Vikram: ಕಮಲ್ ಹಾಸನ್ಗೆ 50 ಕೋಟಿ ರೂ. ಸಂಬಳ; ವಿಜಯ್ ಸೇತುಪತಿ, ಫಹಾದ್ ಫಾಸಿಲ್ಗೆ ಎಷ್ಟು?
Kamal Haasan Remuneration: ಫಹಾದ್ ಫಾಸಿಲ್ ಅವರು ಬಹುಭಾಷೆಯಲ್ಲಿ ಫೇಮಸ್ ಆಗಿದ್ದಾರೆ. ಅವರಿಗೆ ಭರ್ಜರಿ ಡಿಮ್ಯಾಂಡ್ ಇದೆ. ಅದೇ ರೀತಿ ವಿಜಯ್ ಸೇತುಪತಿ ಕೂಡ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ.
ಬಹಳ ವರ್ಷಗಳ ಬಳಿಕ ಪ್ರೇಕ್ಷಕರ ಎದುರು ಬಂದಿರುವ ಕಮಲ್ ಹಾಸನ್ (Kamal Haasan) ಅವರು ಭರ್ಜರಿ ಗೆಲುವು ಕಂಡಿದ್ದಾರೆ. ಅವರು ನಟಿಸಿರುವ ‘ವಿಕ್ರಮ್’ (Vikram Movie) ಸಿನಿಮಾಗೆ ಅತ್ಯುತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಮೊದಲ ದಿನವೇ ಈ ಚಿತ್ರ ಅಬ್ಬರಿಸಿದೆ. ವೀಕೆಂಡ್ನಲ್ಲೂ ಮೋಡಿ ಮಾಡುತ್ತಿದೆ. ಒಟ್ಟಿನಲ್ಲಿ ಇದೊಂದು ಸೂಪರ್ ಹಿಟ್ ಸಿನಿಮಾ ಎಂಬುದು ಖಚಿತವಾಗಿದೆ. ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಬುದ್ಧಿವಂತಿಕೆಗೆ ಜನರು ಭೇಷ್ ಎನ್ನುತ್ತಿದ್ದಾರೆ. ತಮಿಳಿನ ಬೇರೆ ಬೇರೆ ಸಿನಿಮಾಗಳಿಗೆ ಲಿಂಕ್ ಕೊಡುವ ಮೂಲಕ ‘ವಿಕ್ರಮ್’ ಚಿತ್ರದ ಕಥೆಯನ್ನು ಅವರು ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ. ಪ್ರತಿ ದಿನ ಬಹುಕೋಟಿ ರೂಪಾಯಿ ಗಳಿಸುತ್ತಿರುವ ಈ ಸಿನಿಮಾದ ಗೆಲುವಿನಿಂದ ಇಡೀ ಚಿತ್ರತಂಡ ಖುಷಿ ಆಗಿದೆ. ಕಮಲ್ ಹಾಸನ್ ಜೊತೆ ನಟಿಸಿರುವ ವಿಜಯ್ ಸೇತುಪತಿ (Vijay Sethupathi), ಫಹಾದ್ ಫಾಸಿಲ್ ಮುಂತಾದವರಿಗೆ ಇದರಿಂದ ಮೈಲೇಜ್ ಹೆಚ್ಚಿದೆ. ಹಾಗಾದರೆ ಈ ಚಿತ್ರದಲ್ಲಿ ನಟಿಸಲು ಈ ಕಲಾವಿದರು ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ಮಾಹಿತಿ..
ಕಮಲ್ ಹಾಸನ್ ಅವರ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಬ್ಯಾನರ್ ಮೂಲಕ ‘ವಿಕ್ರಮ್’ ಸಿನಿಮಾ ಮೂಡಿಬಂದಿದೆ. ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಮೇಕಿಂಗ್ ಕಂಡು ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಲಾವಿದರು ಮತ್ತು ತಂತ್ರಜ್ಞರ ಸಂಭಾವನೆಗೂ ಕೋಟ್ಯಂತರ ರೂಪಾಯಿ ಸುರಿಯಲಾಗಿದೆ. ಮೂಲಗಳ ಪ್ರಕಾರ, ಕಮಲ್ ಹಾಸನ್ ಬರೋಬ್ಬರಿ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.
ಫಹಾದ್ ಫಾಸಿಲ್ ಅವರು ಬಹುಭಾಷೆಯಲ್ಲಿ ಫೇಮಸ್ ಆಗಿದ್ದಾರೆ. ಅವರಿಗೆ ಭರ್ಜರಿ ಬೇಡಿಕೆ ಇದೆ. ‘ವಿಕ್ರಮ್’ ಸಿನಿಮಾದಲ್ಲಿ ನಟಿಸಿದ್ದಕ್ಕಾಗಿ 4 ಕೋಟಿ ರೂಪಾಯಿ ನೀಡಲಾಗಿದೆ. ಅದೇ ರೀತಿ ವಿಜಯ್ ಸೇತುಪತಿ ಕೂಡ ಬಹುಬೇಡಿಕೆಯ ನಟ. ಅವರು 10 ಕೋಟಿ ರೂಪಾಯಿ ಸಂಬಳ ಪಡೆದಿದ್ದಾರೆ ಎಂದು ವರದಿ ಆಗಿದೆ. ಈ ಎಲ್ಲ ಕಲಾವಿದರ ಕಾಂಬಿನೇಷನ್ನಿಂದಾಗಿ ಸಿನಿಮಾದ ಮೆರುಗು ಹೆಚ್ಚಿದೆ.
ಇದನ್ನೂ ಓದಿ: ಕಮಲ್ ಹಾಸನ್ ‘ವಿಕ್ರಮ್’ಗೆ ಕರ್ನಾಟಕದಲ್ಲಿ ವಿರೋಧ, ಸಿನಿಮಾ ನಿಷೇಧಿಸಲು ಆಗ್ರಹ; ಚಿತ್ರತಂಡ ಮಾಡಿದ ತಪ್ಪೇನು?
ಪಾತ್ರವರ್ಗದ ರೀತಿಯೇ ತಂತ್ರಜ್ಞರ ಕೊಡುಗೆ ಕೂಡ ದೊಡ್ಡದಿದೆ. ಈ ಸೂಪರ್ ಹಿಟ್ ಸಿನಿಮಾವನ್ನು ನಿರ್ದೇಶಿಸಿದ್ದಕ್ಕಾಗಿ ಲೋಕೇಶ್ ಕನಗರಾಜ್ ಅವರು 8 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರಿಗೆ 4 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆಯಂತೆ. ಆದರೆ ಈ ಸಂಖ್ಯೆಗಳ ಬಗ್ಗೆ ಚಿತ್ರತಂಡದವರು ಅಧಿಕೃತವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.