿಯಾ ವಿಜಯ್ ಮತ್ತು ಪಾನಿಪುರಿ ಕಿಟ್ಟಿ (Panipuri Kitty) ನಡುವಿನ ಕಿರಿಕ್ ಈಗ ಹೊಸ ತಿರುವು ಪಡೆದುಕೊಂಡಿದೆ. 2018ರಲ್ಲಿ ಬೆಂಗಳೂರಿನ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆದಿತ್ತು. ಈ ವೇಳೆ ದುನಿಯಾ ವಿಜಯ್ ಮಗನ ಮೇಲೆ ಪಾನಿಪುರಿ ಕಿಟ್ಟಿ ತಂಡದವರು ಹಲ್ಲೆ ಮಾಡಿದ್ದರು ಎಂಬ ಆರೋಪ ಎದುರಾಗಿತ್ತು. ನಂತರ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ದುನಿಯಾ ವಿಜಯ್ (Duniya Vijay) ಹಲ್ಲೆ ಮಾಡಿದ್ದರು ಎಂದು ದೂರು ದಾಖಲಾಗಿತ್ತು. ಸಾಕ್ಷ್ಯದ ಕೊರತೆಯಿಂದ ಪ್ರಕರಣ ಕ್ಲೋಸ್ ಆಗಿತ್ತು. ಆದರೆ ಈಗ ದುನಿಯಾ ವಿಜಯ್ ಅವರು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿದೂರು ದಾಖಲಿಸಿದ್ದಾರೆ. ಕೋರ್ಟ್ ಆದೇಶದ ಮೇರೆಗೆ ಪಾನಿಪುರಿ ಕಿಟ್ಟಿ ವಿರುದ್ಧ ಹೊಸದಾಗಿ ಎಫ್ಐಆರ್ (FIR) ದಾಖಲಿಸಲಾಗಿದೆ.
ಪಾನಿಪುರಿ ಕಿಟ್ಟಿ ಪ್ರತಿಕ್ರಿಯೆ:
ಹೊಸದಾಗಿ ಎಫ್ಐಆರ್ ದಾಖಲಾಗಿರುವುದಕ್ಕೆ ಪಾನಿಪುರಿ ಕಿಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ‘ಈ ಹಿಂದೆ ಕೂಡ ನ್ಯಾಯಾಲಕ್ಕೆ ಹೋಗಿದ್ದೆವು. ಈಗ ಮತ್ತೆ ಎಫ್ಐಆರ್ ಆಗಿದೆ. ಕೋರ್ಟ್ನಲ್ಲಿ ನಮಗೆ ನಂಬಿಕೆ ಇದೆ. ಅಲ್ಲಿ ಯಾವ ರೀತಿಯ ತೀರ್ಪು ಬರುತ್ತೋ ಅದರಂತೆ ನಡೆದುಕೊಳ್ಳುತ್ತೇವೆ’ ಎಂದು ಪಾನಿಪುರಿ ಕಿಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ಆಟೋದಲ್ಲಿ ಪ್ರಯಾಣಿಸಿದ ನಟ ದುನಿಯಾ ವಿಜಯ್; ಇದರ ಹಿಂದಿದೆ ಒಂದೊಳ್ಳೆಯ ಉದ್ದೇಶ
ರಾಜಿ ಆಗಲು ಸಿದ್ಧವಿಲ್ಲ:
ಹಳೇ ಪ್ರಕರಣ ಆಗಿದ್ದರಿಂದ ರಾಜಿ ಮಾಡಿಕೊಳ್ಳುತ್ತಾರಾ ಎಂಬ ಪ್ರಶ್ನೆ ಎದುರಾಗುವುದು ಸಹಜ. ಆದರೆ ರಾಜಿ ಆಗಲು ಸಾಧ್ಯವಿಲ್ಲ ಎಂದು ಪಾನಿಪುರಿ ಕಿಟ್ಟಿ ಹೇಳಿದ್ದಾರೆ. ‘ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಸರಿ ಮಾಡಿರುವವರಿಗೆ ಒಳ್ಳೆಯದು ಆಗಲೇಬೇಕು. ಕೋರ್ಟ್ ಏನು ಹೇಳುತ್ತೋ ಅದರಂತೆ ನಡೆದುಕೊಳ್ಳುತ್ತೇವೆ. ಯಾರೂ ಕೂಡ ನಮ್ಮನ್ನು ರಾಜಿಗೆ ಕರೆದಿಲ್ಲ. ಕರೆದರೂ ನಾವು ರಾಜಿಗೆ ಹೋಗುವುದಿಲ್ಲ’ ಎಂದಿದ್ದಾರೆ ಪಾನಿ ಪುರಿ ಕಿಟ್ಟಿ.
ಇದನ್ನೂ ಓದಿ: Duniya Vijay: ‘ಭೀಮ’ ಸೆಟ್ಗೆ ಭೇಟಿ ನೀಡಿ ದುನಿಯಾ ವಿಜಯ್ಗೆ ವಿಶ್ ಮಾಡಿದ ಶಿವಣ್ಣ-ಗೀತಾ ದಂಪತಿ
ಹೈದರಾಬಾದ್ನಲ್ಲಿ ದುನಿಯಾ ವಿಜಯ್:
ಸಿನಿಮಾ ಕೆಲಸಗಳ ಸಲುವಾಗಿ ದುನಿಯಾ ವಿಜಯ್ ಅವರು ಹೈದರಾಬಾದ್ನಲ್ಲಿ ಇದ್ದಾರೆ. ಹೊಸ ಎಫ್ಐಆರ್ ಕುರಿತಂತೆ ಅವರ ಕಡೆಯಿಂದ ಸ್ಯದಕ್ಕೆ ಪ್ರತಿಕ್ರಿಯೆ ಸಿಕ್ಕಿಲ್ಲ. ತೆಲುಗಿನ ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ದುನಿಯಾ ವಿಜಯ್ ಅವರು ನಂದಮೂರಿ ಬಾಲಕೃಷ್ಣ ಜೊತೆ ನಟಿಸಿದ್ದಾರೆ. ಈ ಚಿತ್ರ 2023ರ ಜನವರಿ 12ರಂದು ರಿಲೀಸ್ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:50 pm, Tue, 13 December 22