Tom Hanks: ಹಾಲಿವುಡ್​ನಲ್ಲೂ ನೆಪೋಟಿಸಂ; ಮಗನಿಗೆ ಅವಕಾಶ ನೀಡಿದ್ದನ್ನು ಸಮರ್ಥಿಸಿಕೊಂಡ ಟಾಮ್​ ಹ್ಯಾಂಕ್ಸ್​

Nepotism | Truman Hanks: ಟಾಮ್​ ಹ್ಯಾಂಕ್ಸ್​ ಅವರು ತಮ್ಮ ಹೊಸ ಸಿನಿಮಾದಲ್ಲಿ ಕಿರಿಯ ಮಗನಿಗೆ ಅವಕಾಶ ನೀಡಿದ್ದಾರೆ. ಅದರಿಂದ ನೆಪೋಟಿಸಂ ಟೀಕೆ ವ್ಯಕ್ತವಾಗಿದೆ.

Tom Hanks: ಹಾಲಿವುಡ್​ನಲ್ಲೂ ನೆಪೋಟಿಸಂ; ಮಗನಿಗೆ ಅವಕಾಶ ನೀಡಿದ್ದನ್ನು ಸಮರ್ಥಿಸಿಕೊಂಡ ಟಾಮ್​ ಹ್ಯಾಂಕ್ಸ್​
ಟಾಮ್ ಹ್ಯಾಂಕ್ಸ್, ಟ್ರೂಮನ್ ಹ್ಯಾಂಕ್ಸ್
Follow us
TV9 Web
| Updated By: ಮದನ್​ ಕುಮಾರ್​

Updated on:Jan 06, 2023 | 6:46 PM

ಬಣ್ಣದ ಲೋಕದಲ್ಲಿ ನೆಪೋಟಿಸಂ (Nepotism) ಎಂಬುದು ಎಂದಿಗೂ ಮುಗಿಯದ ಚರ್ಚೆ. ಬಹುತೇಕ ಎಲ್ಲ ಖಾಸಗಿ ಕ್ಷೇತ್ರಗಳಲ್ಲಿ ನೆಪೋಟಿಸಂ ಇದೆ. ಆದರೆ ಚಿತ್ರರಂಗದಲ್ಲಿನ ನೆಪೋಟಿಸಂ ಮಾತ್ರ ಭಾರಿ ಟೀಕೆಗೆ ಒಳಗಾಗುತ್ತಿದೆ. ಸೆಲೆಬ್ರಿಟಿಗಳ ಮಕ್ಕಳಿಗೆ ಬೇಗ ಅವಕಾಶ ಸಿಗುತ್ತದೆ ಎಂದು ಅನೇಕರು ಆಗಾಗ ಬೊಬ್ಬೆ ಹೊಡೆಯುತ್ತಾರೆ. ಸ್ಯಾಂಡಲ್​ವುಡ್​, ಬಾಲಿವುಡ್​ ಮಾತ್ರವಲ್ಲ.. ಹಾಲಿವುಡ್​ (Hollywood) ಮಂದಿ ಕೂಡ ಇದಕ್ಕೆ ಹೊರತಾಗಿಲ್ಲ. ಹಾಲಿವುಡ್​ನ ಖ್ಯಾತ ನಟ ಟಾಮ್​ ಹ್ಯಾಂಕ್ಸ್​ ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ಅವರ ಕಿರಿಯ ಪುತ್ರ ಟ್ರೂಮನ್​ ಹ್ಯಾಂಕ್ಸ್​ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಅದರ ಬೆನ್ನಲ್ಲೇ ನೆಪೋಟಿಸಂ ಟೀಕೆ ಜೋರಾಗಿದೆ. ಆದರೆ ಇದನ್ನು ಟಾಮ್​ ಹ್ಯಾಂಕ್ಸ್ (Tom Hanks)​ ಅವರು ಸಮರ್ಥಿಸಿಕೊಂಡಿದ್ದಾರೆ.

ಹಾಲಿವುಡ್​ನಲ್ಲಿ ಟಾಮ್​ ಹ್ಯಾಂಕ್ಸ್​ ಅವರಿಗೆ ಹಲವು ವರ್ಷಗಳ ಅನುಭವ ಇದೆ. ‘ಕಾಸ್ಟ್​ ಅವೇ’, ‘ಫಾರೆಸ್ಟ್​ ಗಂಪ್​’, ‘ಸೇವಿಂಗ್ ಪ್ರೈವೇಟ್​ ರಿಯಾನ್​’ ಸೇರಿದಂತೆ ಹಲವು ಗಮನಾರ್ಹ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗ ಅವರಿಗೆ 66 ವರ್ಷ ವಯಸ್ಸು. ಇಂದಿಗೂ ಕೂಡ ಬಹುಬೇಡಿಕೆಯ ನಟನಾಗಿ ಟಾಮ್​ ಹ್ಯಾಂಕ್ಸ್​ ಗುರುತಿಸಿಕೊಂಡಿದ್ದಾರೆ. ಅವರ ಕುಟುಂಬದ ಸದಸ್ಯರು ಕೂಡ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ಇದನ್ನೂ ಓದಿ: Nepotism: ಡಾಲಿ ಮೇಲೆ ನೆಪೋಟಿಸಂ ಆರೋಪ; ಪ್ರೇಮ್​ ಪುತ್ರಿಗೆ ಚಾನ್ಸ್​ ನೀಡಿದ್ದಕ್ಕೆ ನೆಟ್ಟಿಗರ ಟೀಕೆ

ಇದನ್ನೂ ಓದಿ
Image
Michael Jackson Children: ಮೈಕೆಲ್​ ಜಾಕ್ಸನ್​ ಮಕ್ಕಳು ಈಗ ಹೇಗಿದ್ದಾರೆ? ಪ್ಯಾರಿಸ್​, ಪ್ರಿನ್ಸ್​ ಕಂಡು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ ಫ್ಯಾನ್ಸ್​
Image
Justin Bieber: ವೈರಸ್​ನಿಂದ ಜಸ್ಟಿನ್​ ಬೀಬರ್​ ಮುಖಕ್ಕೆ ಪಾರ್ಶ್ವವಾಯು; ಖ್ಯಾತ ಗಾಯಕನಿಗೆ ಕಾಡುತ್ತಿದೆ ಗಂಭೀರ ಸಮಸ್ಯೆ
Image
ಆಮಿರ್​ ಖಾನ್​ರನ್ನು ‘ಟೈಟಾನಿಕ್’​ ನಿರ್ದೇಶಕನಿಗೆ ಹೋಲಿಸಿದ ಹಾಲಿವುಡ್​ ದಿಗ್ಗಜ; ಇಲ್ಲಿದೆ ಅಚ್ಚರಿ ವಿಚಾರ
Image
Priyanka Chopra: ಪ್ರಿಯಾಂಕಾ ಚೋಪ್ರಾ ರಕ್ತಸಿಕ್ತ ಮುಖ ನೋಡಿ ಗಾಬರಿಯಾದ ಫ್ಯಾನ್ಸ್; ಗಾಯಗಳ ಬಗ್ಗೆ ನಟಿ ಹೇಳಿದ್ದೇನು?

ಟಾಮ್​ ಹ್ಯಾಂಕ್ಸ್​ ನಟನೆಯ ಹೊಸ ಸಿನಿಮಾ ‘ಎ ಮ್ಯಾನ್​ ಕಾಲ್ಡ್​ ಆಟ್ಟೋ’ ಜನವರಿ 13ರಂದು ಅಮೆರಿಕದ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲಿದೆ. ಈ ಸಿನಿಮಾಗೆ ಟಾಮ್​ ಹ್ಯಾಂಕ್ಸ್​ ನಿರ್ಮಾಪಕ ಕೂಡ ಹೌದು. ಅವರ ಕಿರಿಯ ಪುತ್ರ ಟ್ರೂಮನ್​ ಹ್ಯಾಂಕ್ಸ್​ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ನೆಪೋಟಿಸಂ ಟೀಕೆ ವ್ಯಕ್ತವಾಗಿದೆ. ಇದಕ್ಕೆ ಟಾಮ್​ ಹ್ಯಾಂಕ್ಸ್​ ಅವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ‘ಚಿತ್ರರಂಗದಲ್ಲಿ ನೆಪೋಟಿಸಂಗಿಂತಲೂ ಈ ಸಮಸ್ಯೆ ಬಹಳ ಅಪಾಯಕಾರಿ’; ಮುಕ್ತವಾಗಿ ಹೇಳಿಕೊಂಡ ನವಾಜುದ್ದೀನ್ ಸಿದ್ದಿಕಿ

‘ಇದು ನಮ್ಮ ಕುಟುಂಬದ ವ್ಯವಹಾರ. ಮೊದಲಿನಿಂದಲೂ ನಾವು ಇದನ್ನೇ ಮಾಡಿಕೊಂಡು ಬಂದಿದ್ದೇವೆ. ಇದರಲ್ಲೇ ನನ್ನೆಲ್ಲ ಮಕ್ಕಳು ದೊಡ್ಡವರಾಗಿದ್ದು. ನಮ್ಮದು ಪ್ಲಂಬಿಂಗ್​ ಅಥವಾ ಹೂವಿನ ಬಿಸ್ನೆಸ್ ಆಗಿದ್ದರೆ ಅದರಲ್ಲೇ ನಮ್ಮ ಇಡೀ ಕುಟುಂಬ ತೊಡಗಿರುತ್ತಿತ್ತು’ ಎಂದು ಟಾಮ್​ ಹ್ಯಾಂಕ್ಸ್​ ಹೇಳಿದ್ದಾರೆ. ಸರ್​ ನೇಮ್​ ಯಾವುದು ಎಂಬುದು ಮುಖ್ಯ ಆಗುವುದಿಲ್ಲ. ಎಲ್ಲರೂ ಉತ್ತಮ ಕೆಲಸ ಮಾಡಲೇಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲೂ ಕರಣ್​ ಜೋಹರ್​ ನೆಪೋಟಿಸಮ್​; ಶಮಿತಾ ಶೆಟ್ಟಿಗೆ ಸಿಗುತ್ತಿದೆ ರಾಜ ಮರ್ಯಾದೆ

ಟಾಮ್​ ಹ್ಯಾಂಕ್ಸ್​ ಪತ್ನಿ ರಿಟಾ ವಿಲ್ಸನ್​ ಅವರು ‘ಎ ಮ್ಯಾನ್​ ಕಾಲ್ಡ್​ ಆಟ್ಟೋ’ ಚಿತ್ರದ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಟಾಮ್​ ಹಾಗೂ ರಿಟಾ ದಂಪತಿಯ ಮೊದಲ ಪುತ್ರ ಚೆಟ್​ ಹ್ಯಾಂಕ್ಸ್​ ಅವರು ನಟನಾಗಿ ಮತ್ತು ರ‍್ಯಾಪ್​ ಸಿಂಗರ್​ ಆಗಿ ಗುರುತಿಸಿಕೊಂಡಿದ್ದಾರೆ. ಟಾಮ್​ ಅವರ ಮೊದಲ ಪತ್ನಿಯ ಮಗ ಕೊಲಿನ್​ ಹ್ಯಾಂಕ್ಸ್​ ಕೂಡ ನಟನಾಗಿ ಜನಪ್ರಿಯತೆ ಪಡೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:46 pm, Fri, 6 January 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ