I am R Movie: ಉಪೇಂದ್ರ- ಆರ್​ಜಿವಿ ಕಾಂಬಿನೇಷನ್​ನ ಹೊಸ ಚಿತ್ರ ‘ಐ ಆ್ಯಮ್​ ಆರ್’ ಫಸ್ಟ್​​ ಲುಕ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

Ram Gopal Varma | Kichcha Sudeep | Upendra: ‘ಐ ಆ್ಯಮ್ ಆರ್’ ಚಿತ್ರದ ಮೊದಲ ಲುಕ್​ಅನ್ನು ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ ‘ಡೆಡ್ಲಿಯೆಸ್ಟ್ ಗ್ಯಾಂಗ್​​ಸ್ಟರ್ ಎವರ್’ (I am R- The Deadliest Gangster Ever) ಎಂಬ ಟ್ಯಾಗ್​ಲೈನ್ ನೀಡಲಾಗಿದೆ. ಸ್ಯಾಂಡಲ್​ವುಡ್​ ತಾರೆ ಕಿಚ್ಚ ಸುದೀಪ್ ‘ಆರ್’ ಚಿತ್ರದ ಮೊದಲ ಲುಕ್ ಬಿಡುಗಡೆಗೊಳಿಸಿದ್ದಾರೆ.

I am R Movie: ಉಪೇಂದ್ರ- ಆರ್​ಜಿವಿ ಕಾಂಬಿನೇಷನ್​ನ ಹೊಸ ಚಿತ್ರ ‘ಐ ಆ್ಯಮ್​ ಆರ್’ ಫಸ್ಟ್​​ ಲುಕ್ ರಿಲೀಸ್ ಮಾಡಿದ ಕಿಚ್ಚ ಸುದೀಪ್
‘ಐ ಆ್ಯಮ್ ಆರ್​’ ಟೈಟಲ್​ ಲಾಂಚ್ ಮಾಡಿದ ಕಿಚ್ಚ ಸುದೀಪ್, ಚಿತ್ರದ ಮೊದಲ ಪೋಸ್ಟರ್​
Follow us
TV9 Web
| Updated By: shivaprasad.hs

Updated on:Apr 24, 2022 | 10:40 AM

ರಾಮ್ ಗೋಪಾಲ್ ವರ್ಮಾ (Ram Gopal Varma) ಹಾಗೂ ಉಪೇಂದ್ರರಿಗೆ (Upendra) ತಮ್ಮದೇ ಆದ ಅಭಿಮಾನಿ ಬಳಗವಿದೆ. ಅವರ ವಿಶಿಷ್ಟ ಶೈಲಿಯ ಚಿತ್ರಗಳಿಂದಾಗಿ ಈರ್ವರೂ ಭಾಷೆಗಳಾಚೆಗೆ ಪ್ರೇಕ್ಷಕರಿಗೆ ಪರಿಚಯ. ನಿರ್ದೇಶಕ ರಾಮ್​ ಗೋಪಾಲ್ ವರ್ಮಾ ತೆಲುಗು, ಹಿಂದಿ ಚಿತ್ರರಂಗಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದರೂ, ಕನ್ನಡದಲ್ಲಿ ‘ಕಿಲ್ಲಿಂಗ್ ವೀರಪ್ಪನ್’ ನಿರ್ದೇಶಿಸಿ ಗಮನ ಸೆಳೆದಿದ್ದರು. ಉಪೇಂದ್ರ ಈಗಾಗಲೇ ತಮ್ಮದೇ ಶೈಲಿಯ ಸಿನಿಮಾಗಳಿಂದ ತೆಲುಗು ಸೇರಿದಂತೆ ಇತರ ಭಾಷೆಗಳ ಪ್ರೇಕ್ಷಕರಿಗೆ ಪರಿಚಯ. ಈರ್ವರ ಕಾಂಬಿನೇಷನ್​ನಲ್ಲಿ ಗ್ಯಾಂಗ್​ಸ್ಟರ್ ಕತೆಯೊಂದನ್ನು ಅನೌನ್ಸ್ ಮಾಡಲಾಗಿತ್ತು. ಚಿತ್ರಕ್ಕೆ ‘ಐ ಆ್ಯಮ್​ ಆರ್’ ಎಂದು ಹೆಸರಿಡಲಾಗಿತ್ತು. ಇದೀಗ ಮೊದಲ ಲುಕ್​ಅನ್ನು ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ ‘ಡೆಡ್ಲಿಯೆಸ್ಟ್ ಗ್ಯಾಂಗ್​​ಸ್ಟರ್ ಎವರ್’ (R- The Deadliest Gangster Ever) ಎಂಬ ಟ್ಯಾಗ್​ಲೈನ್ ನೀಡಲಾಗಿದೆ. ಸ್ಯಾಂಡಲ್​ವುಡ್​ ತಾರೆ ಕಿಚ್ಚ ಸುದೀಪ್ ‘ಐ ಆ್ಯಮ್​ ಆರ್’ ಚಿತ್ರದ ಮೊದಲ ಲುಕ್​ ಅನ್ನು ಬಿಡುಗಡೆಗೊಳಿಸಿದ್ದಾರೆ.

ಕಿಚ್ಚ ಸುದೀಪ್ ಲಾಂಚ್ ಮಾಡಿದ ‘ಈ ಯಾಮ್ ಆರ್’ ಮೊದಲ ಲುಕ್ ಇಲ್ಲಿದೆ:

ಕನ್ನಡ, ತಮಿಳು, ಹಿಂದಿ ಹಾಗೂ ತೆಲುಗಿನಲ್ಲಿ ಚಿತ್ರ ರಿಲೀಸ್ ಆಗಲಿದ್ದು, ‘ಎ ಸ್ಕ್ವಾರ್ ಪ್ರೊಡಕ್ಷನ್ಸ್’ ಬ್ಯಾನರ್​ನಲ್ಲಿ ರಾಜ್ ಯಜಮಾನ್ ನಿರ್ಮಾಣ ಮಾಡಲಿದ್ದಾರೆ. ಉಪೇಂದ್ರ- ರಾಮ್ ಗೋಪಾಲ್ ವರ್ಮಾ ಹೊಸ ಸಾಹಸದ ಮೊದಲ ಲುಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಕರ್ನಾಟಕದ ಖ್ಯಾತ ರಾಜಕಾರಣಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಉಪೇಂದ್ರ ಹೊಸ ಚಿತ್ರಕ್ಕೆ ರಾಮ್​ ಗೋಪಾಲ್ ವರ್ಮ ನಿರ್ದೇಶನ; ಗ್ಯಾಂಗ್​ಸ್ಟರ್​ ಕಥೆಯಲ್ಲಿ ಉಪ್ಪಿ

Ashika Ranganath: ‘ಅವತಾರ ಪುರುಷ’ ಬೆಡಗಿ ಆಶಿಕಾ ರಂಗನಾಥ್ ಕ್ಯೂಟ್ ಫೋಟೋ ಆಲ್ಬಂ

Published On - 10:39 am, Sun, 24 April 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ