ಕಮಲ್ ಹಾಸನ್ ‘ವಿಕ್ರಮ್​’ಗೆ ಕರ್ನಾಟಕದಲ್ಲಿ ವಿರೋಧ, ಸಿನಿಮಾ ನಿಷೇಧಿಸಲು ಆಗ್ರಹ; ಚಿತ್ರತಂಡ ಮಾಡಿದ ತಪ್ಪೇನು?

ಕಮಲ್ ಹಾಸನ್ ‘ವಿಕ್ರಮ್​’ಗೆ ಕರ್ನಾಟಕದಲ್ಲಿ ವಿರೋಧ, ಸಿನಿಮಾ ನಿಷೇಧಿಸಲು ಆಗ್ರಹ; ಚಿತ್ರತಂಡ ಮಾಡಿದ ತಪ್ಪೇನು?
ಕಮಲ್ ಹಾಸನ್

NoKannadaNoBusiness ಎನ್ನುವ ಹ್ಯಾಶ್​ಟ್ಯಾಗ್ ಅಡಿಯಲ್ಲಿ ಟ್ವೀಟ್ ಮಾಡಲಾಗುತ್ತಿದೆ. ‘ಸಿನಿಮಾವನ್ನು ನಿಷೇಧ ಮಾಡಿ’ ಎನ್ನುವ ಒತ್ತಾಯಗಳು ಕೇಳಿ ಬಂದಿವೆ.

TV9kannada Web Team

| Edited By: Rajesh Duggumane

Jun 03, 2022 | 6:51 PM

ಕಮಲ್ ಹಾಸನ್ (Kamal Haasan) ನಟನೆಯ ‘ವಿಕ್ರಮ್’ ಸಿನಿಮಾ (Vikram Movie) ಇಂದು (ಜೂನ್ 3) ತೆರೆಗೆ ಬಂದಿದೆ. ಮೊದಲ ದಿನ ಈ ಚಿತ್ರಕ್ಕೆ ಉತ್ತಮ ವಿಮರ್ಶೆ ಕೇಳಿ ಬಂದಿದೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚೆಚ್ಚು ತೆರೆಗೆ ಬರುತ್ತಿವೆ. ಪರಭಾಷೆಯ ಸಿನಿಮಾಗಳು ಕನ್ನಡಕ್ಕೂ ಡಬ್ ಆಗಿ ತೆರೆಗೆ ಬಂದಿವೆ. ಆದರೆ, ‘ವಿಕ್ರಮ್​’ ಸಿನಿಮಾ ತಮಿಳಿನಲ್ಲಿ ಮಾತ್ರ ರಿಲೀಸ್ ಆಗಿದೆ. ಇದಕ್ಕೆ ಕರ್ನಾಟಕದಲ್ಲಿ ಅನೇಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡ ಬಳಕೆ ಮಾಡಿಲ್ಲ ಎಂದರೆ ಸಿನಿಮಾ ರಿಲೀಸ್ ಮಾಡಲೇಬಾರದು ಎನ್ನುವ ಆಗ್ರಹ ಕೇಳಿ ಬಂದಿದೆ.

ಕಮಲ್ ಹಾಸನ್ ಅವರು ನಟನೆಯಿಂದ ಅಂತರ ಕಾಯ್ದುಕೊಂಡಿದ್ದರು. ಈಗ ಲೋಕೇಶ್ ಕನಗರಾಜ್​ ಅವರ ‘ವಿಕ್ರಮ್’ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಇದೊಂದು ಪಕ್ಕಾ ಮಾಸ್​ ಆ್ಯಕ್ಷನ್ ಸಿನಿಮಾ ಅನ್ನೋದು ಟ್ರೇಲರ್​ನಲ್ಲೇ ಗೊತ್ತಾಗಿತ್ತು. ಟ್ರೇಲರ್​ನಲ್ಲಿ ತೋರಿಸಿದ ಎಲ್ಲಾ ಅಂಶಗಳು ಸಿನಿಮಾದಲ್ಲಿ ಕೊಂಚ ಹೆಚ್ಚೇ ಇದೆ. ಒಟ್ಟಾರೆ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಕೆಲವರು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕಮಲ್ ಹಾಸನ್​ ಅವರು ಚಿತ್ರದ ಪ್ರಚಾರಕ್ಕೆ ಜೂನ್ 2ರಂದು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅವರು ತಮಿಳಿನಲ್ಲೇ ಮಾತನಾಡಿದ್ದರು. ಈ ಬಗ್ಗೆಕೆಲವರು ತಕರಾರು ತೆಗೆದಿದ್ದರು. ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಇಂದು ಸಿನಿಮಾ ರಿಲೀಸ್​ ಆಗುತ್ತಿದ್ದಂತೆ ಚಿತ್ರಕ್ಕೆ ಟ್ವಿಟರ್​ನಲ್ಲಿ ಸಿನಿಮಾ ಬ್ಯಾನ್ ಮಾಡಿ ಎನ್ನುವ ಒತ್ತಾಯ ಕೇಳಿ ಬಂದಿದೆ.

NoKannadaNoBusiness ಎನ್ನುವ ಹ್ಯಾಶ್​ಟ್ಯಾಗ್ ಅಡಿಯಲ್ಲಿ ಟ್ವೀಟ್ ಮಾಡಲಾಗುತ್ತಿದೆ. ‘ಸಿನಿಮಾವನ್ನು ನಿಷೇಧ ಮಾಡಿ’ ಎನ್ನುವ ಒತ್ತಾಯಗಳು ಕೇಳಿ ಬಂದಿವೆ. ಮುಂದಿನ ದಿನಗಳಲ್ಲಿ ಇದು ತೀವ್ರ ಸ್ವರೂಪ ಪಡೆದುಕೊಂಡರೆ ‘ವಿಕ್ರಮ್’ ಚಿತ್ರದ ಕಲೆಕ್ಷನ್ ಮೇಲೆ ಹೊಡೆತ ಬೀಳಬಹುದು.

ಈ ಮೊದಲು ‘ಆರ್​ಆರ್​ಆರ್’, ‘ಪುಷ್ಪ’ ಸೇರಿ ಅನೇಕ ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ತೆರೆಗೆ ಬಂದಿವೆ. ಆದರೆ, ಬೆಂಗಳೂರಲ್ಲಿ ಕನ್ನಡ ವರ್ಷನ್​ಗೆ ಸಿಕ್ಕಿದ್ದು ಕೆಲವೇ ಕೆಲವು ಚಿತ್ರಮಂದಿರಗಳು ಮಾತ್ರ. ಈ ವಿಚಾರದ ಬಗ್ಗೆಯೂ ತೀವ್ರ ವಿರೋಧ ವ್ಯಕ್ತವಾಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada