Nepotism: ಡಾಲಿ ಮೇಲೆ ನೆಪೋಟಿಸಂ ಆರೋಪ; ಪ್ರೇಮ್​ ಪುತ್ರಿಗೆ ಚಾನ್ಸ್​ ನೀಡಿದ್ದಕ್ಕೆ ನೆಟ್ಟಿಗರ ಟೀಕೆ

Amrutha Prem | Daali Dhananjay: ‘ಬಡವರ ಮಕ್ಕಳು ಬೆಳಿಬೇಕ್​ ಕಣ್ರಯ್ಯ’ ಎಂದು ಡಾಲಿ ಹೇಳಿದ್ದ ಮಾತು ಸಖತ್​ ವೈರಲ್​ ಆಗಿತ್ತು. ಆದರೆ ಈಗ ಅವರು ಸ್ಟಾರ್​ ನಟನ ಪುತ್ರಿಗೆ ಅವಕಾಶ ನೀಡಿದ್ದಕ್ಕೆ ಕೆಲವರಿಂದ ಟೀಕೆ ವ್ಯಕ್ತವಾಗುತ್ತಿದೆ.

Nepotism: ಡಾಲಿ ಮೇಲೆ ನೆಪೋಟಿಸಂ ಆರೋಪ; ಪ್ರೇಮ್​ ಪುತ್ರಿಗೆ ಚಾನ್ಸ್​ ನೀಡಿದ್ದಕ್ಕೆ ನೆಟ್ಟಿಗರ ಟೀಕೆ
ಅಮೃತಾ ಪ್ರೇಮ್, ಡಾಲಿ ಧನಂಜಯ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 06, 2022 | 9:54 AM

ಚಿತ್ರರಂಗದಲ್ಲಿ ನೆಪೋಟಿಸಂ (Nepotism) ಕುರಿತು ಪರ-ವಿರೋಧದ ಅಭಿಪ್ರಾಯ ಇದೆ. ಸ್ಟಾರ್​ ಕಲಾವಿದರ ಮಕ್ಕಳಿಗೆ ಸುಲಭವಾಗಿ ಅವಕಾಶ ಸಿಗುತ್ತದೆ ಎಂದು ಕೆಲವರು ತಕರಾರು ತೆಗೆಯುತ್ತಾರೆ. ಅವಕಾಶ ಸಿಕ್ಕ ಮಾತ್ರಕ್ಕೆ ಗೆಲುವು ಪಡೆಯುವುದು ಸುಲಭವಲ್ಲ ಎಂದು ಇನ್ನೂ ಕೆಲವರು ವಾದ ಮಾಡುತ್ತಾರೆ. ಒಟ್ಟಿನಲ್ಲಿ ನೆಪೋಟಿಸಂ ಕುರಿತು ಚರ್ಚೆಯಂತೂ ಜೋರಾಗಿದೆ. ಈಗ ಕನ್ನಡದ ಖ್ಯಾತ ನಟ ಡಾಲಿ ಧನಂಜಯ್​ (Daali Dhananjay) ಅವರ ಮೇಲೆ ನೆಪೋಟಿಸಂ ಆರೋಪ ಕೇಳಿಬಂದಿದೆ. ಫಿಲ್ಮಿ ಕುಟುಂಬದ ಯಾವುದೇ ಹಿನ್ನೆಲೆ ಇಲ್ಲದೇ ಬಣ್ಣದ ಲೋಕಕ್ಕೆ ಬಂದು ಹೆಸರು ಮಾಡಿದ ಧನಂಜಯ್​ ಅವರು ಅನೇಕರಿಗೆ ಸ್ಫೂರ್ತಿ. ಆದರೆ ಇಂದು ಅವರು ನೆಪೋಟಿಸಂ ಮಾಡುತ್ತಿದ್ದಾರೆ ಎಂದು ಕೆಲವು ನೆಟ್ಟಿಗರು ಆರೋಪ ಮಾಡುತ್ತಿದ್ದಾರೆ. ತಮ್ಮ ನಿರ್ಮಾಣದ ‘ಟಗರು ಪಲ್ಯ’ ಚಿತ್ರದಲ್ಲಿ ‘ನೆನಪಿರಲಿ’ ಪ್ರೇಮ್​ ಪುತ್ರಿ ಅಮೃತಾಗೆ (Amrutha Prem) ಡಾಲಿ ಧನಂಜಯ್​ ಅವಕಾಶ ನೀಡಿರುವುದೇ ಈ ಆರೋಪ ಎದುರಾಗಲು ಕಾರಣ ಆಗಿದೆ.

ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಧನಂಜಯ್​ ಸಕ್ರಿಯರಾಗಿದ್ದಾರೆ. ಅವರು ಈ ಹಂತಕ್ಕೆ ಬೆಳೆದಿರುವುದು ಸಾಧನೆಯೇ ಸರಿ. ಈ ವಿಚಾರದಲ್ಲಿ ಅಭಿಮಾನಿಗಳಿಗೆ ಹೆಮ್ಮೆ ಇದೆ. ಅವರ ‘ಡಾಲಿ ಪಿಕ್ಚರ್ಸ್​’ ಬ್ಯಾನರ್​ ಮೂಲಕ ‘ಟಗರು ಪಲ್ಯ’ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ನಾಯಕಿಯಾಗಿ ‘ಲವ್ಲಿ ಸ್ಟಾರ್​’ ಪ್ರೇಮ್​ ಪುತ್ರಿ ಅಮೃತಾ ಆಯ್ಕೆ ಆಗಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಕಮೆಂಟ್​ ಮಾಡಿರುವ ಅನೇಕರು ನೆಪೋಟಿಸಂ ವಿಚಾರ ಎತ್ತಿದ್ದಾರೆ.

ಧನಂಜಯ್​ ನಟನೆಯ ‘ಹೆಡ್​ ಬುಷ್​’ ಸಿನಿಮಾ ಇತ್ತೀಚೆಗೆ ಒಂದಷ್ಟು ವಿವಾದ ಮಾಡಿಕೊಂಡಿತ್ತು. ‘ಬಡವರ ಮಕ್ಕಳು ಬೆಳಿಬೇಕ್​ ಕಣ್ರಯ್ಯ’ ಎಂದು ಡಾಲಿ ಹೇಳಿದ್ದ ಮಾತು ಸಖತ್​ ವೈರಲ್​ ಆಗಿತ್ತು. ಆದರೆ ಈಗ ಬಡವರ ಮಕ್ಕಳ ಬದಲಿಗೆ ಸ್ಟಾರ್​ ನಟನ ಪುತ್ರಿಗೆ ಅವರು ಅವಕಾಶ ನೀಡಿದ್ದಾರೆ ಎಂದು ಕೆಲವು ಮಂದಿ ಟೀಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ
Image
Nenapirali Prem: ‘ನಾನು ಟ್ರೆಂಡ್​ನಲ್ಲಿ ಇರುವಾಗ ಮಗಳು ಹೀರೋಯಿನ್​ ಆಗಿದ್ದು ಖುಷಿ ನೀಡಿದೆ’: ‘ನೆನಪಿರಲಿ’ ಪ್ರೇಮ್​
Image
Amrutha Prem: ಚಿತ್ರರಂಗಕ್ಕೆ ‘ನೆನಪಿರಲಿ’ ಪ್ರೇಮ್​ ಪುತ್ರಿ ಎಂಟ್ರಿ; ಡಾಲಿ ನಿರ್ಮಾಣದ ಸಿನಿಮಾದಲ್ಲಿ ಅಮೃತಾ ನಟನೆ
Image
Uttarakaanda: ರಮ್ಯಾ-ಡಾಲಿ ಧನಂಜಯ್​ ಜೋಡಿಯ ‘ಉತ್ತರಕಾಂಡ’ ಚಿತ್ರಕ್ಕೆ ಪೂಜೆ; ಇಲ್ಲಿವೆ ಮಸ್ತ್​ ಫೋಟೋಗಳು
Image
Ramya: ರಮ್ಯಾ ಕಂಬ್ಯಾಕ್​ ಸಿನಿಮಾ ‘ಉತ್ತರಕಾಂಡ’; ಡಾಲಿ ಜೊತೆ ಸ್ಯಾಂಡಲ್​ವುಡ್​ ಕ್ವೀನ್​ ನಟನೆ

ಇದನ್ನೂ ಓದಿ: Nenapirali Prem: ‘ನಾನು ಟ್ರೆಂಡ್​ನಲ್ಲಿ ಇರುವಾಗ ಮಗಳು ಹೀರೋಯಿನ್​ ಆಗಿದ್ದು ಖುಷಿ ನೀಡಿದೆ’: ‘ನೆನಪಿರಲಿ’ ಪ್ರೇಮ್​

ಏಕಾಏಕಿ ನೆಪೋಟಿಸಂ ಆರೋಪ ಮಾಡುತ್ತಿರುವವರು ಎಲ್ಲ ಆಯಾಮದಿಂದಲೂ ಆಲೋಚನೆ ಮಾಡುತ್ತಿಲ್ಲ. ‘ಟಗರು ಪಲ್ಯ’ ಚಿತ್ರದಲ್ಲಿ ಧನಂಜಯ್ ಅವರು ಅವಕಾಶ ನೀಡಿರುವುದು ಅಮೃತಾ ಪ್ರೇಮ್​ಗೆ ಮಾತ್ರವಲ್ಲ. ಅನೇಕರಿಗೆ ಈ ಚಿತ್ರದಿಂದ ಚಾನ್ಸ್​ ಸಿಕ್ಕಿದೆ. ಹೀರೋ ಆಗಿ ನಾಗಭೂಷಣ್​ ನಟಿಸುತ್ತಿದ್ದಾರೆ. ನಿರ್ದೇಶಕ ಉಮೇಶ್​ ಕೆ. ಕೃಪ ಕೂಡ ಯಾವುದೇ ಫಿಲ್ಮಿ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ಅವರಿಗೆ ಧನಂಜಯ್​ ಚಾನ್ಸ್​ ನೀಡಿದ್ದಾರೆ. ಈ ವಿಚಾರದಲ್ಲಿ ಅವರಿಗೆ ಫ್ಯಾನ್ಸ್​ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: Ramya: ರಮ್ಯಾ ಕಂಬ್ಯಾಕ್​ ಸಿನಿಮಾ ‘ಉತ್ತರಕಾಂಡ’; ಡಾಲಿ ಜೊತೆ ಸ್ಯಾಂಡಲ್​ವುಡ್​ ಕ್ವೀನ್​ ನಟನೆ

ನಟನೆಯಲ್ಲಿ ಡಾಲಿ ಧನಂಜಯ್​ ಬ್ಯುಸಿ ಆಗಿದ್ದಾರೆ. ‘ಉತ್ತರಕಾಂಡ’ ಸಿನಿಮಾದಲ್ಲಿ ಅವರು ನಟಿ ರಮ್ಯಾ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅವರು ನಟಿಸಿರುವ ‘ಒನ್ಸ್​ ಅಪಾನ್​ ಎ ಟೈಮ್​ ಇನ್ ಜಮಾಲಿ ಗುಡ್ಡ’ ಸಿನಿಮಾದ ಟೀಸರ್​ ಗಮನ ಸೆಳೆಯುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್