ಹಾಸನ ನಗರ ಸಭಾ ಸದಸ್ಯನ ಕೊಲೆ: ಸಿಪಿಐಯನ್ನು ವಜಾ ಮಾಡಿದ ನಂತರವೇ ಮರಣೋತ್ತರ ಪರೀಕ್ಷೆಗೆ ಅವಕಾಶ ಎಂದರು ಹೆಚ್ ಡಿ ರೇವಣ್ಣ

ಹಾಸನ ನಗರ ಸಭಾ ಸದಸ್ಯನ ಕೊಲೆ: ಸಿಪಿಐಯನ್ನು ವಜಾ ಮಾಡಿದ ನಂತರವೇ ಮರಣೋತ್ತರ ಪರೀಕ್ಷೆಗೆ ಅವಕಾಶ ಎಂದರು ಹೆಚ್ ಡಿ ರೇವಣ್ಣ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 02, 2022 | 4:06 PM

ಸಿಪಿಐ ರೇಣುಕಾಪ್ರಸಾದ ಮತ್ತು ಪ್ರಶಾಂತ್ ಕೊಲೆ ನಡುವೆ ಏನು ಸಂಬಂಧ ಅಂತ ರೇವಣ್ಣನವರೇ ಮಾಧ್ಯಮದವರಿಗೆ ತಿಳಿಸಬೇಕು. ಯಾಕೆಂದರೆ, ಅವರನ್ನು ಕೆಲಸದಿಂದ ವಜಾ ಮಾಡಿ ಅಂತ ರೇವಣ್ಣ, ಹಾಸನದ ಪೊಲೀಸ್ ವರಿಷ್ಟಾಧಿಕಾರಿ ಶ್ರೀನಿವಾಸ ಗೌಡರನ್ನು ಒತ್ತಾಯಿಸುತ್ತಿದ್ದಾರೆ.

ಹಾಸನ ನಗರಸಭಾ ಸದಸ್ಯ ಪ್ರಶಾಂತ್ (Prasanth) ಅವರನ್ನು ಬುಧವಾರ ಸಾಯಂಕಾಲ ನಗರದ ಲಕ್ಷ್ಮಿ ನಗರದಲ್ಲಿ ಮಚ್ಚು, ಲಾಂಗುಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಲಾಯಿತು. ಜೆಡಿ(ಎಸ್) ಪಕ್ಷದ ಪ್ರಶಾಂತ್ (42) ಹಾಸನ ನಗರಸಭೆಯ (Hassan city corporation) 16ನೇ ವಾರ್ಡ್ನಿಂದ ಆಯ್ಕೆಯಾಗಿದ್ದರು. ಕೊಲೆಗೆ ಹಳೆ ವೈಷಮ್ಯವೇ ಕಾರಣ ಅಂತ ಹೇಳಲಾಗುತ್ತಿದೆ. 2006ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಅವರು ಅರೋಪಿಯಾಗಿದ್ದರು. ವಿಡಿಯೋನಲ್ಲಿ ಪಕ್ಷದ ಪ್ರಮುಖ ಮುಖಂಡ ಮತ್ತು ಮಾಜಿ ಸಚಿವ ಹೆಚ್ ಡಿ ರೇವಣ್ಣನವರು (HD Revanna) ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಾಣಿಸುತ್ತದೆ. ಅವರೆಲ್ಲ ನಿಂತಿರೋದು ಜೆಡಿ(ಎಸ್) ಪಕ್ಷದ ಸಂಸದ ಮತ್ತು ರೇವಣ್ಣನವರ ಪುತ್ರ ಪ್ರಜ್ವಲ್ ಅವರು ಮನೆಯ ಮುಂದೆ. ರೇವಣ್ಣನವರು ಪ್ರಶಾಂತ್ ದೇಹ ಮರಣೋತ್ತರ ಪರೀಕ್ಷೆ ನಡೆಸಲು ತೆಗೆದುಕೊಂಡು ಹೋಗುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ.

ಸಿಪಿಐ ರೇಣುಕಾಪ್ರಸಾದ ಮತ್ತು ಪ್ರಶಾಂತ್ ಕೊಲೆ ನಡುವೆ ಏನು ಸಂಬಂಧ ಅಂತ ರೇವಣ್ಣನವರೇ ಮಾಧ್ಯಮದವರಿಗೆ ತಿಳಿಸಬೇಕು. ಯಾಕೆಂದರೆ, ಅವರನ್ನು ಕೆಲಸದಿಂದ ವಜಾ ಮಾಡಿ ಅಂತ ರೇವಣ್ಣ, ಹಾಸನದ ಪೊಲೀಸ್ ವರಿಷ್ಟಾಧಿಕಾರಿ ಶ್ರೀನಿವಾಸ ಗೌಡರನ್ನು ಒತ್ತಾಯಿಸುತ್ತಿದ್ದಾರೆ. ರೇಣುಕಾಪ್ರಸಾದರನ್ನು ವಜಾ ಮಾಡಿದ ಆದೇಶದ ಪ್ರತಿ ತೋರಿಸಿದ ಬಳಿಕವೇ ಪೋಸ್ಟ್ ಮಾರ್ಟಂ ನಡೆಸಲು ಅವಕಾಶ ನೀಡುವುದಾಗಿ ಶಾಸಕರು ಪಟ್ಟು ಹಿಡಿದಿದ್ದಾರೆ.

ಪ್ರಶಾಂತ್ ಅವರ ತಂದೆ ಹೆಚ್ ಆರ್ ನಾಗರಾಜ್ ಸಹ ಹಾಸನ ನಗರಸಭಾ ಸದಸ್ಯರಾಗಿದ್ದರು ಮತ್ತು ಅವರನ್ನು 2005ರಲ್ಲಿ ಕೊಲೆ ಮಾಡಲಾಗಿತ್ತು. ಆಗಲೇ ಹೇಳಿದಂತೆ ನಗರದಲ್ಲಿ ನಡೆದ ಇನ್ನೊಂದು ಕೊಲೆ ಪ್ರಕರಣದಲ್ಲಿ ಪ್ರಶಾಂತ್ ಒಬ್ಬ ಅರೋಪಿಯಾಗಿದ್ದರು.

ರೇವಣ್ಣ ಪೊಲೀಸರಿಗೆ ತಾಕೀತು ಮಾಡುವುದರ ಜೊತೆಗೆ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೂ ಮಾತಾಡುತ್ತಿರುವುದನ್ನು ವಿಡಿಯೋನಲ್ಲಿ ನೋಡಬಹುದು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.