ಉಪೇಂದ್ರ ನಟನೆ, ನಿರ್ದೇಶನದ ಹೊಸ ಚಿತ್ರ ‘ಯುಐ’ ಮುಹೂರ್ತ; ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ
Upendra | UI Movie: ಉಪೇಂದ್ರ ಅವರ ‘ಯುಐ’ ಸಿನಿಮಾದ ಮುಹೂರ್ತ ನೆರವೇರುತ್ತಿದೆ. ಈ ಕಾರ್ಯಕ್ರಮಕ್ಕೆ ಹಲವು ಸೆಲೆಬ್ರಿಟಿಗಳು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.
‘ರಿಯಲ್ ಸ್ಟಾರ್’ ಉಪೇಂದ್ರ (Upendra) ಅವರು ಮತ್ತೆ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ಅವರ ಹೊಸ ಚಿತ್ರ ‘ಯುಐ’ (UI Movie) ಮೇಲೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಡಿಫರೆಂಟ್ ಆದಂತಹ ಶೀರ್ಷಿಕೆ ಮತ್ತು ಪೋಸ್ಟರ್ಗಳ ಮೂಲಕ ಅಭಿಮಾನಿಗಳ ತಲೆಗೆ ಉಪ್ಪಿ ಹುಳ ಬಿಟ್ಟಿದ್ದಾರೆ. ಇಂದು (ಜೂನ್ 3) ಈ ಸಿನಿಮಾದ ಮುಹೂರ್ತ ಸಮಾರಂಭ ನೆರವೇರುತ್ತಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಅದಕ್ಕೆ ಸ್ಯಾಂಡಲ್ವುಡ್ನ (Sandalwood) ಅನೇಕ ಸ್ಟಾರ್ ಕಲಾವಿದರು ಆಗಮಿಸುತ್ತಿದ್ದಾರೆ. ಸಿನಿಮಾದ ಬಗ್ಗೆ ಉಪೇಂದ್ರ ಮತ್ತು ಅವರ ತಂಡದವರು ಒಂದಷ್ಟು ಮಾಹಿತಿ ಹಂಚಿಕೊಳ್ಳಲಿದ್ದಾರೆ. ಭರ್ಜರಿಯಾಗಿ ನೆರವೇರುತ್ತಿರುವ ಮುಹೂರ್ತ ಸಮಾರಂಭದ ಲೈವ್ ವಿಡಿಯೋ ಇಲ್ಲಿದೆ..
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

