Katrina Kaif: ತೆರೆ ಹಿಂದಿನ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್​; ವಿಜಯ್​ ಸೇತುಪತಿ ಜತೆ ಕೆಲಸ ಕೆಲಸ ಕೆಲಸ

Merry Christmas | Vijay Sethupathi: ‘ಮೇರಿ ಕ್ರಿಸ್​ಮಸ್​’ ಚಿತ್ರದ ಬಗ್ಗೆ ಕತ್ರಿನಾ ಕೈಫ್​ ಅವರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರ ಜತೆ ವಿಜಯ್​ ಸೇತುಪತಿ ಕೂಡ ನಟಿಸುತ್ತಿದ್ದಾರೆ.

Katrina Kaif: ತೆರೆ ಹಿಂದಿನ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್​; ವಿಜಯ್​ ಸೇತುಪತಿ ಜತೆ ಕೆಲಸ ಕೆಲಸ ಕೆಲಸ
ಕತ್ರಿನಾ ಕೈಫ್, ವಿಜಯ್ ಸೇತುಪತಿ
Follow us
TV9 Web
| Updated By: ಮದನ್​ ಕುಮಾರ್​

Updated on: Sep 19, 2022 | 12:20 PM

ನಟಿ ಕತ್ರಿನಾ ಕೈಫ್​ (Katrina Kaif) ಅವರು ಹಲವು ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬಾಲಿವುಡ್​ನಲ್ಲಿ ಅವರಿಗೆ ಸಖತ್​ ಡಿಮ್ಯಾಂಡ್ ಇದೆ. ವಿಕ್ಕಿ ಕೌಶಲ್​ ಜೊತೆ ಮದುವೆ ಆದ ಬಳಿಕವೂ ಅವರು ಅನೇಕ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿ​ದ್ದಾರೆ. ‘ಮೇರಿ ಕ್ರಿಸ್​ಮಸ್​’, ‘ಫೋನ್​ ಭೂತ್​’, ‘ಟೈಗರ್​ 3’ ಸೇರಿದಂತೆ ಹಲವು ಚಿತ್ರಗಳು ಅವರ ಕೈಯಲ್ಲಿವೆ. ಸದ್ಯ ಅವರು ‘ಮೇರಿ ಕ್ರಿಸ್​ಮಸ್​’ (Merry Christmas) ಚಿತ್ರದ ಶೂಟಿಂಗ್​ನಲ್ಲಿ ಭಾಗಿ ಆಗಿದ್ದಾರೆ. ಈ ಸಿನಿಮಾದ ಚಿತ್ರೀಕರಣದ ಸೆಟ್​ನಿಂದಲೇ ಕೆಲವು ಫೋಟೋಗಳನ್ನು ಕತ್ರಿನಾ ಕೈಫ್​ ಹಂಚಿಕೊಂಡಿದ್ದಾರೆ. ‘ಕೆಲಸ ಕೆಲಸ ಕೆಲಸ’ ಎಂದು ಅವರು ಕ್ಯಾಪ್ಷನ್​ ನೀಡಿದ್ದಾರೆ. ಈ ಚಿತ್ರದಲ್ಲಿ ಅವರು ಖ್ಯಾತ ನಟ ವಿಜಯ್​ ಸೇತುಪತಿ (Vijay Sethupathi) ಜತೆ ನಟಿಸುತ್ತಿದ್ದಾರೆ.

‘ಮೇರಿ ಕ್ರಿಸ್​ಮಸ್​’ ಚಿತ್ರಕ್ಕೆ ಶ್ರೀರಾಮ್​ ರಾಘವನ್​ ನಿರ್ದೇಶನ ಮಾಡುತ್ತಿದ್ದಾರೆ. ಕ್ಲ್ಯಾಪ್​ ಬೋರ್ಡ್​ ಫೋಟೋವನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಕತ್ರಿನಾ ಕೈಫ್​​ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಶ್ರೀರಾಮ್ ರಾಘವನ್​ ಮತ್ತು ವಿಜಯ್​ ಸೇತುಪತಿ ಅವರ ಫೋಟೋಗಳನ್ನು ಸ್ವತಃ ತಾವೇ ಕ್ಲಿಕ್ಕಿಸಿರುವ ಅವರು ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಈ ಚಿತ್ರದ ಬಗ್ಗೆ ಕತ್ರಿನಾ ಕೈಫ್​ ಅವರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2021ರಲ್ಲಿ ಅವರು ಈ ಚಿತ್ರದ ಬಗ್ಗೆ ಸಖತ್​ ಖುಷಿಯಿಂದ ಘೋಷಣೆ ಮಾಡಿದ್ದರು. ‘ಇದು ಹೊಸ ಆರಂಭ. ಶ್ರೀರಾಮ್​ ರಾಘವನ್​ ಅವರ ಜೊತೆ ಕೆಲಸ ಮಾಡಬೇಕು ಅಂತ ನಾನು ಯಾವಾಗಲೂ ಅಂದುಕೊಳ್ಳುತ್ತಿದ್ದೆ. ಥ್ರಿಲ್ಲರ್​ ಸಿನಿಮಾಗಳನ್ನು ಕಟ್ಟಿಕೊಡುವುದರಲ್ಲಿ ಅವರು ಮಾಸ್ಟರ್​. ಅವರ ನಿರ್ದೇಶನದಲ್ಲಿ ನಟಿಸಲು ಹೆಮ್ಮೆ ಎನಿಸುತ್ತದೆ. ವಿಜಯ್​ ಸೇತುಪತಿ ಜತೆ ನಟಿಸಲು ಸೂಪರ್​ ಎಗ್ಸೈಟ್​ ಆಗಿದ್ದೇನೆ’ ಎಂದು ಕತ್ರಿನಾ ಕೈಫ್​ ಪೋಸ್ಟ್​ ಮಾಡಿಕೊಂಡಿದ್ದರು.

ಇದನ್ನೂ ಓದಿ
Image
Katrina Kaif: ‘ಫಸ್ಟ್​ ನೈಟ್​ ಆಗಬೇಕಂತಲೇ ಏನಿಲ್ಲ, ಫಸ್ಟ್​ ಡೇ ಕೂಡ ಆಗಬಹುದು’; ಕತ್ರಿನಾ ಕೈಫ್​ ಬೋಲ್ಡ್​ ಮಾತು 
Image
ವಿಕ್ಕಿ ಕೌಶಲ್​-ಕತ್ರಿನಾ ಕೈಫ್​ಗೆ ಬೆದರಿಕೆವೊಡ್ಡಿದ್ದು ಕೂಡ ಓರ್ವ ನಟ; ಬಯಲಾಯ್ತು ಶಾಕಿಂಗ್ ವಿಚಾರ
Image
ಪೊಲೀಸರ ಮಿಂಚಿನ ಕಾರ್ಯಾಚರಣೆ; ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ಗೆ ಬೆದರಿಕೆ ಒಡ್ಡಿದ್ದ ವ್ಯಕ್ತಿ ಅರೆಸ್ಟ್
Image
ಮಾಲ್ಡೀವ್ಸ್​​ನಲ್ಲಿ ಕತ್ರಿನಾ ಕೈಫ್ ಬರ್ತ್​ಡೇ ಸೆಲೆಬ್ರೇಷನ್; ಇಲ್ಲಿದೆ ಕ್ಯೂಟ್ ಫೋಟೋಸ್

ಇದಲ್ಲದೇ, ಕತ್ರಿನಾ ಕೈಫ್​ ನಟನೆಯ ‘ಫೋನ್​ ಭೂತ್​’ ಸಿನಿಮಾ ಕೂಡ ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರದಲ್ಲಿ ಅವರು ಇಶಾನ್​ ಖಟ್ಟರ್​ ಮತ್ತು ಸಿದ್ಧಾಂತ್​ ಚತುರ್ವೇದಿ ಜತೆ ನಟಿಸುತ್ತಿದ್ದಾರೆ. ಇದೇ ವರ್ಷ ನವೆಂಬರ್​ 4ರಂದು ಈ ಸಿನಿಮಾ ರಿಲೀಸ್​ ಆಗಲಿದೆ. ಸಲ್ಮಾನ್​ ಖಾನ್​ ಜೊತೆಗೆ ಕತ್ರಿನಾ ನಟಿಸುತ್ತಿರುವ ‘ಟೈಗರ್​ 3’ ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. 2023ರ ಏಪ್ರಿಲ್​ 23ರಂದು ಆ ಚಿತ್ರ ಬಿಡುಗಡೆ ಆಗಲಿದೆ. ಒಟ್ಟಿನಲ್ಲಿ ಕತ್ರಿನಾ ಕೈಫ್​ ಅವರು ಬಹುಬೇಡಿಕೆಯ ನಟಿಯಾಗಿ ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ