‘ಕರ್ನಾಟಕ ನನಗೆ ಸಾಕಷ್ಟು ಗುರುಗಳನ್ನು ಕೊಟ್ಟಿದೆ’; ‘ವಿಕ್ರಮ್’ ಸಿನಿಮಾ ಪ್ರಚಾರದ ವೇಳೆ ಅಣ್ಣಾವ್ರ ನೆನೆದ ಕಮಲ್ ಹಾಸನ್

TV9 Digital Desk

| Edited By: Rajesh Duggumane

Updated on:Jun 02, 2022 | 8:51 PM

ದಕ್ಷಿಣ ಭಾರತದ ಅನೇಕ ಸ್ಟಾರ್​ಗಳಿಗೆ ರಾಜ್​ಕುಮಾರ್ ಕುಟುಂಬದ ಜತೆ ಒಳ್ಳೆಯ ಒಡನಾಟವಿದೆ. ಇದಕ್ಕೆ ಕಮಲ್​ ಹಾಸನ್ ಕೂಡ ಹೊರತಾಗಿಲ್ಲ. ಈ ಬಗ್ಗೆ ಕಮಲ್​ ಹಾಸನ್ ಮಾತನಾಡಿದ್ದಾರೆ.

‘ಕರ್ನಾಟಕ ನನಗೆ ಸಾಕಷ್ಟು ಗುರುಗಳನ್ನು ಕೊಟ್ಟಿದೆ’; ‘ವಿಕ್ರಮ್’ ಸಿನಿಮಾ ಪ್ರಚಾರದ ವೇಳೆ ಅಣ್ಣಾವ್ರ ನೆನೆದ ಕಮಲ್ ಹಾಸನ್
ರಾಜ್​ಕುಮಾರ್-ಕಮಲ್ ಹಾಸನ್

ಕಮಲ್​ ಹಾಸನ್ (Kamal Haasan) ನಟನೆಯ ‘ವಿಕ್ರಮ್’ ಸಿನಿಮಾ (Vikram Movie) ಜೂನ್​ 3ರಂದು ತೆರೆಗೆ ಬರುತ್ತಿದೆ. ಸಿನಿಮಾ ರಿಲೀಸ್​ಗೂ ಒಂದು ದಿನ ಮೊದಲು ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಅವರು ಭರ್ಜರಿಯಾಗಿ ಸಿನಿಮಾ ಪ್ರಚಾರ ಮಾಡಿದ್ದಾರೆ. ಕಮಲ್ ಹಾಸನ್ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹೀಗಾಗಿ ಕನ್ನಡದ ಸ್ಟಾರ್ಸ್ ಜತೆ ಮತ್ತು ಬೆಂಗಳೂರಿನ ಜತೆ ಒಳ್ಳೆಯ ನಂಟಿದೆ. ಇಂದು ಬೆಂಗಳೂರಿಗೆ ಆಗಮಿಸಿದ ವೇಳೆ ಸಿನಿಮಾ ಬಗ್ಗೆ ಹೇಳುವುದರ ಜತೆಗೆ ಅವರು ಇಲ್ಲಿನ ನೆನಪು ಹಾಗೂ ರಾಜ್​ಕುಮಾರ್ ಕುಟುಂಬದ ಬಗ್ಗೆ ಮಾತನಾಡಿದ್ದಾರೆ.

ಸಾವಿರಾರು ಅಭಿಮಾನಿಗಳ ಎದುರು ಮಾತನಾಡಿದ ಕಮಲ್ ಹಾಸನ್, ‘ನನಗೆ ಬೆಂಗಳೂರಿನ ಜತೆ ಒಂದಲ್ಲ ಸಾಕಷ್ಟು ನೆನಪುಗಳು ಇವೆ. ಪುಟ್ಟಣ್ಣ ಕಣಗಾಲ್ ಸಿನಿಮಾ ರಿಲೀಸ್ ಆದರೆ ಫಸ್ಟ್ ಡೇ ಫಸ್ಟ್ ಶೋ ನೋಡೋಕೆ  ಚೆನ್ನೈನಿಂದ ಬೆಂಗಳೂರಿಗೆ ಬಾಲಚಂದರ್​ ಜೊತೆ ಬರುತ್ತಿದೆ. ನಾನು ಗಿರೀಶ್ ಕಾರ್ನಾಡ್ ಅವರ ದೊಡ್ಡ ಫ್ಯಾನ್. ಬಿ.ವಿ .ಕಾರಂತ್ ಅವರನ್ನು ಮಾತನಾಡಿಸಲು ಬರುತ್ತಿದ್ದೆ’ ಎಂದಿದ್ದಾರೆ ಅವರು.

ಕನ್ನಡದ ಕೋಕಿಲ ಸಿನಿಮಾದಲ್ಲಿ ಕಮಲ್ ಹಾಸನ್ ನಟಿಸಿದ್ದರು. ಈ ಚಿತ್ರ ತೆರೆಗೆ ಬಂದಿದ್ದು 1977ರಲ್ಲಿ. ಬಾಲು ಮಹೇಂದ್ರ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಬಗ್ಗೆ ಮಾತನಾಡಿರುವ ಅವರು, ‘ಕೋಕಿಲ ಚಿತ್ರವನ್ನು ಕನ್ನಡದಲ್ಲೇ ಮಾಡಲಾಗಿತ್ತು. ಶೂಟಿಂಗ್​ಗಾಗಿ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ನಾನು ಪರಾಗ್ ಹೋಟೆಲ್​ನಲ್ಲಿ ಉಳಿದುಕೊಳ್ಳುತ್ತಿದ್ದೆ’ ಎಂದು ಹಳೆ ನೆನಪು ತೆರೆದಿಟ್ಟಿದ್ದಾರೆ.

ಇದನ್ನೂ ಓದಿ

ಇದನ್ನೂ ಓದಿ: 1960ರಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಬಂದಿತ್ತು, ‘ಕೆಜಿಎಫ್​’ ಏನೂ ಹೊಸದಲ್ಲ ಎಂದ ಕಮಲ್ ಹಾಸನ್

ರಾಜ್​ ಕುಟುಂಬದ ಜತೆಗಿನ ನೆನಪು ಹಂಚಿಕೊಂಡ ಕಮಲ್

ದಕ್ಷಿಣ ಭಾರತದ ಅನೇಕ ಸ್ಟಾರ್​ಗಳಿಗೆ ರಾಜ್​ಕುಮಾರ್ ಕುಟುಂಬದ ಜತೆ ಒಳ್ಳೆಯ ಒಡನಾಟವಿದೆ. ಇದಕ್ಕೆ ಕಮಲ್​ ಹಾಸನ್ ಕೂಡ ಹೊರತಾಗಿಲ್ಲ. ಈ ಬಗ್ಗೆ ಕಮಲ್​ ಹಾಸನ್ ಮಾತನಾಡಿದ್ದಾರೆ. ‘ನಾನು 21ನೇ ವಯಸ್ಸಿನಲ್ಲಿ ಇದ್ದಾಗ ರಾಜ್‌ಕುಮಾರ್ ಅವರು ನನ್ನ ನಟನೆ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದರು. ‘ಪುಷ್ಪಕ ವಿಮಾನ’ ಸಿನಿಮಾ ಮೊದಲ ದಿನದ ಶೂಟಿಂಗ್​ ವೇಳೆ ಅವರು ಬಂದು ಬೆನ್ನು ತಟ್ಟಿದ್ದರು’ ಎಂದಿದ್ದಾರೆ ಕಮಲ್ ಹಾಸನ್.

‘ನನಗೆ ಕರ್ನಾಟಕ ಸಾಕಷ್ಟು ಗುರುಗಳನ್ನು ಕೊಟ್ಟಿದೆ. ಬೇರೆಯವರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಕಲಿತಿದ್ದು ರಾಜ್​ಕುಮಾರ್ ಅವರಿಂದ. ಅವರು ತಮ್ಮ ಗುಣವನ್ನು ತಮ್ಮ ಮಕ್ಕಳಿಗೂ ನೀಡಿದ್ದಾರೆ. ನಾನು ಪುನೀತ್ ಹಾಗು ಅಣ್ಣಾವ್ರು ಇಬ್ಬರನ್ನೂ ಮಿಸ್ ಮಾಡಿಕೊಳ್ಳುತ್ತೇನೆ. ಅವರ ಮನೆಗೆ ನಾನು ಹೋಗಿದ್ದೆ. ಈಗ ಎನನ್ನೂ ಮಾಡಲು ಆಗುವುದಿಲ್ಲ. ಎಲ್ಲ ವಿಧಿ ಆಟ’ ಎಂದರು ಕಮಲ್ ಹಾಸನ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada