ಪುನೀತ್ ನಿವಾಸಕ್ಕೆ ಬಂದು ಸಾಂತ್ವನ ಹೇಳಿದ ಜಯಪ್ರದಾ; ಅಪ್ಪು ನೆನೆದು ಕಣ್ಣೀರಿಟ್ಟ ಹಿರಿಯ ನಟಿ
Jayaprada: ಡಾ. ರಾಜ್ಕುಮಾರ್ ಜೊತೆ ‘ಕವಿರತ್ನ ಕಾಳಿದಾಸ’, ‘ಸನಾದಿ ಅಪ್ಪಣ್ಣ’, ‘ಹುಲಿಯ ಹಾಲಿನ ಮೇವು’, ‘ಶಬ್ದವೇದಿ’ ಸಿನಿಮಾಗಳಲ್ಲಿ ಯಜಪ್ರದಾ ನಟಿಸಿದ್ದಾರೆ. ಪುನೀತ್ ರಾಜ್ಕುಮಾರ್ ನಿಧನದಿಂದ ಅವರಿಗೆ ತೀವ್ರ ನೋವಾಗಿದೆ.
ಪುನೀತ್ ರಾಜ್ಕುಮಾರ್ ಅವರ ಅಗಲಿಕೆಗೆ ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಅಕ್ಕ ಪಕ್ಕದ ರಾಜ್ಯಗಳ ಚಿತ್ರರಂಗದ ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ. ಹೈದರಾಬಾದ್, ಚೆನ್ನೈನಿಂದ ಅನೇಕ ಕಲಾವಿದರು ಬಂದು ಪುನೀತ್ ಕುಟುಂಬದವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಇಂದು (ನ.6) ಹಿರಿಯ ನಟಿ ಜಯಪ್ರದಾ ಅವರು ಅಪ್ಪು ನಿವಾಸಕ್ಕೆ ಭೇಟಿ ನೀಡಿದರು. ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು ಈ ವೇಳೆ ಪುನೀತ್ ಅವರನ್ನು ನೆನಪು ಮಾಡಿಕೊಂಡು ಕಣ್ಣೀರು ಸುರಿಸಿದರು.
‘ಅಪ್ಪು ನಮ್ಮ ಜೊತೆ ಇಲ್ಲ ಎಂಬುದನ್ನು ಸಹಿಸಿಕೊಳ್ಳೋಕೆ ತುಂಬ ಕಷ್ಟ ಆಗುತ್ತಿದೆ. ರಾಜ್ ಕುಟುಂಬ ಅಂದರೆ ನನಗೆ ಬಹಳ ಇಷ್ಟ. ರಾಜ್ಕುಮಾರ್, ಪಾರ್ವತಮ್ಮ ಅವರ ಜೊತೆ ನಾನು ಕೂಡ ಕುಟುಂಬದ ಸದಸ್ಯಳಿದ್ದಂತೆ. ಇಷ್ಟು ಚಿಕ್ಕವಯಸ್ಸಿನಲ್ಲಿ ಅಪ್ಪು ನಿಧನರಾಗಿರುವುದು ತೀವ್ರ ನೋವಿನ ಸಂಗತಿ. ಅವನನ್ನು ನಾನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ. ಅವನ ನಿಧನದಿಂದ ದೊಡ್ಡ ನಷ್ಟ ಆಗಿದೆ. ಅವನ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ ಜಯಪ್ರದಾ. ಡಾ. ರಾಜ್ಕುಮಾರ್ ಜೊತೆ ‘ಕವಿರತ್ನ ಕಾಳಿದಾಸ’, ‘ಸನಾದಿ ಅಪ್ಪಣ್ಣ’, ‘ಹುಲಿಯ ಹಾಲಿನ ಮೇವು’, ‘ಶಬ್ದವೇದಿ’ ಸಿನಿಮಾಗಳಲ್ಲಿ ಯಜಪ್ರದಾ ನಟಿಸಿದ್ದಾರೆ.
ಇದನ್ನೂ ಓದಿ:
ಪುನೀತ್ ಅವರ 2 ಕಣ್ಣನ್ನು 4 ಜನರಿಗೆ ಜೋಡಿಸಿದ್ದು ಹೇಗೆ? ವೈದ್ಯರು ತೆರೆದಿಟ್ಟ ಅಚ್ಚರಿ ಮಾಹಿತಿ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ

