ದುನಿಯಾ ವಿಜಿ ಮತ್ತು ಪಾನಿಪುರಿ ಕಿಟ್ಟಿ ನಡುವಿನ ಡಿಚ್ಚಿ ಕೇಸ್ ಮತ್ತೆ ಮುನ್ನಲೆಗೆ: 2018ರಲ್ಲಿ ಆಗಿದ್ದೇನು?
ನಟ ದುನಿಯಾ ವಿಜಯ್ ಮತ್ತು ಪಾನಿಪುರಿ ಕಿಟ್ಟಿ (Panipuri Kitty) ನಡುವಿನ ಕಿರಿಕ್ ಈಗ ಹೊಸ ತಿರುವು ಪಡೆದುಕೊಂಡಿದೆ.
ಸ್ಯಾಂಡಲ್ವುಡ್ ನಟ ದುನಿಯಾ ವಿಜಿ(Duniya Vijay) ಮತ್ತು ಪಾನಿಪುರಿ ಕಿಟ್ಟಿ(Panipuri Kitty) ನಡುವಿನ ಡಿಚ್ಚಿ ಕೇಸ್ ಮತ್ತೆ ಮುನ್ನಲೆಗೆ ಬಂದಿದೆ. ದುನಿಯಾ ವಿಜಿ 2018 ರಲ್ಲಿ ಘಟನೆ ನಡೆದ ಸಂದರ್ಭ ದಾಖಲಿಸಿದ್ದ NCR ಗೆ ಮತ್ತೆ ಮರುಜೀವ ಸಿಕ್ಕಿದೆ. ದುನಿಯಾ ವಿಜಿ ಐಪಿಸಿ ಕಲಂ 427 ಮತ್ತು 506 ಸಹಿತ 34 221 ಕಲಂಗಳ ಅಡಿಯಲ್ಲಿ, ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯದ ಅನುಮತಿ ಕೋರಿದ್ದು, ನ್ಯಾಯಾಲಯವು FIR ದಾಖಲಿಸಲು ಅನುಮತಿ ನೀಡಿ ಆದೇಶಿಸಿದೆ.
ಎಫ್ಐಆರ್ ದಾಖಲಿಸುವಂತೆ ಹೈಕೋರ್ಟ್ ಗೆ ನಿರ್ದೇಶನ ಕೋರಿ ಖಾಸಗಿ ದೂರು ದಾಖಲಿಸಿ ಅರ್ಜಿ ಹಾಕಿದ್ದರು. ಇದರಿಂದ ಕರ್ನಾಟಕ ಹೈಕೋರ್ಟ್ ಆದೇಶದ ಅನ್ವಯ ACMM ನ್ಯಾಯಲಯದಿಂದ ಠಾಣೆಯಲ್ಲಿ 2018 ರಲ್ಲಿ ಪ್ರಕರಣದ ದಾಖಲಿಸಿದ ಪ್ರಕರಣದ ಹಿನ್ನಲೆ, ಅಂದು ಸೆಪ್ಟಂಬರ್ 23 ರ 2018 ರಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದುನಿಯಾ ವಿಜಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಗಂಭೀರವಲ್ಲದ ಪ್ರಕರಣವೆಂದು NCR ದಾಖಲಾಗಿತ್ತು. ಇದೀಗ ದುನಿಯಾ ವಿಜಿ ಐಪಿಸಿ ಕಲಂ 427 ಮತ್ತು 506 ಸಹಿತ 34 221 ಕಲಂಗಳ ಅಡಿಯಲ್ಲಿ, ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯದ ಅನುಮತಿ ಕೋರಿದ್ದು, ನ್ಯಾಯಾಲಯವು FIR ದಾಖಲಿಸಲು ಅನುಮತಿ ನೀಡಿ ಆದೇಶಿಸಿದೆ.
ಹೈಕೋರ್ಟ್ ಆದೇಶದಂತೆ ಐಪಿಸಿ ಸೆಕ್ಷನ್ 427,506 ಸಹಿತ 34,221 ಕಲಂ ಅಡಿ ಪಾನಿಪುರಿ ಕಿಟ್ಟಿ ಹಾಗೂ ಮಾರುತಿ ಗೌಡ ವಿರುದ್ದ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಂತರ ಪೊಲೀಸರು ಪಾನಿಪುರಿ ಕಿಟ್ಟಿ ಹಾಗೂ ಮಾರುತಿ ಗೌಡಗೆ ನೋಟಿಸ್ ನೀಡಿ ಶೇಷಾದ್ರಿಪುರಂ ಎಸಿಪಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಕಳುಹಿಸಿದ್ದಾರೆ. ತನಿಖೆಗಾಗಿ ಪೊಲೀಸರು ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ತನಿಖೆಗೆ ಸಹಕರಿಸುವುದಾಗಿ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಹೇಳಿಕೆ ನೀಡಿ ಪೊಲೀಸ್ ಠಾಣೆಯಿಂದ ತೆರಳಿದ್ದಾರೆ.
ಪ್ರಕರಣದ ಹಿನ್ನೆಲೆ
2018ರ ಡಿಸೆಂಬರ್ 23 ರಂದು ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಕಾಂಪಿಟೇಷನ್ ನಡೆಯುತ್ತಿತ್ತು. ಕಾರ್ಯಕ್ರಮವನ್ನು ಮುಗಿಸಿಕೊಂಡು ಹೋಗುತ್ತಿದ್ದಾಗ ಮಾರುತಿಗೌಡ ಎಂಬಾತ ವಿಜಿ ಮಗ ಹಿಂದೆ ಬರುತ್ತಿರಬೇಕಾದರೆ ಏನೋ ನಿನ್ನದು ಜಾಸ್ತಿ ಆಯಿತು, ಈ ವಯಸ್ಸಿಗೆ ಫಿಲ್ಮನಲ್ಲಿ ಡೈಲಾಗ್ ಹೊಡೆದುಕೊಂಡು ತುಂಬಾ ಮೆರೆಯುತ್ತಿದ್ದೀಯಾ, ನಿನ್ನ ಮತ್ತು ನಿಮ್ಮ ಅಪ್ಪನನ್ನು ಕೊಂದು ಬಿಡುತ್ತೇನೆಂದು ಬೆದರಿಕೆ ಹಾಕಿದ್ದಾಗಿ ಆರೋಪಿಸಿದ್ದು, ಈ ವೇಳೆ ಇದನ್ನು ಕೇಳಿಸಿಕೊಂಡ ಅಭಿಮಾನಿಗಳು ಮಾರುತಿ ಜೊತೆ ಗಲಾಟೆ ಮಾಡಿದ್ದಾರೆ.
ಈ ವೇಳೆ ದುನಿಯಾ ವಿಜಯ್ ಮಧ್ಯೆ ಪ್ರವೇಶಿಸಿ ಮಾರುತಿಗೌಡನನ್ನು ರಕ್ಷಣೆ ಮಾಡಿ ತಮ್ಮ ಕಾರಿನಲ್ಲಿ ಕರೆದೊಯ್ದಿದ್ದರು. ಕಾರಿನಲ್ಲಿ ಹೋಗುವಾಗ ಮಾರುತಿಗೌಡಗೆ ತನ್ನ ಚಿಕ್ಕಪ್ಪ ಪಾನಿಪೂರಿ ಕಿಟ್ಟಿ ಕರೆ ಮಾಡಿದ್ದರು. ಆಗ ಜೊತೆಗಿದ್ದ ನಟ ದುನಿಯಾ ವಿಜಯ್ ಫೋನ್ ಕಿತ್ತುಕೊಂಡು ಮಾತನಾಡಿದ್ದಾರೆ. ಇಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಈ ಮಧ್ಯೆ ಪಾನಿಪೂರಿ ಕಿಟ್ಟಿ ಅಂಬೇಡ್ಕರ್ ಭವನಕ್ಕೆ ಬಾ ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗೆಂದು ವಿಜಿ ದೂರಿನಲ್ಲಿ ಉಲ್ಲೇಖಿಸಿದ್ದರು.
ಕಿಟ್ಟಿ ಗ್ಯಾಂಗ್ ವಿರುದ್ಧ ಆರೋಪ
ಈ ಮಧ್ಯೆ ಗಲಾಟೆಯ ಸುದ್ದಿ ಹಬ್ಬುತ್ತಿದ್ದಂತೆಯೇ ಹೈಗ್ರೌಂಡ್ಸ್ ಠಾಣೆ ಪೊಲೀಸರು ನಟ ವಿಜಯ್ಗೆ ಮಾರುತಿಗೌಡನನ್ನು ಠಾಣೆಗೆ ಕರೆತರುವಂತೆ ಸೂಚಿಸಿದ್ದರು. ಬಳಿಕ ವಿಜಿ ಮಾರುತಿಯನ್ನು ಠಾಣೆ ಮುಂಭಾಗ ಕರೆದುಕೊಂಡು ಬರುತ್ತಿದ್ದಂತೆಯೇ ಪಾನಿಪೂರಿ ಕಿಟ್ಟಿ ಸಹಚರರು ಗುಂಪುಗೂಡಿ ಅಲ್ಲಿಯೇ ಕೊಲೆ ಮಾಡುವುದಾಗಿ ವಿಜಯ್ ಮಗನನ್ನು ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಗುಂಪಿನಲ್ಲಿ ಇದ್ದ ಒಬ್ಬ ಚಾಕುವನ್ನು ಹಿಡಿದುಕೊಂಡು ತಿವಿಯಲು ಬಂದಾಗ ವಿಜಯ್ ತಪ್ಪಿಸಿಕೊಂಡು ಠಾಣೆಗೆ ಓಡಿಬಂದಿದ್ದರು. ಬಳಿಕ ವಿಜಯ್ ಕಾರಿನ ಮೇಲೆ ದಾಳಿ ಮಾಡಿ ಜಖಂಗೊಳಿಸಲಾಗಿತ್ತು. ಅಲ್ಲದೇ ತನಗೆ ಮತ್ತು ತಮ್ಮ ಪುತ್ರನಿಗೆ ಜೀವ ಬೆದರಿಕೆ ಹಾಕಿರುವ ಪಾನಿಪೂರಿ ಕಿಟ್ಟಿ, ಮಾರುತಿಗೌಡ ಹಾಗೂ ಅವರ ಸಹಚರರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ದುನಿಯಾ ವಿಜಯ್ ದೂರು ನೀಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:46 am, Wed, 14 December 22