AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijay Sethupathi: ಒಂದೇ ತಿಂಗಳಲ್ಲಿ ಸಖತ್​ ಸ್ಲಿಮ್​ ಆದ ವಿಜಯ್​ ಸೇತುಪತಿ; ಹೊಸ ಫೋಟೋ ನೋಡಿ ಫ್ಯಾನ್ಸ್​ಗೆ ಅಚ್ಚರಿ

Vijay Sethupathi New Look: ಹೊಸ ಗೆಟಪ್​ನಲ್ಲಿ ವಿಜಯ್​ ಸೇತುಪತಿ ಕಾಣಿಸಿಕೊಂಡಿದ್ದು ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ಈ ಹಿಂದೆ ಅವರನ್ನು ಟ್ರೋಲ್​ ಮಾಡಿದ್ದವರೆಲ್ಲ ಈಗ ಗಪ್​ ಚುಪ್​ ಆಗಿದ್ದಾರೆ.

Vijay Sethupathi: ಒಂದೇ ತಿಂಗಳಲ್ಲಿ ಸಖತ್​ ಸ್ಲಿಮ್​ ಆದ ವಿಜಯ್​ ಸೇತುಪತಿ; ಹೊಸ ಫೋಟೋ ನೋಡಿ ಫ್ಯಾನ್ಸ್​ಗೆ ಅಚ್ಚರಿ
ವಿಜಯ್ ಸೇತುಪತಿ
TV9 Web
| Edited By: |

Updated on:Dec 14, 2022 | 11:56 AM

Share

ದಕ್ಷಿಣ ಭಾರತದಲ್ಲಿ ವಿಜಯ್​ ಸೇತುಪತಿ (Vijay Sethupathi) ಅವರು ತುಂಬ ಜನಪ್ರಿಯತೆ ಹೊಂದಿದ್ದಾರೆ. ಕಾಲಿವುಡ್​ನಲ್ಲಿ ಅವರ ಹವಾ ಜೋರಾಗಿದೆ. ವಿಲನ್​ ಪಾತ್ರಗಳ ಮೂಲಕ ಅವರು ತಮ್ಮದೇ ಚಾಪು ಮೂಡಿಸಿದ್ದಾರೆ. ಹಾಗಂತ ಅವರು ಒಂದೇ ರೀತಿಯ ಪಾತ್ರಗಳಿಗೆ ಬ್ರ್ಯಾಂಡ್​ ಆಗಿಲ್ಲ. ಎಲ್ಲ ಬಗೆಯ ಪ್ರಯೋಗಳನ್ನೂ ಮಾಡುತ್ತ, ಜನಮೆಚ್ಚುಗೆ ಪಡೆಯುತ್ತಿದ್ದಾರೆ. ಆದರೆ ಅವರು ಹೆಚ್ಚು ದಪ್ಪ ಇದ್ದಾರೆ ಎಂಬ ಕಾರಣಕ್ಕೆ ಟ್ರೋಲ್​ ಆಗಿದ್ದೂ ಉಂಟು. ಅದನ್ನೇ ಈಗ ವಿಜಯ್​ ಸೇತುಪತಿ ಸವಾಲಾಗಿ ಸ್ವೀಕರಿಸಿದಂತಿದೆ. ಕೇವಲ ಒಂದೇ ತಿಂಗಳಲ್ಲಿ ಅವರು ತುಂಬ ಸ್ಲಿಮ್​ ಆಗಿದ್ದಾರೆ. ಅವರ ಹೊಸ ಫೋಟೋ ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ದೇಹದ ತೂಕ ಇಳಿಸಿಕೊಂಡಿದ್ದು (weight Loss) ಹೇಗೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ವಿಜಯ್​ ಸೇತುಪತಿ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಒಂದು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳ ವಲಯದಲ್ಲಿ ವೈರಲ್​ ಆಗಿದೆ. ಕೆಲವು ದಿನಗಳ ಹಿಂದೆ ತಮಿಳಿನ ‘ಡಿಎಸ್​ಪಿ’ ಸಿನಿಮಾ ತೆರೆಕಂಡಿತು. ಆ ಚಿತ್ರದ ಪ್ರಚಾರದ ವೇಳೆ ಸಾರ್ವಜನಿಕವಾಗಿ ಕಾಣಿಸಿಕೊಂಡ ವಿಜಯ್​ ಸೇತುಪತಿ ಅವರು ಮೊದಲಿನಂತೆಯೇ ದಪ್ಪಗಿದ್ದರು. ಆದರೆ ಈಗ ಸಡನ್​ ಆಗಿ ಸ್ಲಿಮ್​ ಆಗಿರುವ ಫೋಟೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
Vijay Sethupathi: ‘ಶುಗರ್​ಲೆಸ್’​ ಚಿತ್ರಕ್ಕೆ ವಿಜಯ್​ ಸೇತುಪತಿ ಅಭಿನಂದನೆ; ಪರಭಾಷೆ ಮಂದಿಯ ಗಮನ ಸೆಳೆದ ಕನ್ನಡ ಸಿನಿಮಾ
Image
Vikram: ಕಮಲ್​ ಹಾಸನ್​ಗೆ 50 ಕೋಟಿ ರೂ. ಸಂಬಳ; ವಿಜಯ್​ ಸೇತುಪತಿ, ಫಹಾದ್​ ಫಾಸಿಲ್​ಗೆ ಎಷ್ಟು?
Image
ಕತ್ರಿನಾ ಕೈಫ್​ ಹಾಗೂ ವಿಜಯ್​ ಸೇತುಪತಿಗೆ ವಿಶೇಷ ಕ್ಲಾಸ್​; ಇದು ಹೊಸ ಸಿನಿಮಾ ಅಪ್​ಡೇಟ್​
Image
ಅನುಷ್ಕಾ ಶೆಟ್ಟಿ-ವಿಜಯ್​ ಸೇತುಪತಿ ಕಾಂಬಿನೇಷನ್​ನಲ್ಲಿ ಬರುತ್ತಿದೆ ಹೊಸ ಸಿನಿಮಾ; ನಿರ್ದೇಶನ ಯಾರದ್ದು?

ಇದನ್ನೂ ಓದಿ: Katrina Kaif: ತೆರೆ ಹಿಂದಿನ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್​; ವಿಜಯ್​ ಸೇತುಪತಿ ಜತೆ ಕೆಲಸ ಕೆಲಸ ಕೆಲಸ

ಇಷ್ಟು ಕಡಿಮೆ ಅವಧಿಯಲ್ಲಿ ಈ ಪರಿ ಸ್ಲಿಮ್​ ಆಗಲಿ ಸಾಧ್ಯವೇ ಇಲ್ಲ ಎಂಬುದು ಕೆಲವರ ವಾದ. ಈ ಫೋಟೋದಲ್ಲಿ ಸ್ಲಿಮ್​ ಆಗಿ ಕಾಣಿಸಲು ಕ್ಯಾಮೆರಾ ಆ್ಯಂಗಲ್​ ಕಾರಣ ಎಂದು ಕೂಡ ಹೇಳಲಾಗುತ್ತಿದೆ. ಹೊಸ ಅವತಾರದಲ್ಲಿ ವಿಜಯ್​ ಸೇತುಪತಿ ಕಾಣಿಸಿಕೊಂಡಿದ್ದು ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ಈ ಹಿಂದೆ ಅವರನ್ನು ಟ್ರೋಲ್​ ಮಾಡಿದ್ದವರೆಲ್ಲ ಈಗ ಗಪ್​ ಚುಪ್​ ಆಗಿದ್ದಾರೆ. ದೇಹದ ತೂಕ ಕಡಿಮೆ ಮಾಡಿಕೊಳ್ಳುವ ವಿಚಾರದಲ್ಲಿ ವಿಜಯ್​ ಸೇತುಪತಿ ಅವರು ಎಲ್ಲರಿಗೂ ಸ್ಫೂರ್ತಿ ನೀಡಿದ್ದಾರೆ ಎಂದು ಫ್ಯಾನ್ಸ್​ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ವಿಜಯ್​ ಸೇತುಪತಿ-ನಿತ್ಯಾ ಮೆನನ್​ ಮಹತ್ವದ ನಿರ್ಧಾರ; ಅಭಿಮಾನಿಗಳಿಗೆ ಅಚ್ಚರಿ ತಂದ ತೀರ್ಮಾನ

2022ರ ವರ್ಷ ವಿಜಯ್​ ಸೇತುಪತಿ ಪಾಲಿಗೆ ಖುಷಿ ನೀಡಿದೆ. ಈ ವರ್ಷ ಅವರು ನಟಿಸಿದ ‘ವಿಕ್ರಮ್​’ ಸಿನಿಮಾ ಸೂಪರ್​ ಹಿಟ್​ ಆಯಿತು. ಅದರ ಪರಿಣಾಮವಾಗಿ ಅವರಿಗಿದ್ದ ಡಿಮ್ಯಾಂಡ್​ ಹೆಚ್ಚಾಗಿದೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ವಿಜಯ್​ ಸೇತುಪತಿ ಒಪ್ಪಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:55 am, Wed, 14 December 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್