AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar: ಪುನೀತ್ ಕಾಣಿಸಿಕೊಂಡಿದ್ದ ‘ಗಂಧದ ಗುಡಿ’ ಬಿಡುಗಡೆ ಯಾವಾಗ?; ಇಲ್ಲಿದೆ ಮಾಹಿತಿ

ನಟ ಪುನೀತ್ ರಾಜಕುಮಾರ್ ಕಾಣಿಸಿಕೊಂಡಿದ್ದ ಗಂಧದ ಗುಡಿಯ ಬಿಡುಗಡೆಗೆ ಯೋಜಿಸಲಾಗುತ್ತಿದೆ. ಈ ಕುರಿತು ಆಪ್ತಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Puneeth Rajkumar: ಪುನೀತ್ ಕಾಣಿಸಿಕೊಂಡಿದ್ದ ‘ಗಂಧದ ಗುಡಿ’ ಬಿಡುಗಡೆ ಯಾವಾಗ?; ಇಲ್ಲಿದೆ ಮಾಹಿತಿ
‘ಗಂಧದ ಗುಡಿ’ಯ ಮೊದಲ ಪೋಸ್ಟರ್
TV9 Web
| Edited By: |

Updated on:Nov 06, 2021 | 1:17 PM

Share

ನಟ ಪುನೀತ್ ರಾಜಕುಮಾರ್ ಕಾಣಿಸಿಕೊಂಡಿದ್ದ ರಾಜ್ಯದ ವನ್ಯಸಂಪತ್ತಿನ ಕುರಿತಾದ ಚಿತ್ರವೊಂದನ್ನು ನವೆಂಬರ್ 1ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆ ಚಿತ್ರಕ್ಕಾಗಿ ಲಾಕ್​ಡೌನ್ ವೇಳೆ 2 ತಿಂಗಳು ಪುನೀತ್ ಕಾಡು ಸುತ್ತಿದ್ದರು. ಆ ಸಮಯದಲ್ಲಿ ಕಾಡಿನಲ್ಲಿ ಕಳೆದ ಕ್ಷಣಗಳನ್ನು ಚಿತ್ರೀಕರಣ ಮಾಡಲಾಗಿತ್ತು. ಅದನ್ನು ನವೆಂಬರ್ 1 ರಂದು ಬಿಡುಗಡೆ ಮಾಡಲು ತೀರ್ಮಾನಿಸಿ, ಒಂದು ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿತ್ತು. ನಮ್ಮ ನಾಡಿನ ಕಾಡುಗಳು, ವನ್ಯಜೀವಿ ಸಂಪತ್ತನ್ನು ಕುರಿತ ಚಿತ್ರ ಅದಾಗಿದ್ದು, ‘ಗಂಧದ ಗುಡಿ’ ಎಂದು ಹೆಸರಿಡಲು ಉದ್ದೇಶಿಸಲಾಗಿತ್ತು. 90 ನಿಮಿಷಗಳ ಆ ಚಿತ್ರವನ್ನು ರಾಜ್ಯೋತ್ಸವದ ದಿನ ಬಿಡುಗಡೆ ಮಾಡುವ ಕನಸನ್ನು ಪುನೀತ್ ಕಂಡಿದ್ದರು. ಆದರೆ ಆ ಕನಸು ನನಸಾಗುವ ಮುನ್ನವೇ ಪುನೀತ್ ನಿಧನ ಹೊಂದಿದ್ದರು. ಇದೀಗ ಪುನೀತ್ ರಾಜಕುಮಾರ್ ಆಪ್ತವಲಯದಿಂದ ಬಂದಿರುವ ಮಾಹಿತಿಯ ಪ್ರಕಾರ, ಅಪ್ಪು ಅವರ 11 ದಿನದ ಕಾರ್ಯ ಮುಗಿದ ನಂತರ ರಿಲೀಸ್​ಗೆ ಚಿಂತನೆ ನಡೆಸಲಾಗಿದೆ. ಪುನೀತ್ ಪತ್ನಿ ಅಶ್ವಿನಿ ಅವರೊಂದಿಗೆ ಚರ್ಚಿಸಿ, ಬಳಿಕ ಬಿಡುಗಡೆ ಕುರಿತು ಯೋಜಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

ನಟ ಪುನೀತ್ ಮನೆಗೆ ಪ್ರಿಯಾಮಣಿ ಭೇಟಿ: ನಟ ಪುನೀತ್ ರಾಜ್​ಕುಮಾರ್​ ಮನೆಗೆ ಪ್ರಿಯಾಮಣಿ ಭೇಟಿ ನೀಡಿ ಪತ್ನಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಪ್ರಿಯಾಮಣಿ ಅವರು ಪುನೀತ್ ಜೊತೆ, ರಾಮ್, ಅಣ್ಣಾಬಾಂಡ್ ಸಿನಿಮಾದಲ್ಲಿ ನಟಿಸಿದ್ದರು. ಪುನೀತ್​ ನಿಧನದ ಸುದ್ದಿ ತಿಳಿದು ಪ್ರಿಯಾ ಕಂಬನಿ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಮಣಿ ಕಂಬನಿ ಮಿಡಿದಿದ್ದರು.

Priyamani

ಪುನೀತ್ ನಿವಾಸಕ್ಕೆ ಪ್ರಿಯಾಮಣಿ ಭೇಟಿ, ಶಿವರಾಜ್ ಕುಮಾರ್ ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ:

Puneeth Rajkumar: ಅನಧಿಕೃತವಾಗಿ ಪುನೀತ್ ಪುತ್ಥಳಿ ಪ್ರತಿಷ್ಠಾಪಿಸಬೇಡಿ, ಅನುಮತಿ ಪಡೆಯಿರಿ: ಅಭಿಮಾನಿಗಳಿಗೆ ಬಿಬಿಎಂಪಿ ಸೂಚನೆ

Puneeth Rajkumar: ಪುನೀತ್​ಗೆ ಪದ್ಮ ಪ್ರಶಸ್ತಿ ನೀಡಲು ಅಭಿಮಾನಿಗಳ ಒತ್ತಾಯ; ಅಗತ್ಯ ಕ್ರಮಕ್ಕೆ ಮುಂದಾದ ಸರ್ಕಾರ

Published On - 1:10 pm, Sat, 6 November 21

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್