ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ 200 ಕೋಟಿ ರೂಪಾಯಿ ಲಾಭ ಮಾಡಿದ ‘ವಿಕ್ರಮ್​’ ಸಿನಿಮಾ

ಕಮಲ್​ ಹಾಸನ್​ ನಟನೆ ಮತ್ತು ಲೋಕೇಶ್​ ಕನಗರಾಜ್​ ನಿರ್ದೇಶನಕ್ಕೆ ಪ್ರೇಕ್ಷಕರು ಭೇಷ್​ ಎಂದಿದ್ದಾರೆ. ‘ವಿಕ್ರಮ್​’ ಚಿತ್ರದ ಒಟಿಟಿ ಪ್ರಸಾರ ಹಕ್ಕುಗಳಿಗೆ ಒಳ್ಳೆಯ ಬೇಡಿಕೆ ಬಂದಿದೆ.

ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ 200 ಕೋಟಿ ರೂಪಾಯಿ ಲಾಭ ಮಾಡಿದ ‘ವಿಕ್ರಮ್​’ ಸಿನಿಮಾ
ಕಮಲ್ ಹಾಸನ್
Follow us
TV9 Web
| Updated By: ಮದನ್​ ಕುಮಾರ್​

Updated on:Jun 03, 2022 | 12:19 PM

ನಟ ಕಮಲ್​ ಹಾಸನ್​ (Kamal Haasan) ಅವರ ಸಿನಿಮಾಗಳ ಮೇಲೆ ಜನರಿಗೆ ಇರುವ ಕ್ರೇಜ್​ ಅಷ್ಟಿಷ್ಟಲ್ಲ. ಹಲವಾರು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿರುವ ಅವರು ಈಗ ‘ವಿಕ್ರಮ್​’ ಚಿತ್ರದ (Vikram Movie) ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಅದ್ದೂರಿಯಾಗಿ ಈ ಸಿನಿಮಾ ಮೂಡಿಬಂದಿದೆ. ಇಂದು (ಜೂನ್​ 3) ವಿಶ್ವಾದ್ಯಂತ ಈ ಚಿತ್ರ ರಿಲೀಸ್​ ಆಗಿದೆ. ಎಲ್ಲ ಕಡೆಗಳಲ್ಲಿ ಅತ್ಯುತ್ತಮವಾದ ಓಪನಿಂಗ್​ ಸಿಕ್ಕಿದೆ. ಇದರಿಂದ ಬಾಕ್ಸ್​ ಆಫೀಸ್​ನಲ್ಲಿ ‘ವಿಕ್ರಮ್​’ ಸಿನಿಮಾ ಭರಪೂರ ಕಮಾಯಿ ಮಾಡಲಿದೆ. ಆದರೆ ಅದಕ್ಕೂ ಮುನ್ನವೇ ಒಟಿಟಿ ಪ್ಲಾಟ್​ಫಾರ್ಮ್​ (OTT) ಮೂಲಕ ಈ ಚಿತ್ರಕ್ಕೆ 200 ಕೋಟಿ ರೂಪಾಯಿ ಬಿಸ್ನೆಸ್​ ಆಗಿದೆ ಎಂಬ ಮಾಹಿತಿ ಕೇಳಿಬಂದಿದೆ. ಒಟಿಟಿ ಮತ್ತು ಕಿರುತೆರೆ ಪ್ರಸಾರ ಹಕ್ಕುಗಳಿಂದ ಇಷ್ಟು ದೊಡ್ಡ ಮೊತ್ತ ಹರಿದುಬಂದಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ಕಮಲ್​ ಹಾಸನ್​ ಅವರ ‘ರಾಜ್​ ಕಮಲ್​ ಫಿಲ್ಮ್ಸ್​ ಇಂಟರ್​ನ್ಯಾಷನಲ್​’ ಸಂಸ್ಥೆ ಬಂಡವಾಳ ಹೂಡಿದೆ.

‘ವಿಕ್ರಮ್​’ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಕಮಲ್​ ಹಾಸನ್​ ಜೊತೆಗೆ ವಿಜಯ್​ ಸೇತುಪತಿ, ಫಹಾದ್​ ಫಾಸಿಲ್​ ಕೂಡ ಮಿಂಚಿದ್ದಾರೆ. ಸೂರ್ಯ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಈ ಕಲಾವಿದರ ಕಾಂಬಿನೇಷನ್​ ಕಾರಣದಿಂದ ಚಿತ್ರಕ್ಕೆ ಹೈವೋಲ್ಟೇಜ್​ ಬಂದಂತೆ ಆಗಿದೆ. ಇದು ಪ್ರೇಕ್ಷಕರಿಗೆ ಇಷ್ಟ ಆಗಿದೆ. ಹಾಗಾಗಿ ಚಿತ್ರದ ಒಟಿಟಿ ಪ್ರಸಾರ ಹಕ್ಕುಗಳಿಗೆ ಒಳ್ಳೆಯ ಬೇಡಿಕೆ ಬಂದಿದೆ.

ಇದನ್ನೂ ಓದಿ: ಕಮಲ್​ ಹಾಸನ್​ ನಟನೆಯ ‘ವಿಕ್ರಮ್​’ ಚಿತ್ರಕ್ಕೆ 13 ಕಡೆ ಕತ್ತರಿ ಹಾಕಿದ ಸೆನ್ಸಾರ್​ ಮಂಡಳಿ; ಸಿಕ್ಕ ಪ್ರಮಾಣಪತ್ರ ಯಾವುದು?

ಇದನ್ನೂ ಓದಿ
Image
ಕಮಲ್​ ಹಾಸನ್​ ನಟನೆಯ ‘ವಿಕ್ರಮ್​’ ಚಿತ್ರಕ್ಕೆ 13 ಕಡೆ ಕತ್ತರಿ ಹಾಕಿದ ಸೆನ್ಸಾರ್​ ಮಂಡಳಿ; ಸಿಕ್ಕ ಪ್ರಮಾಣಪತ್ರ ಯಾವುದು?
Image
‘ರಜಿನಿಕಾಂತ್​- ನಾನು ಒಳ್ಳೆಯ ಫ್ರೆಂಡ್ಸ್​, ಆದರೆ ಒಂದು ವಿಚಾರದ ಹೊರತಾಗಿ’ ಎಂದ ಕಮಲ್​ ಹಾಸನ್​; ಏನದು?
Image
ಕಮಲ್​ ಹಾಸನ್ ಜೊತೆ ಪ್ರಶಾಂತ್​ ನೀಲ್​ ಸಿನಿಮಾ? ಹೈ-ವೋಲ್ಟೇಜ್​ ಕಾಂಬಿನೇಷನ್​ ಬಗ್ಗೆ ಹೊಸ ಗುಸುಗುಸು
Image
ಕಮಲ್​ ಹಾಸನ್​ ಮಾಜಿ ಪತ್ನಿ ಸಾರಿಕಾಗೆ ಆರ್ಥಿಕ ಸಂಕಷ್ಟ; 3 ಸಾವಿರ ರೂಪಾಯಿಗಾಗಿ ಕಷ್ಟಪಟ್ಟ ಖ್ಯಾತ ನಟಿ

‘ವಿಕ್ರಮ್​’ ಸಿನಿಮಾಗೆ ಅದ್ದೂರಿಯಾಗಿ ಪ್ರಚಾರ ಮಾಡಲಾಗಿದೆ. ಬುರ್ಜ್​ ಖಲೀಫಾ ಮೇಲೆ ಕೆಲವು ದೃಶ್ಯಗಳನ್ನು ಬಿತ್ತರ ಮಾಡಲಾಯಿತು. ಬೆಂಗಳೂರಿಗೂ ಬಂದು ಕಮಲ್​ ಹಾಸನ್​ ಪ್ರಚಾರ ಮಾಡಿದರು. ಪ್ರೇಕ್ಷಕರಿಂದ ಮೊದಲ ದಿನವೇ ಈ ಸಿನಿಮಾಗೆ ಉತ್ತಮ ವಿಮರ್ಶೆ ವ್ಯಕ್ತವಾಗಿದೆ. ಹಾಗಾಗಿ ಭರ್ಜರಿ ಓಪನಿಂಗ್​ ಸಿಕ್ಕಿದೆ. ಶನಿವಾರ (ಜೂನ್​ 4) ಮತ್ತು ಭಾನುವಾರ (ಜೂನ್​ 5) ದೊಡ್ಡ ಮಟ್ಟದಲ್ಲಿ ಕಮಾಯಿ ಆಗುವ ನಿರೀಕ್ಷೆ ಇದೆ.

ನಿರ್ದೇಶಕ ಲೋಕೇಶ್​ ಕನಗರಾಜ್​ ಅವರ ಪ್ರಯತ್ನಕ್ಕೆ ಪ್ರೇಕ್ಷಕರು ಭೇಷ್​ ಎಂದಿದ್ದಾರೆ. ಸಿನಿಮಾದಲ್ಲಿ ಬರುವ ಸಾಹಸ ದೃಶ್ಯಗಳನ್ನು ಕಮಲ್​ ಹಾಸನ್​ ಫ್ಯಾನ್ಸ್​ ಮೆಚ್ಚಿಕೊಂಡಿದ್ದಾರೆ. 67ನೇ ವಯಸ್ಸಿನಲ್ಲೂ ಅವರು ಈ ಪರಿ ಆ್ಯಕ್ಷನ್​ ಮೆರೆದಿರುವುದು ಕಂಡು ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ಕರ್ನಾಟಕದಲ್ಲೂ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:19 pm, Fri, 3 June 22

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ