ಅನುಷ್ಕಾ ಶೆಟ್ಟಿ-ವಿಜಯ್​ ಸೇತುಪತಿ ಕಾಂಬಿನೇಷನ್​ನಲ್ಲಿ ಬರುತ್ತಿದೆ ಹೊಸ ಸಿನಿಮಾ; ನಿರ್ದೇಶನ ಯಾರದ್ದು?

ವಿಜಯ್​ ಸೇತುಪತಿಗೆ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ತುಂಬಾನೇ ನ್ಯಾಚುರಲ್​ಆಗಿ ಅವರು ನಟಿಸುತ್ತಾರೆ. ಇನ್ನು, ಅವರ ಅದ್ಭುತ ನಟನೆ ಎಲ್ಲರಿಗೂ ಇಷ್ಟವಾಗುತ್ತದೆ.

ಅನುಷ್ಕಾ ಶೆಟ್ಟಿ-ವಿಜಯ್​ ಸೇತುಪತಿ ಕಾಂಬಿನೇಷನ್​ನಲ್ಲಿ ಬರುತ್ತಿದೆ ಹೊಸ ಸಿನಿಮಾ; ನಿರ್ದೇಶನ ಯಾರದ್ದು?
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 05, 2021 | 9:11 PM

‘ಬಾಹುಬಲಿ’ ಅಂತಹ ಹಿಟ್​ ಚಿತ್ರಗಳಲ್ಲಿ ನಟಿಸಿದ ಹೊರತಾಗಿಯೂ ಅನುಷ್ಕಾ ಶೆಟ್ಟಿಗೆ ಹೇಳಿಕೊಳ್ಳುವಂತಹ ಸಿನಿಮಾ ಆಫರ್​ಗಳು ಬಂದಿಲ್ಲ. ಇತ್ತೀಚೆಗೆ ಅವರಿಗೆ ಚಿತ್ರರಂಗದಲ್ಲಿ ಅಷ್ಟಾಗಿ ಯಶಸ್ಸು ಸಿಗುತ್ತಿಲ್ಲ. ಈ ಕಾರಣಕ್ಕೆ ಅವರು ಚ್ಯೂಸಿ ಆಗಿದ್ದಾರೆ. ತುಂಬಾನೇ ಲೆಕ್ಕಾಚಾರ ಹಾಕಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರ ಮುಂದಿನ ಚಿತ್ರದ ಬಗ್ಗೆ ಹೊಸ ಅಪ್​​ಡೇಟ್​ ಒಂದು ಕೇಳಿ ಬಂದಿದೆ. ತಮಿಳಿನ ಖ್ಯಾತ ನಟ ವಿಜಯ್​ ಸೇತುಪತಿ ಜತೆ ಅನುಷ್ಕಾ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ.

ವಿಜಯ್​ ಸೇತುಪತಿಗೆ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ತುಂಬಾನೇ ನ್ಯಾಚುರಲ್​ಆಗಿ ಅವರು ನಟಿಸುತ್ತಾರೆ. ಇನ್ನು, ಅವರ ಅದ್ಭುತ ನಟನೆ ಎಲ್ಲರಿಗೂ ಇಷ್ಟವಾಗುತ್ತದೆ. ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಈಗ ಅನುಷ್ಕಾ ಮತ್ತು ವಿಜಯ್​ ಒಂದಾಗುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಥ್ರಿಲ್​​ ಆಗಿದ್ದಾರೆ.

2020ರ ಆರಂಭದಲ್ಲೇ ಅನುಷ್ಕಾ ಮತ್ತು ವಿಜಯ್​ ಒಟ್ಟಾಗಿ ನಟಿಸುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆ ಬಳಿಕ ಕೊವಿಡ್ ಕಾಣಿಸಿಕೊಂಡಿತ್ತು. ನಂತರದಲ್ಲಿ ಈ ವಿಚಾರವನ್ನು ಇಬ್ಬರೂ ಅಲ್ಲಗಳೆದಿದ್ದರು. ಇದೊಂದು ವದಂತಿ ಎಂದು ಸ್ಪಷ್ಟನೆ ನೀಡಿದ್ದರು. ಈಗ ಟಾಲಿವುಡ್​ನಲ್ಲಿ ಮತ್ತೆ ಈ ಸುದ್ದಿ ಹುಟ್ಟಿಕೊಂಡಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್​ ಸಿದ್ಧಪಡಿಸಿದ್ದ ಎ.ಎಲ್​. ವಿಜಯ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.

ಜನವರಿಯಲ್ಲಿ ಈ ಹೊಸ ಸಿನಿಮಾದ ಶೂಟಿಂಗ್​ ಆರಂಭಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಶೀಘ್ರವೇ ಘೋಷಣೆ ಮಾಡಲು ನಿರ್ಧರಿಸಲಾಗಿದೆ. ಈ ಮೊದಲು ಅನುಷ್ಕಾ ಮತ್ತು  ನಿರ್ದೇಶಕ ಎ.ಎಲ್​​. ವಿಜಯ್​ ಎರಡು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು.  ಈಗ ಅವರು ಮೂರನೇ ಬಾರಿಗೆ ಅನುಷ್ಕಾ ಜತೆ ಸಿನಿಮಾ ಮಾಡುತ್ತಿದ್ದಾರೆ. ಅನುಷ್ಕಾ ಹಾಗೂ ನಟ ವಿಜಯ್​ ಈವರೆಗೆ ಒಟ್ಟಾಗಿ ನಟಿಸಿಲ್ಲ. ಅವರನ್ನು ಈಗ ಒಂದೇ ಸಿನಿಮಾದಲ್ಲಿ ತರುತ್ತಿರುವುದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಇಬ್ಬರೂ ಈಗಾಗಲೇ ಕಥೆ ಕೇಳಿದ್ದು, ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಜನ್ಮದಿನಕ್ಕೆ ಸರ್​​ಪ್ರೈಸ್ ಗಿಫ್ಟ್

Anushka Shetty Birthday: ಹ್ಯಾಟ್ರಿಕ್​ ಬಾರಿಸೋಕೆ ರೆಡಿ ಆದ ಅನುಷ್ಕಾ ಶೆಟ್ಟಿ​; ಅಭಿಮಾನಿಗಳಿಗೆ ಸರ್​ಪ್ರೈಸ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ