Puneeth Rajkumar: ಪುನೀತ್ ರಾಜಕುಮಾರ್, ಸಂಚಾರಿ ವಿಜಯ್ ಪ್ರೇರಣೆ; ರಾಜ್ಯದಲ್ಲಿ ನೇತ್ರದಾನ ಶೇ.20-30ರಷ್ಟು ಹೆಚ್ಚಳ

Sanchari Vijay: ನಟ ಪುನೀತ್ ರಾಜಕುಮಾರ್ ಹಾಗೂ ಸಂಚಾರಿ ವಿಜಯ್ ಮೊದಲಾದ ಖ್ಯಾತನಾಮರು ನೇತ್ರದಾನ ಮಾಡಿರುವುದು ಅಭಿಮಾನಿಗಳಿಗೆ ಹಾಗೂ ಜನಸಾಮಾನ್ಯರಿಗೆ ಮಾದರಿಯಾಗಿದೆ. ಇದರ ಪರಿಣಾಮ ನೇತ್ರದಾನ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

Puneeth Rajkumar: ಪುನೀತ್ ರಾಜಕುಮಾರ್, ಸಂಚಾರಿ ವಿಜಯ್ ಪ್ರೇರಣೆ; ರಾಜ್ಯದಲ್ಲಿ ನೇತ್ರದಾನ ಶೇ.20-30ರಷ್ಟು ಹೆಚ್ಚಳ
ಸಂಚಾರಿ ವಿಜಯ್, ಪುನೀತ್ ರಾಜಕುಮಾರ್
Follow us
TV9 Web
| Updated By: shivaprasad.hs

Updated on:Nov 06, 2021 | 3:05 PM

ಬೆಂಗಳೂರು: ರಾಜ್ಯದಲ್ಲಿ ಪುನೀತ್ ರಾಜಕುಮಾರ್ ಹಾಗೂ ಸಂಚಾರಿ ವಿಜಯ್ ನೇತ್ರದಾನ ಮಾಡಿದ ನಂತರ ಜನರಲ್ಲಿ ಈ ಕುರಿತು ಜಾಗೃತಿ ಹೆಚ್ಚಾಗಿದೆ. ಪರಿಣಾಮವಾಗಿ, ನೇತ್ರದಾನಕ್ಕೆ ಮುಂದಾಗುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಈ ಕುರಿತಂತೆ ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತಾ ಹೇಳಿಕೆ ನೀಡಿದ್ದಾರೆ. ‘‘ರಾಜ್ಯದಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಸಂಚಾರಿ ವಿಜಯ್, ಪುನಿತ್ ನಿಧನದ ಬಳಿಕ ಹೆಚ್ಚಾಗಿದೆ. ನೇತ್ರದಾನ ಮಾಡಲು ಯುವಕರು ಮುಂದೆ ಬರುತ್ತಿದ್ದಾರೆ. ಇದರೊಂದಿಗೆ ನಾವು ಕೂಡ ಪಾಕ್ಷಿಕ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಪರಿಣಾಮವಾಗಿ ನೇತ್ರದಾನ ಮಾಡುವವರ ಸಂಖ್ಯೆ ಶೇ.20-30ರಷ್ಟು ಹೆಚ್ಚಳವಾಗಿದೆ’’ ಎಂದು ಅವರು ತಿಳಿಸಿದ್ದಾರೆ.

ನಟ ಪುನೀತ್ ರಾಜಕುಮಾರ್ ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಪುನೀತ್ ಕಣ್ಣುಗಳಿಂದ ಒಟ್ಟು ನಾಲ್ಕು ಮಂದಿಗೆ ದೃಷ್ಟಿ ಬಂದಿತ್ತು. ಡಾ.ರಾಜಕುಮಾರ್ ಕೂಡ ನೇತ್ರದಾನ ಮಾಡಿ, ಇಬ್ಬರಿಗೆ ದೃಷ್ಟಿ ಒದಗಿಸಿದ್ದರು. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಪುನೀತ್ ನೇತ್ರಗಳಿಂದ ನಾಲ್ವರಿಗೆ ದೃಷ್ಟಿ ಒದಗಿಸಲಾಗಿತ್ತು. ಇದು ಅಭಿಮಾನಿಗಳಿಗೆ ಹಾಗೂ ಜನರಿಗೆ ಬಹುದೊಡ್ಡ ಮಟ್ಟದಲ್ಲಿ ಪ್ರೇರಣೆ ನೀಡಿದ್ದು, ಸ್ವಯಂಪ್ರೇರಿತವಾಗಿ ನೇತ್ರದಾನಕ್ಕೆ ಮುಂದಾಗುತ್ತಿದ್ದಾರೆ.

ದಾವಣಗೆರೆ: ನೇತ್ರದಾನಕ್ಕೆ ವಾಗ್ದಾನ ಮಾಡಿದ 30 ಜನ ಪುನೀತ್ ಅಭಿಮಾನಿಗಳು ದಾವಣಗೆರೆ: ನಟ ಪುನೀತ್ ರಾಜ್‍ಕುಮಾರ್​​ಗೆ ವಿಶಿಷ್ಟ ರೀತಿಯ ಗೌರವ ಅರ್ಪಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿ ತಾಂಡದಲ್ಲಿ‌ ನಾಳೆ ಪುನೀತ್ ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಅಭಿಮಾನಿಗಳಿಂದ ನೇತ್ರದಾನಕ್ಕೆ ವಾಗ್ದಾನ ಮಾಡಲಾಗುತ್ತದೆ. ಚಟ್ಟೋಬನಹಳ್ಳಿ‌ ತಾಂಡಾದ ಸೇವಾಲಾಲ್ ಸಂಘದಿಂದ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಕಾರ್ಯಕ್ರಮದಲ್ಲಿ 30 ಜನ ಪುನೀತ್ ಅಭಿಮಾನಿಗಳು ನೇತ್ರದಾನಕ್ಕೆ ವಾಗ್ದಾನ ಮಾಡಲಿದ್ದಾರೆ.

ಇದನ್ನೂ ಓದಿ:

‘ಸಮಾಜ ಸೇವೆ ಮಾಡಿದ ಅಪ್ಪು​ ಯಾವ ದೇವರಿಗೂ ಕಮ್ಮಿ ಇಲ್ಲ’; ಸಮಾಧಿ ಬಳಿ ಮದುವೆ ಆಗಲು ಬಂದ ಪ್ರೇಮಿಗಳ ಮಾತು

Puneeth Rajkumar: ಪುನೀತ್ ಕಾಣಿಸಿಕೊಂಡಿದ್ದ ‘ಗಂಧದ ಗುಡಿ’ ಬಿಡುಗಡೆ ಯಾವಾಗ?; ಇಲ್ಲಿದೆ ಮಾಹಿತಿ

Published On - 2:59 pm, Sat, 6 November 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ