Anushka Shetty Birthday: ಹ್ಯಾಟ್ರಿಕ್ ಬಾರಿಸೋಕೆ ರೆಡಿ ಆದ ಅನುಷ್ಕಾ ಶೆಟ್ಟಿ; ಅಭಿಮಾನಿಗಳಿಗೆ ಸರ್ಪ್ರೈಸ್
Happy Birthday Anushka Shetty: ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ಮಾಣದ ಖ್ಯಾತಿ ಹೊಂದಿರುವ ಯುವಿ ಕ್ರಿಯೇಷನ್ಸ್ ಅನುಷ್ಕಾ ಶೆಟ್ಟಿ ಅವರ ಜನ್ಮದಿನದಂದು ಹೊಸ ಚಿತ್ರವೊಂದನ್ನು ಘೋಷಿಸಿದೆ.
ಸಾಮಾನ್ಯವಾಗಿ ಸೆಲೆಬ್ರಿಟಿ ಬರ್ತ್ಡೇ ಎಂದರೆ ಚಿತ್ರತಂಡದಿಂದ ಸಿನಿಮಾ ಟ್ರೇಲರ್, ಟೀಸರ್ ಘೋಷಣೆ ಆಗುತ್ತದೆ. ಇಲ್ಲವೇ ಹೊಸ ಸಿನಿಮಾ ಬಗ್ಗೆ ಮಾಹಿತಿ ಸಿಗುತ್ತದೆ. ಇಂದು (ನ.7) ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರಿಗೆ ಜನ್ಮದಿನದ ಸಂಭ್ರಮ. ‘ಅರುಂಧತಿ’, ‘ಬಾಹುಬಲಿ’ ರೀತಿಯ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿದ ಅವರು ಈಗ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಇಂದು ಘೋಷಣೆ ಆಗಿದೆ.
ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ಮಾಣದ ಖ್ಯಾತಿ ಹೊಂದಿರುವ ಯುವಿ ಕ್ರಿಯೇಷನ್ಸ್ ಅನುಷ್ಕಾ ಶೆಟ್ಟಿ ಅವರ ಜನ್ಮದಿನದಂದು ಹೊಸ ಚಿತ್ರವೊಂದನ್ನು ಘೋಷಿಸಿದೆ. ಅನುಷ್ಕಾ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ. 2013 ರಲ್ಲಿ ‘ಮಿರ್ಚಿ’, 2018 ರಲ್ಲಿ ‘ಭಾಗಮತಿ’ ಸಿನಿಮಾಗಳಲ್ಲಿ ನಟಿಸಿದ್ದರು. ಈ ಸಿನಿಮಾಗಳನ್ನು ಯುವಿ ಕ್ರಿಯೇಷನ್ಸ್ ನಿರ್ಮಾಣ ಮಾಡಿತ್ತು. ಇದೀಗ ಈ ನಿರ್ಮಾಣ ಸಂಸ್ಥೆ ಹಾಗೂ ಅನುಷ್ಕಾ ಮೂರನೇ ಬಾರಿ ಒಂದಾಗಿದ್ದಾರೆ.
ಅನುಷ್ಕಾ ಅವರ 48ನೇ ಸಿನಿಮಾ ಇದಾಗಿದ್ದು, ಮಹೇಶ್ ಬಾಬು.ಪಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಹೊಸ ಚಿತ್ರದಲ್ಲಿ ಅನುಷ್ಕಾ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅನುಷ್ಕಾ ಶೆಟ್ಟಿ ಮತ್ತು ಯುವಿ ಕ್ರಿಯೇಷನ್ಸ್‌ನಲ್ಲಿ ನಿರ್ಮಾಣವಾಗಿದ್ದ ‘ಭಾಗಮತಿ’ ಚಿತ್ರ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಇದೀಗ ಇದೇ ಕಾಂಬಿನೇಶನ್‌ನಲ್ಲಿ ಬರಲಿರೋ ಹೊಸ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಲಿದೆ. ಈ ಚಿತ್ರದ ಉಳಿದ ತಾರಾಗಣದ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹೊರಬರುವ ನಿರೀಕ್ಷೆಯಿದೆ. ಅನುಷ್ಕಾ ಶೆಟ್ಟಿ ಜನ್ಮದಿನದ ಪ್ರಯುಕ್ತ ಸೆಲೆಬ್ರಿಟಿಗಳು, ಸ್ನೇಹಿತರು ಮತ್ತು ಅಭಿಮಾನಿಗಳು ಜನ್ಮದಿನದ ಶುಭಾಶಯಗಳನ್ನು ಕಳುಹಿಸುತ್ತಿದ್ದಾರೆ.
Happy Birthday Sweety! ?
We are delighted to announce our “Hattrick Combination” with the Sweet and Very Special @MsAnushkaShetty ??.
Directed by #MaheshBabuP Produced by @UV_Creations#HBDAnushkaShetty #Anushka48 #HappyBirthdayAnushkaShetty pic.twitter.com/nOv4LWvonh
— UV Creations (@UV_Creations) November 7, 2021
ಸೋಶಿಯಲ್ ಮೀಡಿಯಾದಲ್ಲಿ ಒಂದು ದಿನ ಮೊದಲೇ ಅನುಷ್ಕಾ ಶೆಟ್ಟಿ ಸೆಲೆಬ್ರೇಷನ್ ಶುರುವಾಗಿತ್ತು. ಕಾಮನ್ ಡಿಪಿ ಶೇರ್ ಮಾಡಿಕೊಳ್ಳುತ್ತಿರುವ ಅಭಿಮಾನಿಗಳು ಅನುಷ್ಕಾಗೆ ಶುಭಾಶಯ ಕೋರುತ್ತಿದ್ದಾರೆ. 2020ರಲ್ಲಿ ನೇರವಾಗಿ ಅಮೇಜಾನ್ ಪ್ರೈಂ ವಿಡಿಯೋ ಮೂಲಕ ತೆರೆಕಂಡ ‘ನಿಶಬ್ದಂ’ ಸಿನಿಮಾ ಬಳಿಕ ಅನುಷ್ಕಾ ಬೇರೆ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಪ್ರಾಜೆಕ್ಟ್ ಬಗ್ಗೆ ಅಪ್ಡೇಟ್ ಸಿಕ್ಕಿದೆ.
ಅನುಷ್ಕಾ ಶೆಟ್ಟಿ ಅಪ್ಪಟ ಕನ್ನಡತಿ. ತುಂಬ ಸ್ಪಷ್ಟವಾಗಿ ಅವರು ಕನ್ನಡ ಮಾತನಾಡುತ್ತಾರೆ. ವಿಶೇಷ ದಿನಗಳಲ್ಲಿ ಕನ್ನಡದಲ್ಲೇ ಸೋಶಿಯಲ್ ಮೀಡಿಯಾ ಪೋಸ್ಟ್ ಮಾಡುತ್ತಾರೆ. ಆದರೆ ಈವರೆಗೂ ಅವರು ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ ಎಂಬ ಕೊರಗು ಅಭಿಮಾನಿಗಳಿಗೆ ಇದೆ. ಆದಷ್ಟು ಬೇಗ ಅವರು ಕನ್ನಡದ ಚಿತ್ರದಲ್ಲಿ ನಟಿಸಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ.
ಇದನ್ನೂ ಓದಿ: Anushka Sharma: ಒಂದೇ ಒಂದು ಚಿತ್ರದಿಂದ ಅಭಿಮಾನಿಗಳ ಮನಗೆದ್ದ ಅನುಷ್ಕಾ; ಅಂಥದ್ದೇನಿದೆ ಅದರಲ್ಲಿ?