‘ಸಮಾಜ ಸೇವೆ ಮಾಡಿದ ಅಪ್ಪು​ ಯಾವ ದೇವರಿಗೂ ಕಮ್ಮಿ ಇಲ್ಲ’; ಸಮಾಧಿ ಬಳಿ ಮದುವೆ ಆಗಲು ಬಂದ ಪ್ರೇಮಿಗಳ ಮಾತು

‘ಸಮಾಜ ಸೇವೆ ಮಾಡಿದ ಅಪ್ಪು​ ಯಾವ ದೇವರಿಗೂ ಕಮ್ಮಿ ಇಲ್ಲ’; ಸಮಾಧಿ ಬಳಿ ಮದುವೆ ಆಗಲು ಬಂದ ಪ್ರೇಮಿಗಳ ಮಾತು

TV9 Web
| Updated By: ಮದನ್​ ಕುಮಾರ್​

Updated on: Nov 06, 2021 | 2:28 PM

ಅನೇಕ ಸಮಾಜಮುಖಿ ಕಾರ್ಯಗಳನ್ನು ಪುನೀತ್​ ರಾಜ್​ಕುಮಾರ್​ ಮಾಡುತ್ತಿದ್ದರು. ಹಾಗಾಗಿ ಅವರನ್ನು ದೇವರು ಎಂದೇ ಗೌರವಿಸುತ್ತಾರೆ ಅನೇಕ ಅಭಿಮಾನಿಗಳು. ಈಗ ಅವರ ಸಮಾಧಿ ಎದುರು ಪ್ರೇಮಿಗಳು ಮದುವೆ ಆಗುತ್ತಿದ್ದಾರೆ.

ಬಳ್ಳಾರಿಯಿಂದ ಬಂದಿರುವ ಗಂಗಾ ಮತ್ತು ಗುರು ಪ್ರಸಾದ್ ಎಂಬ ಪ್ರೇಮಿಗಳು ಪುನೀತ್​ ರಾಜ್​ಕುಮಾರ್​ ಸಮಾಧಿ ಎದುರು ಮದುವೆ ಆಗಲು ನಿರ್ಧರಿಸಿದ್ದಾರೆ. ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಇಬ್ಬರಿಗೂ ಪುನೀತ್​ ರಾಜ್​ಕುಮಾರ್​ ಎಂದರೆ ಅಪಾರ ಅಭಿಮಾನ. ಅದೇ ಕಾರಣಕ್ಕೆ ಅಪ್ಪು ಸಮಾಧಿ ಎದುರು ಮದುವೆ ಆಗಲು ರಾಜ್​ ಕುಟುಂಬದವರಿಂದ ಅನುಮತಿ ಪಡೆದುಕೊಂಡಿದ್ದಾರೆ. ‘ಜಾತಕ ತೋರಿಸಿ, ದೇವಸ್ಥಾನದಲ್ಲಿ ಮದುವೆ ಆಗುವುದು ಸಹಜ. ಹಾಗಂತ ದೇವಸ್ಥಾನದಲ್ಲಿ ಮದುವೆ ಆದವರು ಜೀವನ ಪರ್ಯಂತ ಚೆನ್ನಾಗಿ ಇರುತ್ತಾರೆ ಎಂದು ಹೇಳೋಕಾಗಲ್ಲ. ಪುನೀತ್​ ಮಾಡಿದ ಸಮಾಜ ಸೇವೆ ನೋಡಿದರೆ ಅವರಿಗಿಂತ ದೊಡ್ಡ ದೇವರು ಯಾರೂ ಇಲ್ಲ ಎನಿಸುತ್ತದೆ’ ಎಂಬುದು ಗಂಗಾ ಅವರ ಮಾತುಗಳು.

‘ಪುನೀತ್​ ಬದುಕಿದಿದ್ದರೆ ಮದುವೆ ಬಳಿಕ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದುಕೊಳ್ಳಬೇಕು ಎಂದುಕೊಂಡಿದ್ವಿ. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಅವರ ಸಮಾಧಿ ಎದುರು ಮದುವೆ ಆಗುತ್ತೇವೆ. ರಾಘಣ್ಣ ಮತ್ತು ಶಿವಣ್ಣ ಅವರಿಗೆ ಫೋನ್​ ಮಾಡಿ ಅನುಮತಿ ಪಡೆದಿದ್ದೇವೆ. ಅವರು ಬರಬೇಕು ಎಂದು ಕೇಳಿಕೊಳ್ಳುತ್ತೇನೆ’ ಎಂದು ಗುರು ಪ್ರಸಾದ್​ ಹೇಳಿದ್ದಾರೆ.

ಇದನ್ನೂ ಓದಿ:

ಪುನೀತ್​ ಸಾವಿನ ಬಗ್ಗೆ ಮೂಡಿದೆ ಅನುಮಾನ; ವೈದ್ಯರ ವಿರುದ್ಧ ದೂರು ದಾಖಲು

ಪುನೀತ್​ ಸಮಾಧಿಗೆ ಪ್ರತಿದಿನ 20 ಸಾವಿರ ಮಂದಿ ಭೇಟಿ; ಕಂಠೀರವ ಸ್ಟುಡಿಯೋದಲ್ಲಿ ಈಗ ಹೇಗಿದೆ ಪರಿಸ್ಥಿತಿ?