AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar: ಪುನೀತ್ ಸಮಾಧಿ ದರ್ಶನದ ಅವಧಿ ಇಂದು 7 ಗಂಟೆವರೆಗೆ ವಿಸ್ತರಣೆ; ನಾಳೆ ಕಾರ್ಯ ಮುಗಿಸಿದ ನಂತರ ದರ್ಶನಕ್ಕೆ ಅವಕಾಶ

ಇಂದು ಪುನೀತ್ ಸಮಾಧಿಯ ದರ್ಶನ ಪಡೆಯಲು ಹೆಚ್ಚು ಜನರು ಆಗಮಿಸಿರುವ ಕಾರಣ, ಸಂಜೆ 7ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಾಳೆ, ಪುನೀತ್ 11ನೇ ದಿನದ ಕಾರ್ಯಗಳು ಮುಗಿದ ನಂತರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

Puneeth Rajkumar: ಪುನೀತ್ ಸಮಾಧಿ ದರ್ಶನದ ಅವಧಿ ಇಂದು 7 ಗಂಟೆವರೆಗೆ ವಿಸ್ತರಣೆ; ನಾಳೆ ಕಾರ್ಯ ಮುಗಿಸಿದ ನಂತರ ದರ್ಶನಕ್ಕೆ ಅವಕಾಶ
ಪುನೀತ್ ಸಮಾಧಿಯ ಚಿತ್ರ
TV9 Web
| Updated By: shivaprasad.hs|

Updated on:Nov 07, 2021 | 4:16 PM

Share

ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿ ನಟ ಪುನೀತ್ ಸಮಾಧಿ ದರ್ಶನಕ್ಕೆ ವೀಕೆಂಡ್ ಆಗಿರುವ ಕಾರಣ ಇಂದು ರಾಜ್ಯದ ವಿವಿಧ ಭಾಗದಿಂದ ಜನರು ಆಗಮಿಸಿದ್ದಾರೆ. ಕಿಲೋ ಮೀಟರ್​ಗಟ್ಟಲೆ ಸಾಲು ನಿರ್ಮಾಣವಾಗಿದ್ದು, ಜನರು ಸರದಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಹೆಚ್ಚು ಜನರು ಆಗಮಿಸಿರುವ ಕಾರಣ, ಪುನೀತ್ ಸಮಾಧಿ ದರ್ಶನಕ್ಕೆ 1 ಗಂಟೆ ಸಮಯ ವಿಸ್ತರಣೆ ಮಾಡಲಾಗಿದೆ. ಇದುವರೆಗೆ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು. ಇಂದು ಸಂಜೆ 7 ಗಂಟೆವರೆಗೆ ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಳೆ ನಟ ಪುನೀತ್‌ರ 11ನೇ ದಿನದ ಕಾರ್ಯದ ಹಿನ್ನೆಲೆಯಲ್ಲಿ ನಾಳೆ ಅಪ್ಪು ಕುಟುಂಬಸ್ಥರು ಸಮಾಧಿ ಸ್ಥಳಕ್ಕೆ ಬರಲಿದ್ದಾರೆ. ಹೀಗಾಗಿ ನಾಳೆ ಸಾರ್ವಜನಿಕರಿಗೆ ಸಮಾಧಿ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಪುನೀತ್ ಕಾರ್ಯ ಮುಗಿದ ನಂತರ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ನಾಳೆ ಬೆಳಗ್ಗೆ 9:45 ರ ವೇಳೆಗೆ ರಾಜಕುಮಾರ್ ಕುಟುಂಬಸ್ಥರು ಸಮಾಧಿ ಬಳಿ ಆಗಮಿಸಲಿದ್ದು, 11ನೇ ದಿನದ ಕಾರ್ಯ ನಡೆಸಲಿದ್ದಾರೆ. ಮೊದಲು ಸಮಾಧಿ ಬಳಿಯ ಕಾರ್ಯ ಮುಗಿಸಿ ನಂತರ ಮನೆಯಲ್ಲಿ ಕಾರ್ಯಗಳು ನಡೆಯಲಿದೆ. ಕುಟುಂಬದವರು ಸಮಾಧಿ ಬಳಿ ಬಂದು ವಿಧಿ ವಿಧಾನ ಕಾರ್ಯಗಳನ್ನು ಮುಗಿಸಿ ಹೋಗುವವರೆಗೂ ಅಭಿಮಾನಿಗಳಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. ಕುಟುಂಬದವರು ತೆರಳಿದ ಬಳಿಕ ಅಭಿಮಾನಿಗಳಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ನಟ ಪುನೀತ್​ಗೆ ಬಸವಶ್ರೀ ಪ್ರಶಸ್ತಿ ಘೋಷಣೆ; ಮುರುಘಾಶ್ರೀಗಳಿಗೆ ಅಭಿಮಾನಿಗಳಿಂದ ಅಭಿನಂದನೆ ನಟ ಪುನೀತ್ ರಾಜಕುಮಾರ್​ಗೆ ಮುರುಘಾಮಠದಿಂದ ಬಸವಶ್ರೀ ಪ್ರಶಸ್ತಿ ಘೋಷಣೆ ಹಿನ್ನೆಲೆಯಲ್ಲಿ ಚಿತ್ರದುರ್ಗದ ಮುರುಘಾಶ್ರೀಗಳಿಗೆ ಅಪ್ಪು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮುರುಘಾಮಠಕ್ಕೆ ತೆರಳಿರುವ ಅಪ್ಪು ಅಭಿಮಾನಿಗಳು, ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ವಂದನೆ ಸಲ್ಲಿಸಿದ್ದಾರೆ. ನಟ ಪುನೀತ್ ರಾಜಕುಮಾರ್​ಗೆ ಮರಣೋತ್ತರ‌ ಬಸವಶ್ರೀ ಪ್ರಶಸ್ತಿ ಘೋಷಿಸಲಾಗಿತ್ತು.

ಇದನ್ನೂ ಓದಿ:

ನಟ ಪುನೀತ್​ಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಗಣ್ಯರ ಒತ್ತಾಯ; ದನಿಗೂಡಿಸಿದ ಆನಂದ್ ಸಿಂಗ್, ಬಿಸಿ ಪಾಟೀಲ್, ನಟ ಪ್ರೇಮ್

ರಿಲೀಸ್​ಗೂ ಮೊದಲೇ ಸಂಕಷ್ಟಕ್ಕೆ ಸಿಲುಕಿದ ‘ಪುಷ್ಪ’; ಚಿಂತೆಗೀಡಾದ ಅಲ್ಲು ಅರ್ಜುನ್​?

Published On - 3:51 pm, Sun, 7 November 21