ಅಪ್ಪು ಮೇಲೆ ಜನರಿಟ್ಟ ಅಭಿಮಾನಕ್ಕೆ ಸಾಟಿ ಇಲ್ಲ; ಪುನೀತ್​ ಸಮಾಧಿ ಬಳಿ ಜನಸಾಗರ ಇನ್ನೂ ಕಮ್ಮಿ ಆಗಿಲ್ಲ

ಅಪ್ಪು ಮೇಲೆ ಜನರಿಟ್ಟ ಅಭಿಮಾನಕ್ಕೆ ಸಾಟಿ ಇಲ್ಲ; ಪುನೀತ್​ ಸಮಾಧಿ ಬಳಿ ಜನಸಾಗರ ಇನ್ನೂ ಕಮ್ಮಿ ಆಗಿಲ್ಲ

TV9 Web
| Updated By: ಮದನ್​ ಕುಮಾರ್​

Updated on: Nov 07, 2021 | 9:58 AM

Puneeth Rajkumar Samadhi: ಪುನೀತ್​ ರಾಜ್​ಕುಮಾರ್​ ಇಹಲೋಕ ತ್ಯಜಿಸಿ 9 ದಿನ ಕಳೆದರೂ ಕೂಡ ಇಂದಿಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಸಮಾಧಿ ದರ್ಶನಕ್ಕೆ ಮುಗಿ ಬೀಳುತ್ತಿದ್ದಾರೆ. ಅಪ್ಪು ಮೇಲೆ ಜನರು ಇಟ್ಟಿದ್ದ ಅಭಿಮಾನಕ್ಕೆ ಈ ಜನಸಾಗರವೇ ಸಾಕ್ಷಿ.

ಪುನೀತ್​ ರಾಜ್​ಕುಮಾರ್​ ನಿಧನರಾಗಿ ಒಂದು ವಾರಕ್ಕೂ ಹೆಚ್ಚು ಕಾಲ ಆಗಿದೆ. ಆದರೂ ಕೂಡ ಅಭುಮಾನಿಗಳ ಎದೆಯಲ್ಲಿ ನೋವು ಕಿಂಚಿತ್ತೂ ಕಮ್ಮಿ ಆಗಿಲ್ಲ. ಪ್ರತಿ ದಿನ ಲಕ್ಷಾಂತರ ಜನರು ಬಂದು ಅಪ್ಪು ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಬೆಳ್ಳಂಬೆಳಗ್ಗೆಯೇ ಕಂಠೀರವ ಸ್ಟುಡಿಯೋ ಆವರಣದಲ್ಲಿ ಜನರು ಜಮಾಯಿಸುತ್ತಿದ್ದಾರೆ. ಸರದಿ ಸಾಲಿನಲ್ಲಿ ನಿಂತು ನೆಚ್ಚಿನ ನಟನ ಸಮಾಧಿಗೆ ಕೈ ಮುಗಿಯುತ್ತಿದ್ದಾರೆ. ಕಣ್ಣೀರು ಸುರಿಸಿ ಶ್ರದ್ಧಾಂಜಲಿ ಕೋರುತ್ತಿದ್ದಾರೆ. ಅಪ್ಪು ಇಹಲೋಕ ತ್ಯಜಿಸಿ 9 ದಿನ ಕಳೆದರೂ ಕೂಡ ಇಂದಿಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಸಮಾಧಿ ದರ್ಶನಕ್ಕೆ ಮುಗಿ ಬೀಳುತ್ತಿದ್ದಾರೆ.

ಅಪ್ಪು ಮೇಲೆ ಜನರು ಇಟ್ಟಿರುವ ಅಭಿಮಾನಕ್ಕೆ ಸಾಟಿಯೇ ಇಲ್ಲ. ಸಮಾಧಿ ಬಳಿ ಬರುತ್ತಿರುವ ಜನಸಾಗರವೇ ಈ ಮಾತಿಗೆ ಸಾಕ್ಷಿ. ಎಲ್ಲವೂ ಸುಸೂತ್ರವಾಗಿ ನಡೆಯಲಿ ಎಂದು 500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಪುನೀತ್​ ಮಾಡಿದ ಸಮಾಜಸೇವೆಯ ಕಾರಣದಿಂದ ಅವರನ್ನು ದೇವರಂತೆ ಕಾಣುವ ಅನೇಕರು ಇದ್ದಾರೆ. ಹಾಗಾಗಿ ಸಮಾಧಿ ಎದುರು ಮದುವೆ ಆಗಬೇಕು ಎಂದು ಕೆಲವು ಪ್ರೇಮಿಗಳು ಬರುತ್ತಿರುವುದು ವಿಶೇಷ.

ಇದನ್ನೂ ಓದಿ:

ಅಪ್ಪು ಸಮಾಧಿ ಬಳಿ ಮದುವೆ ಆಗೋರಿಗೆ ರಾಜ್​ ಕುಟುಂಬದಿಂದ ಒಂದು ಕಂಡೀಷನ್​; ಇದನ್ನು ಪಾಲಿಸಲೇಬೇಕು

ಪುನೀತ್​ ನಿವಾಸಕ್ಕೆ ಬಂದು ಸಾಂತ್ವನ ಹೇಳಿದ ಜಯಪ್ರದಾ; ಅಪ್ಪು ನೆನೆದು ಕಣ್ಣೀರಿಟ್ಟ ಹಿರಿಯ ನಟಿ