ಕುವೆಂಪು, ನಾರಾಯಣ ಗುರು ಮತ್ತು ಭಗತ್ ಸಿಂಗ್ ಅವರಿಗೆ ಮಸಿ ಬಳಿಯುವ ಕೆಲಸ ರೋಹಿತ್ ಚಕ್ರತೀರ್ಥ ಮಾಡಿದ್ದಾನೆ: ಸಿದ್ದರಾಮಯ್ಯ

ರೋಹಿತ್ ತನ್ನ ಮನಬಂದಂತೆ ಪಠ್ಯಗಳನ್ನು ತಿದ್ದಿ ಭಗತ್ ಸಿಂಗ್, ನಾರಾಯಣ ಗುರು, ಕುವೆಂಪು ಮೊದಲಾದ ಮಹಾನುಭಾವರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾನೆ. ಬಿಜೆಪಿ ಸರ್ಕಾರಗಳು ಇಡೀ ದೇಶದಲ್ಲಿ ಭಯ ಮತ್ತು ಅತಂಕದ ವಾತಾವರಣ ಸೃಷ್ಟಿಸಿವೆ ಎಂದು ಸಿದ್ದರಾಮಯ್ಯ ಹೇಳಿದರು.

TV9kannada Web Team

| Edited By: Arun Belly

Jun 02, 2022 | 6:46 PM

Devanahalli: ಕಳೆದ ತಿಂಗಳು ರಾಜಸ್ತಾನದ ಉದಯಪುರನಲ್ಲಿ ನಡೆದ ಚಿಂತನ ಶಿವರ್ ಮಾದರಿಯಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (KPCC) ದೇವನಹಳ್ಳಿಯಲ್ಲಿ ಎರಡು ದಿನಗಳ (ಗುರುವಾರ ಮತ್ತು ಶುಕ್ರವಾರ) ನವ ಸಂಕಲ್ಪ ಶಿಬಿರವನ್ನು (Nava Sankalpa Shibira) ಆಯೋಜಿಸಿದೆ. ಇಲ್ಲಿನ ರೆಸಾರ್ಟ್ವೊಂದರಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹಿರಿಯ ನಾಯಕ ಸಿದ್ದರಾಮಯ್ಯನವರು (Siddaramaiah) ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ನೂರಾರು ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತಾಡಿದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವ ಮತ್ತು ಎಲ್ಲಾ ಚುನಾವಣೆಗಳಲ್ಲಿ-ವಿಧಾನ ಸಭೆ, ವಿಧಾನ ಪರಿಷತ್ತು, ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳಲ್ಲೂ ಬಿಜೆಪಿಯನ್ನು ಸೋಲಿಸುವ ಸಂಕಲ್ಪ ಮಾಡಿಕೊಳ್ಳಬೇಕು ಅಂತ ಅವರು ಹೇಳಿದರು.

ನಂತರ ಬಿಜೆಪಿ ಸರ್ಕಾರವನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು. ಪಠ್ಯಪುಸ್ತಕಗಳನ್ನು ಕುರಿತು ಸೃಷ್ಟಿಯಾಗಿರುವ ವಿವಾದವನ್ನು ಪ್ರಸ್ತಾಪಿಪಿಸಿದ ಅವರು ಆರ್ ಎಸ್ ಎಸ್ ಕಚೇರಿಯಲ್ಲಿ ಕೂತಿದ್ದ ರೋಹಿತ್ ಚಕ್ರತೀರ್ಥ ಎನ್ನುವನನ್ನು ಪಠ್ಯಪುಸ್ತಕ ಪರಷ್ಕರಣೆ ಸಮಿತಿ ಅಧ್ಯಕ್ಷನನ್ನಾಗಿ ಮಾಡಿ ಶಿಕ್ಷಣವನ್ನು ಕೇಸರಿಕರಣಗೊಳಿಸಲಾಗುತ್ತಿದೆ. ರೋಹಿತ್ ತನ್ನ ಮನಬಂದಂತೆ ಪಠ್ಯಗಳನ್ನು ತಿದ್ದಿ ಭಗತ್ ಸಿಂಗ್, ನಾರಾಯಣ ಗುರು, ಕುವೆಂಪು ಮೊದಲಾದ ಮಹಾನುಭಾವರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾನೆ. ಬಿಜೆಪಿ ಸರ್ಕಾರಗಳು ಇಡೀ ದೇಶದಲ್ಲಿ ಭಯ ಮತ್ತು ಅತಂಕದ ವಾತಾವರಣ ಸೃಷ್ಟಿಸಿವೆ ಎಂದು ಸಿದ್ದರಾಮಯ್ಯ ಹೇಳಿದರು.

ಹಾಗಾಗೇ, ಬಿಜೆಪಿಯನ್ನು ಬೂತ್ ಮಟ್ಟದಿಂದ ಕಿತ್ತುಹಾಕಬೇಕಾದ ಅನಿವಾರ್ಯತೆ ತಲೆದೋರಿದೆ. ನಮ್ಮ ಪಕ್ಷ ಬೂತ್ ಮತ್ತು ಬ್ಲಾಕ್ ಮಟ್ಟದಲ್ಲಿ ಬಲಗೊಳ್ಳಬೇಕಿದೆ. ನಾವು ಬಲಾಢ್ಯರಾಗಿ ಎಲ್ಲ ಚುನಾವಣೆಗಳನ್ನು ಗೆಲ್ಲಬೇಕಿದೆ. ಅದಕ್ಕಾಗಿ ಹೈಕಮಾಂಡ್ ಕೆಲವು ಕ್ರಮಗಳನ್ನು ಸೂಚಿಸಿದೆ, ಅಧ್ಯಕ್ಷ ಶಿವಕುಮಾರ ಅವರು ಅದನ್ನೆಲ್ಲ ನಿಮಗೆ ವಿವರಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Click on your DTH Provider to Add TV9 Kannada