AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anushka Shetty Birthday: ಅನುಷ್ಕಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ; 40ನೇ ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳಿಗೆ ಸಿಗಲಿದೆ ಸರ್ಪ್ರೈಸ್​?

Happy Birthday Anushka Shetty: ಅನುಷ್ಕಾ ಶೆಟ್ಟಿ ಜನ್ಮದಿನಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಒಂದು ದಿನ ಮೊದಲೇ ಸೆಲೆಬ್ರೇಷನ್​ ಶುರುವಾಗಿತ್ತು. ಕಾಮನ್​ ಡಿಪಿ ಶೇರ್​ ಮಾಡಿಕೊಳ್ಳುತ್ತಿರುವ ಅಭಿಮಾನಿಗಳು ಅನುಷ್ಕಾಗೆ ಶುಭಾಶಯ ಕೋರುತ್ತಿದ್ದಾರೆ.

Anushka Shetty Birthday: ಅನುಷ್ಕಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ; 40ನೇ ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳಿಗೆ ಸಿಗಲಿದೆ ಸರ್ಪ್ರೈಸ್​?
ಅನುಷ್ಕಾ ಶೆಟ್ಟಿ
TV9 Web
| Updated By: ಮದನ್​ ಕುಮಾರ್​|

Updated on: Nov 07, 2021 | 7:31 AM

Share

ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರಿಗೆ ಇಂದು (ನ.7) ಜನ್ಮದಿನದ ಸಂಭ್ರಮ. ಅವರ ಅಭಿಮಾನಿಗಳಿಗೆ ಇದು ವಿಶೇಷ ದಿನ. ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿ ಸಖತ್​ ಚ್ಯೂಸಿ ಆಗಿರುವ ಅನುಷ್ಕಾ ಮೇಲೆ ಫ್ಯಾನ್ಸ್​ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಅರುಂಧತಿ’, ‘ಬಾಹುಬಲಿ’ ರೀತಿಯ ಬ್ಲಾಕ್​ಬಸ್ಟರ್​ ಸಿನಿಮಾಗಳನ್ನು ನೀಡಿದ ಅವರಿಗೆ ಇತ್ತೀಚಿನ ದಿನಗಳಲ್ಲಿ ಯಾಕೋ ದೊಡ್ಡ ಮಟ್ಟದ ಯಶಸ್ಸು ಸಿಗುತ್ತಿಲ್ಲ. ಇಂದು ಅನುಷ್ಕಾ ಶೆಟ್ಟಿ ಅವರ 40ನೇ ವರ್ಷದ ಜನ್ಮದಿನದ ಪ್ರಯುಕ್ತ ಹೊಸ ಸಿನಿಮಾ ಅನೌನ್ಸ್​ ಆಗುವ ಸಾಧ್ಯತೆ ಇದೆ.

ಸೋಶಿಯಲ್​ ಮೀಡಿಯಾದಲ್ಲಿ ಒಂದು ದಿನ ಮೊದಲೇ ಸೆಲೆಬ್ರೇಷನ್​ ಶುರುವಾಗಿತ್ತು. ಕಾಮನ್​ ಡಿಪಿ ಶೇರ್​ ಮಾಡಿಕೊಳ್ಳುತ್ತಿರುವ ಅಭಿಮಾನಿಗಳು ಅನುಷ್ಕಾಗೆ ಶುಭಾಶಯ ಕೋರುತ್ತಿದ್ದಾರೆ. 2020ರಲ್ಲಿ ನೇರವಾಗಿ ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ತೆರೆಕಂಡ ‘ನಿಶಬ್ದಂ’ ಸಿನಿಮಾ ಬಳಿಕ ಅನುಷ್ಕಾ ಬೇರೆ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಪ್ರಾಜೆಕ್ಟ್​ಗಳ ಬಗ್ಗೆ ಅಪ್​ಡೇಟ್​ ಸಿಗುವ ನಿರೀಕ್ಷೆ ಇದೆ.

ನಟ ನವೀನ್​ ಪೊಲಿಶೆಟ್ಟಿ ಮತ್ತು ಅನುಷ್ಕಾ ಶೆಟ್ಟಿ ಕಾಂಬಿನೇಷನ್​ನಲ್ಲಿ ಒಂದು ಸಿನಿಮಾ ಮೂಡಿಬರಲಿದೆ ಎಂದು ಈ ವರ್ಷದ ಆರಂಭದಲ್ಲೇ ಹೇಳಲಾಗಿತ್ತು. ಆ ಚಿತ್ರಕ್ಕೆ ಪ್ರತಿಷ್ಠಿತ ‘ಯುವಿ ಕ್ರಿಯೇಷನ್ಸ್​’ ಬಂಡವಾಳ ಹೂಡಲು ಮುಂದಾಗಿತ್ತು. ಆದರೆ ಅನುಷ್ಕಾ ಕಡೆಯಿಂದ ಪೂರ್ಣ ಸಮ್ಮತಿ ಸಿಕ್ಕಿರಲಿಲ್ಲ ಎನ್ನಲಾಗಿತ್ತು. ಅವರ ಡೇಟ್ಸ್​ ವಿಚಾರದಲ್ಲಿ ಸ್ಪಷ್ಟತೆ ಇರಲಿಲ್ಲ. ಹಾಗಾಗಿ ಆ ಚಿತ್ರದ ಪ್ಲ್ಯಾನ್​ ಕೈ ಬಿಡಲಾಯಿತು ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಈಗ ಆ ಚಿತ್ರಕ್ಕೆ ಪುನಃ ಚಾಲನೆ ನೀಡಲಾಗುತ್ತಿದೆ ಎಂಬ ಮಾಹಿತಿ ಹಬ್ಬಿದೆ.

ಅನುಷ್ಕಾ ಶೆಟ್ಟಿ ಹುಟ್ಟುಹಬ್ಬದ ದಿನವೇ ಈ ಪ್ರಾಜೆಕ್ಟ್​ ಅನೌನ್ಸ್​ ಮಾಡುವುದು ಸೂಕ್ತ ಎಂದು ನಿರ್ಮಾಪಕರು ನಿರ್ಧರಿಸಿದಂತಿದೆ. ಅದಕ್ಕಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ‘ಜಾತಿ ರತ್ನಾಲು’ ಸಿನಿಮಾದ ಯಶಸ್ಸಿನ ಬಳಿಕ ನವೀನ್​ ಪೊಲಿಶೆಟ್ಟಿ ಅವರ ಚಾರ್ಮ್​ ಹೆಚ್ಚಿದೆ. ಅವರಿಗೆ ಅನುಷ್ಕಾ ಜೋಡಿಯಾಗಿ ನಟಿಸಿದರೆ ಆ ಸಿನಿಮಾದ ತೂಕ ಹೆಚ್ಚಲಿದೆ.

ಅನುಷ್ಕಾ ಶೆಟ್ಟಿ ಅಪ್ಪಟ ಕನ್ನಡತಿ. ತುಂಬ ಸ್ಪಷ್ಟವಾಗಿ ಅವರು ಕನ್ನಡ ಮಾತನಾಡುತ್ತಾರೆ. ವಿಶೇಷ ದಿನಗಳಲ್ಲಿ ಕನ್ನಡದಲ್ಲೇ ಸೋಶಿಯಲ್​ ಮೀಡಿಯಾ ಪೋಸ್ಟ್​ ಮಾಡುತ್ತಾರೆ. ಆದರೆ ಈವರೆಗೂ ಅವರು ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ ಎಂಬ ಕೊರಗು ಅಭಿಮಾನಿಗಳಿಗೆ ಇದೆ. ಆದಷ್ಟು ಬೇಗ ಅವರು ಕನ್ನಡದ ಚಿತ್ರದಲ್ಲಿ ನಟಿಸಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ.

ಇದನ್ನೂ ಓದಿ:

ಮತ್ತೆ ನಾಗವಲ್ಲಿ ಆಗ್ತಾರಾ ಅನುಷ್ಕಾ ಶೆಟ್ಟಿ? ಬಹುನಿರೀಕ್ಷಿತ ಚಿತ್ರದ ಬಗ್ಗೆ ಕೇಳಿಬರ್ತಿದೆ ಗುಸುಗುಸು

ದೀಪಿಕಾ, ಕತ್ರಿನಾ ಮಾತ್ರವಲ್ಲ, ಅನುಷ್ಕಾ ಶೆಟ್ಟಿ ಮೇಲೂ ಕಣ್ಣಿಟ್ಟಿದ್ದ ರಣಬೀರ್; ಬಹಿರಂಗವಾಗಿ ಹೇಳಿಕೊಂಡಿದ್ದ ನಟ

ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?