AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar: ‘ಯುವರತ್ನ’ ಸಿನಿಮಾದಲ್ಲಿ ಡಿಲೀಟ್​ ಆದ​ ದೃಶ್ಯಗಳು ಈಗ ರಿಲೀಸ್​ ಆಗುತ್ತಾ?​ ಇಲ್ಲಿದೆ ನಿರ್ದೇಶಕರ ಪ್ರತಿಕ್ರಿಯೆ

Yuvarathnaa: ಹಬ್ಬದ ಸಂದರ್ಭದಲ್ಲಿ ಸ್ಟಾರ್​ ನಟರ ಸಿನಿಮಾಗಳ ಹೊಸ ಪೋಸ್ಟರ್​, ಟೀಸರ್​ ಅಥವಾ ಟ್ರೇಲರ್​ಗಳು ಬಿಡುಗಡೆ ಆಗುವುದು ಸಹಜ. ಆದರೆ ಪುನೀತ್​ ರಾಜ್​ಕುಮಾರ್​ ನಿಧನದಿಂದಾಗಿ ಈ ಬಾರಿ ದೀಪಾವಳಿ ಹಬ್ಬದಲ್ಲಿ ಸ್ಯಾಂಡಲ್​ವುಡ್​ಗೆ ಕತ್ತಲು ಕವಿದಿದೆ.

Puneeth Rajkumar: ‘ಯುವರತ್ನ’ ಸಿನಿಮಾದಲ್ಲಿ ಡಿಲೀಟ್​ ಆದ​ ದೃಶ್ಯಗಳು ಈಗ ರಿಲೀಸ್​ ಆಗುತ್ತಾ?​ ಇಲ್ಲಿದೆ ನಿರ್ದೇಶಕರ ಪ್ರತಿಕ್ರಿಯೆ
ಸಂತೋಷ್​ ಆನಂದ್​ರಾಮ್​, ಪುನೀತ್​ ರಾಜ್​ಕುಮಾರ್​
TV9 Web
| Edited By: |

Updated on: Nov 06, 2021 | 7:57 PM

Share

ಪುನೀತ್​ ರಾಜ್​ಕುಮಾರ್​ ಅವರನ್ನು ಅಭಿಮಾನಿಗಳು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಅವರ ಸಿನಿಮಾಗಳನ್ನು ಮತ್ತೆ ಮತ್ತೆ ನೋಡಲಾಗುತ್ತಿದೆ. ಅಪ್ಪು ನಟನೆಯ ಹಾಡುಗಳು, ದೃಶ್ಯಗಳು ಎಲ್ಲರ ವಾಟ್ಸಾಪ್​ ಸ್ಟೇಟಸ್​ಗಳಲ್ಲಿ ರಾರಾಜಿಸುತ್ತಿವೆ. ಈಗ ‘ಪವರ್​ ಸ್ಟಾರ್​’ ಅಭಿಮಾನಿಗಳಿಂದ ಹೊಸದೊಂದು ಬೇಡಿಕೆ ಕೇಳಿಬಂದಿದೆ. ಪುನೀತ್​ ಬದುಕಿದ್ದಾಗ ರಿಲೀಸ್​ ಆದ ಅವರ ಕೊನೇ ಸಿನಿಮಾ ‘ಯುವರತ್ನ’. ಆ ಸಿನಿಮಾ ನೋಡಿ ಅಭಿಮಾನಿಗಳು ಸಖತ್​ ಇಷ್ಟಪಟ್ಟಿದ್ದರು. ‘ಯುವರತ್ನ’ ಚಿತ್ರದ ಮೂಲಕ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಅವರು ಯುವಜನತೆಗೆ ಒಳ್ಳೆಯ ಸಂದೇಶ ನೀಡಿದ್ದರು. ಆ ಸಿನಿಮಾದ ಡಿಲೀಟೆಡ್​ ದೃಶ್ಯಗಳನ್ನು ಬಿಡುಗಡೆ ಮಾಡುವಂತೆ ಫ್ಯಾನ್ಸ್​ ಮನವಿ ಮಾಡಿಕೊಳ್ಳುತ್ತಿದ್ದಾರೆ.

‘ದಯವಿಟ್ಟು ಯುವರತ್ನ ಸಿನಿಮಾದ ಡಿಲೀಡೆಟ್​ ದೃಶ್ಯಗಳನ್ನಾದರೂ ಬಿಡುಗಡೆ ಮಾಡಿ ಸರ್​. ಇದು ಎಲ್ಲ ‘ಪವರ್​ ಸ್ಟಾರ್​’ ಅಭಿಮಾನಿಗಳ ಮನವಿ. ಪ್ಲೀಸ್​ ಸರ್​’ ಎಂದು ಅಭಿಮಾನಿಗಳು ಟ್ವಿಟರ್​​ನಲ್ಲಿ ಸಂತೋಷ್​ ಆನಂದ್​ರಾಮ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕರು, ‘ಶೀಘ್ರದಲ್ಲೇ ಅಪ್​ಡೇಟ್​ ತಿಳಿಸುತ್ತೇನೆ’ ಎಂದು ಟ್ವೀಟ್​ ಮಾಡಿದ್ದಾರೆ. ಅದಕ್ಕಾಗಿ ಫ್ಯಾನ್ಸ್​ ಕಾಯುತ್ತಿದ್ದಾರೆ.

ಪುನೀತ್​ ರಾಜ್​ಕುಮಾರ್​ ಮತ್ತು ಸಂತೋಷ್​ ಆನಂದ್​ರಾಮ್​ ಅವರದ್ದು ಕನ್ನಡ ಚಿತ್ರರಂಗದಲ್ಲಿ ಹಿಟ್​ ಕಾಂಬಿನೇಷನ್​. ಇಬ್ಬರು ಮೊದಲ ಬಾರಿಗೆ ಜೊತೆಯಾಗಿ ಮಾಡಿದ ‘ರಾಜಕುಮಾರ’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಈ ವರ್ಷ ಏಪ್ರಿಲ್​ 1ರಂದು ಬಿಡುಗಡೆಯಾದ ‘ಯುವರತ್ನ’ ಚಿತ್ರ ಕೂಡ ಅಭಿಮಾನಿಗಳಿಗೆ ಇಷ್ಟವಾಗಿತ್ತು.

ಪ್ರತಿ ಹಬ್ಬದ ಸಂದರ್ಭದಲ್ಲಿ ಸ್ಟಾರ್​ ನಟರ ಸಿನಿಮಾಗಳ ಹೊಸ ಪೋಸ್ಟರ್​, ಟೀಸರ್​ ಅಥವಾ ಟ್ರೇಲರ್​ಗಳು ಬಿಡುಗಡೆ ಆಗುವುದು ಸಹಜ. ಆದರೆ ಈ ದೀಪಾವಳಿ ಹಬ್ಬದಲ್ಲಿ ಸ್ಯಾಂಡಲ್​ವುಡ್​ಗೆ ಕತ್ತಲು ಕವಿದಿದೆ. ಪುನೀತ್​ ನಿಧನದಿಂದ ಚಿತ್ರರಂಗದಲ್ಲಿ ಸೂತಕದ ಛಾಯೆ ಆವರಿಸಿದೆ. ಕೆಲವು ಸಿನಿಮಾಗಳ ಬಿಡುಗಡೆ ದಿನಾಂಕ ಕೂಡ ಮುಂದೂಡಲ್ಪಟ್ಟಿದೆ.

ಪುನೀತ್​ ರಾಜ್​ಕುಮಾರ್​ ಇಹಲೋಕ ತ್ಯಜಿಸಿ ಒಂದು ವಾರ ಕಳೆದಿದೆ. ಕುಟುಂಬದವರು ಅಪ್ಪು ಸಮಾಧಿಗೆ ಹಾಲು-ತುಪ್ಪ ಅರ್ಪಿಸಿದ ಬಳಿಕ ಅಭಿಮಾನಿಗಳಿಗೆ ಸಮಾಧಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಪ್ರತಿ ದಿನ 20 ಸಾವಿರಕ್ಕೂ ಅಧಿಕ ಮಂದಿ ಕಂಠೀರವ ಸ್ಟುಡಿಯೋ ಆವರಣಕ್ಕೆ ಆಗಮಿಸಿ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ.

ನಿಧನರಾಗುವುದಕ್ಕೂ ಮುನ್ನ ಹಲವು ಪ್ರಾಜೆಕ್ಟ್​ಗಳಲ್ಲಿ ಪುನೀತ್​ ಬ್ಯುಸಿ ಆಗಿದ್ದರು. ಚೇತನ್​ಕುಮಾರ್​ ನಿರ್ದೇಶನದ ‘ಜೇಮ್ಸ್​’, ಪವನ್​ ಕುಮಾರ್​ ನಿರ್ದೇಶನ ‘ದ್ವಿತ್ವ’ ಚಿತ್ರಗಳಲ್ಲಿ ಪುನೀತ್​ ನಟಿಸುತ್ತಿದ್ದರು. ‘ಜೇಮ್ಸ್​’ ಶೂಟಿಂಗ್​ ಬಹುತೇಕ ಮುಗಿದಿದ್ದು, 2022ರ ಮಾ.17ರಂದು ಪುನೀತ್​ ರಾಜ್​ಕುಮಾರ್​ ಜನ್ಮದಿನದ ಪ್ರಯುಕ್ತ ಬಿಡುಗಡೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ:

Puneeth Rajkumar: ‘ಪುನೀತ್​ ಅತಿಯಾಗಿ ಜಿಮ್​ ಮಾಡಿದ್ರು’: ಕರಾಳ ಶುಕ್ರವಾರದ ಘಟನೆ ವಿವರಿಸಿದ ಸೆಕ್ಯೂರಿಟಿ ಸಿಬ್ಬಂದಿ

Puneeth Rajkumar: ಪುನೀತ್​ ಬಗ್ಗೆ ಅವಹೇಳನಕಾರಿ ಪೋಸ್ಟ್​ ಮಾಡಿದ್ದ ವ್ಯಕ್ತಿ ಅರೆಸ್ಟ್​; ಸೈಬರ್​ ಪೊಲೀಸರ ಬಲೆಗೆ ಬಿದ್ದ ಕಿಡಿಗೇಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?