ಬೆಂಗಳೂರಲ್ಲಿ ಹೇಗಿತ್ತು ನೋಡಿ ಕಮಲ್ ಹಾಸನ್ ‘ವಿಕ್ರಮ್’ ಸಿನಿಮಾ ಪ್ರಮೋಷನ್
ಬೆಂಗಳೂರಿಗೂ ಕಮಲ್ಗೂ ನಂಟಿದೆ. ಅವರು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ರಾಜ್ ಫ್ಯಾಮಿಲಿ ಬಗ್ಗೆ ಅವರಿಗೆ ವಿಶೇಷ ಗೌರವ ಇದೆ. ಆ ಕುರಿತಾಗಿಯೂ ಮಾತನಾಡಿದ್ದಾರೆ ಕಮಲ್ ಹಾಸನ್.
‘ವಿಕ್ರಮ್’ ಸಿನಿಮಾ (Vikram Movie) ಜೂನ್ 3ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ತೆರೆಗೆ ಬರುವುದಕ್ಕೂ ಒಂದು ದಿನ ಮೊದಲು ಅಂದರೆ ಮೇ 2ರಂದು ಕಮಲ್ ಹಾಸನ್ ಅವರು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಅವರು ಭರ್ಜರಿಯಾಗಿ ಸಿನಿಮಾ ಪ್ರಚಾರ ಮಾಡಿದ್ದಾರೆ. ಕಮಲ್ ಹಾಸನ್ ಅವರು (Kamal Haasan) ಹಲವು ದಶಕಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹೀಗಾಗಿ ಅವರ ಅಭಿಮಾನಿ ಬಳಗ ಹಿರಿದಾಗಿದೆ. ಬೆಂಗಳೂರಲ್ಲಿ ಅವರನ್ನು ನೋಡೋಕೆ ಜನಸಾಗರವೇ ಹರಿದಯ ಬಂದಿತ್ತು. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಅವರು ಮಾತನಾಡಿದರು. ಬೆಂಗಳೂರಿಗೂ ಕಮಲ್ಗೂ ನಂಟಿದೆ. ಅವರು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ರಾಜ್ ಫ್ಯಾಮಿಲಿ ಬಗ್ಗೆ ಅವರಿಗೆ ವಿಶೇಷ ಗೌರವ ಇದೆ. ಆ ಕುರಿತಾಗಿಯೂ ಮಾತನಾಡಿದ್ದಾರೆ ಕಮಲ್ ಹಾಸನ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos