‘ಮುಗಿಲ್ಪೇಟೆ’ ರಿಲೀಸ್ಗೂ ಮೊದಲು ಮಗ ಮನೋರಂಜನ್ಗೆ ಒಂದು ಸೂಚನೆ ನೀಡಿದ ರವಿಚಂದ್ರನ್
ಮನು ಅವರಿಗೆ ನಾಯಕಿಯಾಗಿ ಕಯಾದು ಲೋಹರ್ ನಟಿಸಿದ್ದಾರೆ. ರಿಷಿ, ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು ಮೊದಲಾದ ಕಲಾವಿದರು ‘ಮುಗಿಲ್ ಪೇಟೆ’ಯಲ್ಲಿ ಅಭಿನಯಿಸಿದ್ದಾರೆ
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ‘ಮುಗಿಲ್ಪೇಟೆ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಕಯಾದು ಲೋಹರ್ ಚಿತ್ರದ ನಾಯಕಿ. ‘ಮುಗಿಲ್ಪೇಟ್’ ಸಿನಿಮಾ ನ.19ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ರಿಲೀಸ್ ಆಗುವುದಕ್ಕೂ ಮೊದಲು ಮನೋರಂಜನ್ಗೆ ಚಾಮುಂಡಿ ತಾಯಿಯ ದರ್ಶನ ಮಾಡಿ ಬರುವಂತೆ ರವಿಚಂದ್ರನ್ ಹೇಳಿದ್ದಾರೆ.
ಮನು ಅವರಿಗೆ ನಾಯಕಿಯಾಗಿ ಕಯಾದು ಲೋಹರ್ ನಟಿಸಿದ್ದಾರೆ. ರಿಷಿ, ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು ಮೊದಲಾದ ಕಲಾವಿದರು ‘ಮುಗಿಲ್ ಪೇಟೆ’ಯಲ್ಲಿ ಅಭಿನಯಿಸಿದ್ದಾರೆ. ರವಿವರ್ಮ (ಗಂಗು) ಅವರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಡಾ.ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಹರ್ಷ, ಮುರಳಿ, ಮೋಹನ್ ನೃತ್ಯ ನಿರ್ದೇಶನ, ಹಾಗೂ ಸತೀಶ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರವನ್ನು ಮೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿದ್ದಾರೆ.
ಇದನ್ನೂ ಓದಿ: ರವಿಚಂದ್ರನ್ ಪುತ್ರರ ಬಗ್ಗೆ ಕಾಕ್ರೋಚ್ ಸುಧಿ ವಿಶೇಷ ಮಾತು; ‘ಕನಸುಗಾರ’ ನೆನಪಿಸಿದ ಮನು-ವಿಕ್ರಮ್