AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಿಂಡೋ ಸೀಟ್’ ಕಥೆ ಹೇಳಲು ಬರ್ತಿದ್ದಾರೆ ತಾಳಗುಪ್ಪ ರಘು; ಜೂ.6ರಂದು ರಿಲೀಸ್​ ಆಗಲಿದೆ ಟ್ರೇಲರ್

Window Seat Movie: ನಟಿ, ನಿರೂಪಕಿ ಆಗಿ ಗುರುತಿಸಿಕೊಂಡ ಶೀತಲ್ ಶೆಟ್ಟಿ ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿರುವ ಸಿನಿಮಾ ‘ವಿಂಡೋ ಸೀಟ್’. ಈ ಚಿತ್ರದ ಟ್ರೇಲರ್​ ಬಿಡುಗಡೆಗೆ ದಿನಗಣನೆ ಶುರು ಆಗಿದೆ.

‘ವಿಂಡೋ ಸೀಟ್’ ಕಥೆ ಹೇಳಲು ಬರ್ತಿದ್ದಾರೆ ತಾಳಗುಪ್ಪ ರಘು; ಜೂ.6ರಂದು ರಿಲೀಸ್​ ಆಗಲಿದೆ ಟ್ರೇಲರ್
ನಿರೂಪ್ ಭಂಡಾರಿ
TV9 Web
| Edited By: |

Updated on:Jun 03, 2022 | 4:44 PM

Share

ರೈಲಿನಲ್ಲಿ ಓಡಾಡುವವರಿಗೆ ‘ವಿಂಡೋ ಸೀಟ್’ ಸಿನಿಮಾದ (Window Seat Movie) ಬಗ್ಗೆ ಸಾಕಷ್ಟು ಪ್ರೀತಿ ಇರುತ್ತದೆ. ಯಾಕಂದ್ರೆ ತಮ್ಮ ದೈನಂದಿನ ನೆನಪುಗಳನ್ನು ಹೊತ್ತು ತರುತ್ತಿದೆ. ಫ್ರೆಂಡ್​ಶಿಪ್, ಹೊಸ ಪರಿಚಯ, ಪ್ರೀತಿ, ಹಲವು ನೆನಪುಗಳು ಹೀಗೆ ಸಾಕಷ್ಟು ವಿಚಾರದಲ್ಲಿ ‘ವಿಂಡೋ ಸೀಟ್’ ಎಲ್ಲರ ಮನಸ್ಸಿಗೂ ಹತ್ತಿರವಾಗಿದೆ. ಸಿನಿಮಾದ ಪೋಸ್ಟರ್ ರಿಲೀಸ್ ಆದಾಗಿನಿಂದ ಹಿಡಿದು ಟೀಸರ್ ತನಕ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಇದೀಗ ರಿಲೀಸ್ ಆಗಿರುವ ರಿವೈವರ್ ಪ್ರೋಮೋದಿಂದ ಸಿನಿಮಾದ ಮೇಲಿನ ಆಸಕ್ತಿ ಇನ್ನೂ ಹೆಚ್ಚಾಗಿದೆ. ನಟಿ, ನಿರೂಪಕಿ ಆಗಿ ಗುರುತಿಸಿಕೊಂಡ ಶೀತಲ್ ಶೆಟ್ಟಿ (Sheetal Shetty) ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾವಿದು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ‘ವಿಂಡೋ ಸೀಟ್’ ಸಿನಿಮಾ ಥಿಯೇಟರ್​ನಲ್ಲಿ ಸದ್ದು ಮಾಡಬೇಕಿತ್ತು. ಆದರೆ ಕೊರೊನಾ, ಅನುಮತಿ ಅಂತೆಲ್ಲಾ ಸಾಕಷ್ಟು ತಡವಾಗಿದೆ. ಸದ್ಯ ಎಲ್ಲಾ ಕೆಲಸ ಮುಗಿಸಿರುವ ‘ವಿಂಡೋ ಸೀಟ್’ ರಿಲೀಸ್​ಗೆ ರೆಡಿಯಾಗಿದ್ದು, ಕಾದಿದ್ದು ಸಾಕಾಯ್ತು ಎಂಬುದನ್ನು ಟ್ರೇಲರ್ ಪ್ರೋಮೋದಲ್ಲಿ ಅರ್ಥ ಮಾಡಿಸುತ್ತಿದ್ದಾರೆ. ಈ ಚಿತ್ರಕ್ಕೆ ನಿರೂಪ್​ ಭಂಡಾರಿ (Nirup Bhandari) ಹೀರೋ.

ಇದೀಗ ರಿಲೀಸ್ ಆಗಿರುವ ಪ್ರೋಮೋ ಮೂಲಕ ‘ವಿಂಡೋ ಸೀಟ್’ ಸಿನಿಮಾದಲ್ಲಿ ಏನೆಲ್ಲಾ ಇರಲಿದೆ ಎಂಬುದು ಕಣ್ಣಿಗೆ ಕಾಣಿಸುತ್ತಿದೆ. ಟ್ರೇನ್​ನಲ್ಲಿ ಹೋಗುವ ಪ್ರತಿಯೊಬ್ಬರು ಬಯಸುವುದು ಆ ‘ವಿಂಡೋ ಸೀಟ್’. ರೈಲು ಹತ್ತಿದ ಕೂಡಲೇ ಹುಡುಕುವುದೇ ಆ ‘ವಿಂಡೋ ಸೀಟ್’ ಅನ್ನು. ಯಾಕಂದ್ರೆ ಆ ‘ವಿಂಡೋ ಸೀಟ್’ನಲ್ಲಿ ಕುಳಿತರೆ ಜಗತ್ತಿನ ನಾನಾ ಅದ್ಭುತಗಳು ಕಾಣಸಿಗುತ್ತವೆ. ಇದೀಗ ಹೀರೋಗೆ ‘ವಿಂಡೋ ಸೀಟ್’ನಲ್ಲಿ ಏನೆಲ್ಲಾ ಕಂಡಿದೆ ಎಂಬುದು ಅನಾವರಣವಾಗಿದೆ.

ಇದನ್ನೂ ಓದಿ: Bairagee Movie: ಶಿವಣ್ಣ, ಶರಣ್​ ಕಂಠದಲ್ಲಿ ‘ರಿದಂ ಆಫ್​ ಶಿವಪ್ಪ’ ಹಾಡು; ಹೊಸ ಸಾಂಗ್​ ಮೂಲಕ ಹೈಪ್​ ಹೆಚ್ಚಿಸಿದ ‘ಬೈರಾಗಿ’

ಇದನ್ನೂ ಓದಿ
Image
ವಿಕ್ರಂ ಪ್ರಭು ನಿರ್ದೇಶನದ ‘ವೆಡ್ಡಿಂಗ್ ಗಿಫ್ಟ್’ ಕುಟುಂಬ ಕಲಹಕ್ಕೆ ಟ್ಯಾಬ್ಲೆಟ್! ಇಂಟ್ರಸ್ಟಿಂಗ್ ಆಗಿದೆ ಟೀಸರ್
Image
ಸಖತ್ ಸ್ಪೈಸಿ ಆಗಿದೆ ‘ರಾ ರಾ ರಕ್ಕಮ್ಮ’ ಸಾಂಗ್; ಹೆಚ್ಚಿತು ‘ವಿಕ್ರಾಂತ್ ರೋಣ’ ಚಿತ್ರದ ಮೈಲೇಜ್
Image
ನಟಿ ಪ್ರೇಮಾ ‘ವೆಡ್ಡಿಂಗ್​ ಗಿಫ್ಟ್​’ ಒಪ್ಪಿಕೊಂಡಿದ್ದು ಯಾಕೆ? ಈಗ ಏನಾಗಿದೆ ಅದರ ಕಥೆ?
Image
Sheetal Shetty: ಹೆಣ್ಮಕ್ಕಳ ಅಂಗಗಳ ಬಗ್ಗೆ ಟ್ರೋಲ್​ ಪೇಜ್​ನಲ್ಲಿ ಅಶ್ಲೀಲ ಪೋಸ್ಟ್​! ಸಿಡಿದೆದ್ದ ನಟಿ ಶೀತಲ್​ ಶೆಟ್ಟಿ

ಕಾಡುವ ಹಾಡು, ನಗು, ಅಳು, ಕೋಪದ ಅನುಭವವಾಗಿದೆ. ಅಷ್ಟೇ ಅಲ್ಲ ನ್ಯಾಯಕ್ಕಾಗಿ ಹೋರಾಟವೂ ನಡೆದಿದೆ. ಜೊತೆಗೆ ಮಧುರ ಪ್ರೇಮವೂ ನಾಯಕನ ಪಾಲಾಗಿದೆ. ಇಷ್ಟೆಲ್ಲವನ್ನು ನಟ ಮನಸ್ಸಲ್ಲಿ ಅದುಮಿಟ್ಟುಕೊಂಡು ಸಾಕಾಗಿದೆ. ಹೀಗಾಗಿ ಎಲ್ಲರ ಮುಂದೆ ಕಥೆ ಹೇಳಲು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ರಘು ಸಿದ್ಧವಾಗಿದ್ದಾರೆ. ನೀವೂ ಕಾಯ್ತಾ ಇರಿ.

ಇದನ್ನೂ ಓದಿ: ಉಪೇಂದ್ರ ನಟನೆ, ನಿರ್ದೇಶನದ ಹೊಸ ಚಿತ್ರ ‘ಯುಐ’ ಮುಹೂರ್ತ; ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ

ಇದು ಜಸ್ಟ್ ಟ್ರೇಲರ್ ಪ್ರೋಮೋ. ಇದೇ ಈ ರೇಂಜಿಗಿರುವಾಗ ಇನ್ನು ಟ್ರೇಲರ್ ನೆಕ್ಸ್ಟ್​ ಲೆವೆಲ್​ಗೆ ಮನಸ್ಸನ್ನು ಹಿತಗೊಳಿಸುವುದರಲ್ಲಿ ಅನುಮಾನವೇ ಇಲ್ಲ ಅಂತಿದ್ದಾರೆ ನೋಡುಗರು. ಶೀತಲ್ ಶೆಟ್ಟಿ ನಿರ್ದೇಶನದ ‘ವಿಂಡೋ ಸೀಟ್’ ಸಿನಿಮಾವನ್ನು ಮಂಜುನಾಥ್ ಗೌಡ ನಿರ್ಮಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾವಾಗಿದ್ದು, ನಿರೂಪ್ ಭಂಡಾರಿಗೆ ಅಮೃತಾ ಅಯ್ಯಂಗಾರ್, ಸಂಜನಾ ಆನಂದ್​ ನಾಯಕಿಯಾಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:44 pm, Fri, 3 June 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್