Puneeth Rajkumar: ಇಂದು ಸಂಜೆ 6 ಗಂಟೆಗೆ ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪುನೀತ್​ಗೆ ನಮನ ಕಾರ್ಯಕ್ರಮ

Puneeth Rajkumar: ಇಂದು ಸಂಜೆ 6 ಗಂಟೆಗೆ ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪುನೀತ್​ಗೆ ನಮನ ಕಾರ್ಯಕ್ರಮ
ಪುನೀತ್ ರಾಜ್​ಕುಮಾರ್

ಇಂದು ಸಂಜೆ ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪುನೀತ್​ ರಾಜಕುಮಾರ್​ಗೆ ನಮನ ಸಲ್ಲಿಸಲು ಆಯೋಜಿಸಲಾಗಿದೆ.

TV9kannada Web Team

| Edited By: shivaprasad.hs

Nov 07, 2021 | 9:10 AM


ಇಂದು ಸಂಜೆ (ನವೆಂಬರ್ 6) 6 ಗಂಟೆಗೆ ರಾಜ್ಯದ ಚಿತ್ರಮಂದಿರಗಳಲ್ಲಿ ನಟ ಪುನೀತ್​ ರಾಜಕುಮಾರ್​ಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ಚಿತ್ರ ಪ್ರದರ್ಶಕರ ವತಿಯಿಂದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಒಟ್ಟು 550ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪುನೀತ್​ಗೆ ನಮನ ಸಲ್ಲಿಸಲಾಗುತ್ತಿದ್ದು, ಕಾರ್ಯಕ್ರಮದ ರೂಪುರೇಶೆಯನ್ನೂ ಸಿದ್ಧಪಡಿಸಲಾಗಿದೆ. ಗೀತಾಂಜಲಿ, ಪುಷ್ಪಾಂಜಲಿ, ದೀಪಾಂಜಲಿ ಮೂಲಕ ಚಿತ್ರ ಪ್ರದರ್ಶಕರು ನಟ ಪುನೀತ್‌ರಾಜ್‌ಕುಮಾರ್‌ಗೆ ನಮನ ಸಲ್ಲಿಸಲಿದ್ದಾರೆ. ನಾಗೇಂದ್ರ ಪ್ರಸಾದ್ ರಚಿಸಿದ ಹಾಡಿನ ಮೂಲಕ ಗೀತಾಂಜಲಿ, ಚಿತ್ರಮಂದಿರಗಳಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪನಮನದ ಮೂಲಕ ಪುಷ್ಪಾಂಜಲಿ ಹಾಗೂ ಥಿಯೇಟರ್‌ಗಳಲ್ಲಿ ಕ್ಯಾಂಡಲ್ ಹಚ್ಚಿ ದೀಪಾಂಜಲಿ ನಡೆಸಲಾಗುತ್ತದೆ. ಮೌನಾಚರಣೆ ಮೂಲಕ ಪುನೀತ್ ರಾಜ್‌ಕುಮಾರ್‌ಗೆ ಥಿಯೇಟರ್ ಸಿಬ್ಬಂದಿ ಹಾಗೂ ಅಭಿಮಾನಿಗಳಿಂದ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಗುತ್ತದೆ. 

ಮೈಸೂರಿನಲ್ಲಿ ಭರದಿಂದ ತಯಾರಿ:
ಪುನೀತ್ ರಾಜಕುಮಾರ್​ಗೆ ಶ್ರದ್ಧಾಂಜಲಿ ಸಲ್ಲಿಸಲು ಮೈಸೂರಿನಲ್ಲಿ ಭರದಿಂದ ಸಿದ್ಧತೆ ಸಾಗಿದೆ. ಗೀತನಮನ, ದೀಪ ನಮನಕ್ಕೆ ಸಿದ್ದತೆ ಮಾಡಲಾಗುತ್ತಿದ್ದು, ಮೈಸೂರಿನ 8 ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್‌ಗಳಲ್ಲೂ ಶ್ರದ್ದಾಂಜಲಿ ನಡೆಸಲಾಗುತ್ತದೆ. ಶ್ರದ್ದಾಂಜಲಿಗಾಗಿ ಪುನೀತ್ ಕಟೌಟ್ ಬ್ಯಾನರ್ ಸಿದ್ಧತೆ ಮಾಡಲಾಗಿದ್ದು, ಏಕ ಕಾಲಕ್ಕೆ ಎಲ್ಲಾ ಕಡೆ ಶ್ರದ್ದಾಂಜಲಿ ಸಲ್ಲಿಸಲಾಗುತ್ತದೆ. ಚಿತ್ರಮಂದಿರದ ಮಾಲೀಕರು, ಸಿಬ್ಬಂದಿ, ಪ್ರೇಕ್ಷಕರು, ಅಭಿಮಾನಿಗಳು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ:

ಅರಳಿಮರ ಎಲೆಯ ಮೇಲೆ ಪುನೀತ್ ರಾಜಕುಮಾರ್ ಚಿತ್ರ ಬರೆದು ತನ್ನ ಪ್ರೀತಿ ಮತ್ತು ಅಭಿಮಾನ ವ್ಯಕ್ತಪಡಿಸಿದ ಕಲಾವಿದ

Marakkar: ಮೋಹನ್​ಲಾಲ್ ‘ಮರಕ್ಕರ್​’ ಚಿತ್ರದ ಕ್ರಾಂತಿಕಾರಕ ನಿರ್ಧಾರ; ‘ಆರ್​ಆರ್​ಆರ್​’, ‘ಕೆಜಿಎಫ್​ 2’ ಭವಿಷ್ಯವೇನು?

Follow us on

Related Stories

Most Read Stories

Click on your DTH Provider to Add TV9 Kannada