‘ಪುನೀತ ನಮನ’ ಕಾರ್ಯಕ್ರಮಕ್ಕೆ ಚಂದಾ ವಸೂಲಿ ಆರೋಪ; ಸ್ಪಷ್ಟನೆ ನೀಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್
Puneeth Rajkumar: ‘ಪುನೀತ ನಮನ’ ಕಾರ್ಯಕ್ರಮಕ್ಕೆ ಚಂದಾ ಪಡೆಯುತ್ತಿರುವ ಕುರಿತಂತೆ ಫಿಲ್ಮ್ ಚೇಂಬರ್ ಸದಸ್ಯರು ಆರೋಪ ಮಾಡಿದ್ದಾರೆ. ಇದಕ್ಕೆ ಮಂಡಳಿ ಅಧ್ಯಕ್ಷ ಜೈರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು: ‘ಪುನೀತ ನಮನ’ ಕಾರ್ಯಕ್ರಮಕ್ಕೆ ಚಂದಾ ವಸೂಲಿ ಆರೋಪ ಎದುರಾಗಿದೆ. ನವೆಂಬರ್ 16ರಂದು ಫಿಲ್ಮ್ ಚೇಂಬರ್ ಏರ್ಪಡಿಸಿರುವ ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿರುವ ಆರೋಪ ಎದುರಾಗಿದೆ. ಈ ಕುರಿತು ಫಿಲ್ಮ್ ಚೇಂಬರ್ ವಿರುದ್ಧ ಜೆ.ಜೆ ಶ್ರೀನಿವಾಸ್, ಕುಮಾರ್ ಸೇರಿದಂತೆ ಕೆಲವು ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ. ‘‘ಫಿಲ್ಮ್ ಚೇಂಬರ್‌ನ ಖಾತೆಗೆ ಹಣವನ್ನು ಹಾಕಿಸಿಕೊಳ್ಳುತ್ತಿಲ್ಲ. ತಮ್ಮ ಹೆಸರಿನಲ್ಲಿ ಚೆಕ್ ಪಡೆದು, ತಮ್ಮ ವೈಯಕ್ತಿಕ ಅಕೌಂಟ್ ಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಅದರ ಲೆಕ್ಕ ಹೇಗೆ ಸಿಗುತ್ತದೆ? ಒಬ್ಬ ಮೇರು ನಟನಿಗೆ ನುಡಿನಮನ ಸಲ್ಲಿಸಲು ಫಿಲ್ಮ್ ಚೇಂಬರ್ ಬಳಿ ಹಣ ಇಲ್ಲದಿದ್ದರೆ ನಾವು ಸದಸ್ಯರೇ ಸೇರಿ ಹಣ ಕೊಡುತ್ತೇವೆ’’ ಎಂದು ಕೆಲ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಪ್ರತಿಕ್ರಿಯಿಸಿದ್ದು, ಆರೋಪವನ್ನು ತಳ್ಳಿ ಹಾಕಿದ್ದಾರೆ.
ಆರೋಪದ ಕುರಿತಂತೆ ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಹೇಳಿದ್ದೇನು? ‘ಪುನೀತ ನಮನ’ ಕಾರ್ಯಕ್ರಮಕ್ಕೆ ಚಂದಾ ವಸೂಲಿ ಆರೋಪಕ್ಕೆ ಸಂಬಂಧಪಟ್ಟಂತೆ, ಫಿಲ್ಮ್ ಚೇಂಬರ್ ವಿರುದ್ಧದ ಆರೋಪಕ್ಕೆ ಅಧ್ಯಕ್ಷ ಜೈರಾಜ್ ಸ್ಪಷ್ಟನೆ ನೀಡಿದ್ದಾರೆ. ಟಿವಿ9ನೊಂದಿಗೆ ಮಾತನಾಡಿರುವ ಅವರು, ‘‘ಚೇಂಬರ್ ವಿರುದ್ಧ ಇಲ್ಲ ಸಲ್ಲದ ಆರೋಪವನ್ನು ಹೊರಿಸಬಾರದು. ಕಾರ್ಯಕ್ರಮ ನಡೆಸಲು ವಾಣಿಜ್ಯ ಮಂಡಳಿಯಲ್ಲಿ ಹಣ ಇದೆ. ನಮಗೆ ಯಾರ ಹಣವೂ ಬೇಕಾಗಿಲ್ಲ’’ ಎಂದು ನುಡಿದಿದ್ದಾರೆ. ಈ ಮೂಲಕ ಫಿಲ್ಮ್ ಚೇಂಬರ್ ಸದಸ್ಯ, ನಿರ್ಮಾಪಕ ಜೆ.ಜೆ ಶ್ರೀನಿವಾಸ್ ಆರೋಪವನ್ನು ಜೈರಾಜ್ ತಳ್ಳಿಹಾಕಿದ್ದಾರೆ.
ಇದನ್ನೂ ಓದಿ:
Puneeth Rajkumar: ಇಂದು ಸಂಜೆ 6 ಗಂಟೆಗೆ ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪುನೀತ್ಗೆ ನಮನ ಕಾರ್ಯಕ್ರಮ
Marakkar: ಮೋಹನ್ಲಾಲ್ ‘ಮರಕ್ಕರ್’ ಚಿತ್ರದ ಕ್ರಾಂತಿಕಾರಕ ನಿರ್ಧಾರ; ‘ಆರ್ಆರ್ಆರ್’, ‘ಕೆಜಿಎಫ್ 2’ ಭವಿಷ್ಯವೇನು?