ಪುನೀತ್ ಎದೆನೋವಿನೊಂದಿಗೆ ಕ್ಲಿನಿಕ್​​​​​ಗೆ ಬಂದಾಗ ಸೂಕ್ತ ಚಿಕಿತ್ಸೆ ನೀಡಿ ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವ ಸಲಹೆ ನೀಡಲಾಯಿತು: ಡಾ ರಮಣ ರಾವ್

ಪುನೀತ್ ಎದೆನೋವಿನೊಂದಿಗೆ ಕ್ಲಿನಿಕ್​​​​​ಗೆ ಬಂದಾಗ ಸೂಕ್ತ ಚಿಕಿತ್ಸೆ ನೀಡಿ ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವ ಸಲಹೆ ನೀಡಲಾಯಿತು: ಡಾ ರಮಣ ರಾವ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 06, 2021 | 4:41 PM

ಎದೆನೋವು ಅಂತ ಬರುವ ರೋಗಿಗಳ ಇಸಿಜಿ ಮಾಡುವುದು, ಸಬ್ಲಿಂಗುವಲ್ ಸಾರ್ಬಿಟ್ರೇಟ್ ಮತ್ತು ಚ್ಯುಯೇಬಲ್ ಡಿಸ್ಪಿರಿನ್ ಮಾತ್ರೆ ಕೊಡುವುದು ಕ್ರಮ. ಪುನೀತ್ ಅವರ ಇಸಿಜಿ ಮಾಡಿದಾಗ ಅದರಲ್ಲಿ ಸ್ಟ್ರೇನ್ ಕಾಣಿಸಿದ್ದರಿಂದ ಈ ಮಾತ್ರೆಗಳನ್ನು ಕೂಡಲೇ ನೀಡಲಾಯಿತು ಅಂತ ಡಾ ರಾವ್ ಹೇಳಿದರು

ಡಾ ರಾಜಕುಮಾರ್ ಅವರ ಫ್ಯಾಮಿಲಿ ವೈದ್ಯ ಡಾ ರಮಣರಾವ್ ಅವರ ಬಗ್ಗೆ ಪುನೀತ್ ರಾಜಕುಮಾರ ಅವರ ಅಭಿಮಾನಿಗಳು ಅಸಮಾಧಾನ ಮತ್ತು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅವರ ಬೇಸರಕ್ಕೆ ಕಾರಣವೆಂದರೆ, ಕಳೆದ ಶುಕ್ರವಾರ ಪುನೀತ್ ಎದೆ ನೋವಿನಿಂದ ಡಾ ರಾವ್ ಅವರಲ್ಲಿಗೆ ಹೋದಾಗ ಸರಿಯಾದ ಚಿಕಿತ್ಸೆ ನೀಡಲು ಅವರು ವಿಫಲರಾದರು, ಅವರನ್ನು ಬದುಕಿಸಬಹುದಿತ್ತು ಎಂದು ಹೇಳುತ್ತಿದ್ದಾರೆ. ಆದರೆ ಪುನೀತ್ ಅವರ ಅರೋಗ್ಯ ಸ್ಥಿತಿ ಆಗ ಹೇಗಿತ್ತು ಅನ್ನೋದು ಎಲ್ಲರಿಗಿಂತ ಚೆನ್ನಾಗಿ ಡಾ ರಾವ್ ಅವರಿಗೆ ಗೊತ್ತಿತ್ತು. ಇದೇ ಸಂಬಂಧವಾಗಿ, ಜನರ ಅನುಮಾನಗಳಿಗೆ ಪರಿಹಾರ ಸಿಗುವಂತಾಗಲು ಟಿವಿ9 ನಿರೂಪಕ ಆನಂದ ಬುರ್ಲಿ ವೈದ್ಯರನ್ನು ಅವರ ಕ್ಲಿನಿಕ್ ನಲ್ಲಿ ಶನಿವಾರ ಮಾತಾಡಿಸಿದರು.

ಅಭಿಮಾನಿಗಳಲ್ಲಿರುವ ಸಂದೇಹವನ್ನು ಅನಂದ ಬುರ್ಲಿ ಹೇಳಿದಾಗ ಡಾ ರಾವ್ ಅವರು ತಮ್ಮ ಕ್ಲಿನಿಕ್ ಒಂದು ಕನ್ಸಲ್ಟೇಷನ್ ಕೋಣೆಯೇ ಹೊರತು ಆಸ್ಪತ್ರೆಯಲ್ಲ ಎನ್ನುವುದದನ್ನು ಮೊದಲು ಸ್ಪಷ್ಟಪಡಿಸಿದರು.

ಎದೆನೋವು ಅಂತ ಬರುವ ರೋಗಿಗಳ ಇಸಿಜಿ ಮಾಡುವುದು, ಸಬ್ಲಿಂಗುವಲ್ ಸಾರ್ಬಿಟ್ರೇಟ್ ಮತ್ತು ಚ್ಯುಯೇಬಲ್ ಡಿಸ್ಪಿರಿನ್ ಮಾತ್ರೆ ಕೊಡುವುದು ಕ್ರಮ. ಪುನೀತ್ ಅವರ ಇಸಿಜಿ ಮಾಡಿದಾಗ ಅದರಲ್ಲಿ ಸ್ಟ್ರೇನ್ ಕಾಣಿಸಿದ್ದರಿಂದ ಈ ಮಾತ್ರೆಗಳನ್ನು ಕೂಡಲೇ ನೀಡಲಾಯಿತು. ಪವರ್ ಸ್ಟಾರ್ ಅವರಲ್ಲಿಗೆ ಬಂದಾಗ ಅವರ ಓರಲ್ ಕಮಾಂಡ್ಸ್ ಗೆ ಪ್ರತಿಕ್ರಿಯಿಸುತ್ತಿದ್ದರು. ಅದಲ್ಲದೆ ಅವರ ಹೃದಯ ಬಡಿತ ಮತ್ತು ನಾಡಿ ಮಿಡಿತ ನಾರ್ಮಲ್ ಆಗಿದ್ದವು. ಆದಾಗ್ಯೂ ಮುಂದಿನ ಕ್ರಮವಾಗಿ ಅವರನ್ನು ಒಂದು ದೊಡ್ಡ ಆಸ್ಪತ್ರೆಗೆ ಅತಿ ಜರೂರಾಗಿ ಮಾಡಬೇಕಾದ ಕೆಲಸವಾಗಿತ್ತು ಅಂತ ಡಾ ರಾವ್ ಹೇಳಿದರು.

ಹಾಗಾಗಿ ಅವರನ್ನು ಕೂಡಲೇ ಎಲ್ಲ ಸೌಲಭ್ಯಗಳಿರುವ ಒಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾಗಿ ಡಾ ರಮಣ ರಾವ್ ಹೇಳಿದರು.

ಇಸಿಜಿಯಲ್ಲಿ ಸ್ಟ್ರೇನ್ ಕಾಣಿಸಿದ್ದರಿಂದ ಅಪ್ಪು ಅವರಿಗೆ ಸಬ್ಲಿಂಗ್ಯುವಲ್ ಸಾರ್ಬಿಟ್ರೇಟ್ ಮತ್ತು ಚ್ಯುಯೇಬಲ್ ಡಿಸ್ಪಿರಿನ್ ಮಾತ್ರೆ ಕೊಟ್ಟಿದ್ದನ್ನು ಡಾ ರಾವ್ ಎರಡೆರಡು ಬಾರಿ ಸ್ಪಷ್ಟಪಡಿಸಿದರು.

ಇದನ್ನೂಓದಿ:  ಕೊರೊನಾ ವ್ಯಾಕ್ಸಿನ್ ಪಡೆಯಲು ಹುಬ್ಬಳ್ಳಿಯ ಇಸ್ಲಾಂಪುರ್ ವಾಸಿಗಳಿಂದ ಅಡ್ಡಿ; ವಿಡಿಯೋ ನೋಡಿ