ಯಾದಗಿರಿ: ಪುನೀತ್ ಪ್ರೇರಣೆ; ಇಬ್ಬರು ದಂಪತಿಗಳು ದೇಹದಾನಕ್ಕೆ ಹಾಗೂ 52 ಜನರು ನೇತ್ರದಾನಕ್ಕೆ ನೋಂದಣಿ
Puneeth Rajkumar: ನಟ ಪುನೀತ್ ರಾಜಕುಮಾರ್ ಅವರ ಪ್ರೇರಣೆಯಿಂದ ಯಾದಗಿರಿಯಲ್ಲಿ ಎರಡು ಜೋಡಿಗಳು ದೇಹದಾನಕ್ಕೆ ಹಾ ಗೂ 52 ಜನೆರು ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದಾರೆ.
ಯಾದಗಿರಿ: ನಟ ಪುನೀತ್ ರಾಜಕುಮಾರ್ ತಮ್ಮ ನಿಧನದ ನಂತರ ನೇತ್ರದಾನ ಮಾಡಿ ಸಾರ್ಥಕತೆ ಮೆರೆದಿದ್ದರು. ಇದು ಅವರ ಅಪಾರ ಅಭಿಮಾನಿ ಬಳಗಕ್ಕೆ ಸ್ಫೂರ್ತಿ ತುಂಬಿದ್ದು, ರಾಜ್ಯದೆಲ್ಲೆಡೆ ನೇತ್ರದಾನಕ್ಕೆ ಜನರು ನೋಂದಾಯಿಸುತ್ತಿದ್ದಾರೆ. ಯಾದಗಿರಿಯಲ್ಲಿ ಎರಡು ಜೋಡಿಗಳು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲರಿಗೂ ಆದರ್ಶವಾಗಿದ್ದಾರೆ. ನಟ ಪುನೀತ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ದೇಹ ದಾನ ಮಾಡುವುದಾಗಿ ಅವರು ನೋಂದಣಿ ಮಾಡಿಸಿದ್ದಾರೆ. ಹನುಮಯ್ಯ ದಂಪತಿ ಹಾಗೂ ಮಲ್ಲಿಕಾರ್ಜುನ ದಂಪತಿಗಳು ದೇಹದಾನ ಮಾಡುವುದಾಗಿ ತಿಳಿಸಿದ್ದಾರೆ.
ಯಾದಗಿರಿ ನಿವಾಸಿಗಳಾದ ಹನುಮಯ್ಯ ದಂಪತಿ ಹಾಗೂ ಮಲ್ಲಿಕಾರ್ಜುನ ದಂಪತಿಗಳು, ನಗರದ ಗಂಜ್ ಬಳಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ದೇಹದಾನ ಮಾಡುವುದಾಗಿ ನೋಂದಣಿ ಮಾಡಿಸಿದ್ದಾರೆ. ರಿಮ್ಸ್ ಆಸ್ಪತ್ರೆಗೆ ದೇಹದಾನ ಮಾಡುವುದಾಗಿ ಅವರು ತಿಳಿಸಿದ್ದಾರೆ. ಇದರೊಂದಿಗೆ 52 ಜನ ಪುನೀತ್ ಅಭಿಮಾನಿಗಳು ನೇತ್ರದಾನಕ್ಕೆ ನೋಂದಾಯಿಸಿದ್ಧಾರೆ. ಈ ಮೂಲಕ ಯಾದಗಿರಿಯ ಅಭಿಮಾನಿಗಳು ಮಾದರಿಯಾಗಿದ್ದಾರೆ.
ಪುನೀತ್ ಹಾಗೂ ಸಂಚಾರಿ ವಿಜಯ್ ಪ್ರೇರಣೆ; ರಾಜ್ಯದಲ್ಲಿ ನೇತ್ರದಾನ ಶೇ.20-30 ರಷ್ಟು ಹೆಚ್ಚಳ ಬೆಂಗಳೂರು: ರಾಜ್ಯದಲ್ಲಿ ಪುನೀತ್ ರಾಜಕುಮಾರ್ ಹಾಗೂ ಸಂಚಾರಿ ವಿಜಯ್ ನೇತ್ರದಾನ ಮಾಡಿದ ನಂತರ ಜನರಲ್ಲಿ ಈ ಕುರಿತು ಜಾಗೃತಿ ಹೆಚ್ಚಾಗಿದೆ. ಪರಿಣಾಮವಾಗಿ, ನೇತ್ರದಾನಕ್ಕೆ ಮುಂದಾಗುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಈ ಕುರಿತಂತೆ ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತಾ ಹೇಳಿಕೆ ನೀಡಿದ್ದು, ‘‘ರಾಜ್ಯದಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಸಂಚಾರಿ ವಿಜಯ್, ಪುನಿತ್ ನಿಧನದ ಬಳಿಕ ಹೆಚ್ಚಾಗಿದೆ. ನೇತ್ರದಾನ ಮಾಡಲು ಯುವಕರು ಮುಂದೆ ಬರುತ್ತಿದ್ದಾರೆ. ಇದರೊಂದಿಗೆ ನಾವು ಕೂಡ ಪಾಕ್ಷಿಕ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಪರಿಣಾಮವಾಗಿ ನೇತ್ರದಾನ ಮಾಡುವವರ ಸಂಖ್ಯೆ ಶೇ.20-30ರಷ್ಟು ಹೆಚ್ಚಳವಾಗಿದೆ’’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
Puneeth Rajkumar: ಪುನೀತ್ ರಾಜಕುಮಾರ್, ಸಂಚಾರಿ ವಿಜಯ್ ಪ್ರೇರಣೆ; ರಾಜ್ಯದಲ್ಲಿ ನೇತ್ರದಾನ ಶೇ.20-30ರಷ್ಟು ಹೆಚ್ಚಳ