Amrutha Prem: ಚಿತ್ರರಂಗಕ್ಕೆ ‘ನೆನಪಿರಲಿ’ ಪ್ರೇಮ್​ ಪುತ್ರಿ ಎಂಟ್ರಿ; ಡಾಲಿ ನಿರ್ಮಾಣದ ಸಿನಿಮಾದಲ್ಲಿ ಅಮೃತಾ ನಟನೆ

Nenapirali Prem | Amrutha Prem: ‘ಲವ್ಲಿ ಸ್ಟಾರ್​’ ಪ್ರೇಮ್​ ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ಅವರ ಮಗಳು ಅಮೃತಾ ಪ್ರೇಮ್​ ಕೂಡ ಚಂದನವನದ ಹಾದಿ ಹಿಡಿದಿದ್ದಾರೆ.

Amrutha Prem: ಚಿತ್ರರಂಗಕ್ಕೆ ‘ನೆನಪಿರಲಿ’ ಪ್ರೇಮ್​ ಪುತ್ರಿ ಎಂಟ್ರಿ; ಡಾಲಿ ನಿರ್ಮಾಣದ ಸಿನಿಮಾದಲ್ಲಿ ಅಮೃತಾ ನಟನೆ
ಅಮೃತಾ - ಪ್ರೇಮ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 28, 2022 | 12:01 PM

ಸಿನಿಮಾ ಸೆಲೆಬ್ರಿಟಿಗಳ ಮಕ್ಕಳು ಬಣ್ಣದ ಲೋಕಕ್ಕೆ ಕಾಲಿಡುವುದು ಸಹಜ. ಕನ್ನಡ ಚಿತ್ರರಂಗದ ನಟ-ನಟಿಯರು ಮಕ್ಕಳು ಕೂಡ ಒಬ್ಬೊಬ್ಬರಾಗಿಯೇ ಬಣ್ಣದ ಬದುಕು ಆರಂಭಿಸುತ್ತಿದ್ದಾರೆ. ಕೆಲವೇ ತಿಂಗಳ ಹಿಂದೆ ನಟಿ ಮಾಲಾಶ್ರೀ ಅವರ ಮಗಳು ಚೊಚ್ಚಲ ಸಿನಿಮಾ ಒಪ್ಪಿಕೊಂಡಿದ್ದರ ಬಗ್ಗೆ ಸುದ್ದಿ ಆಗಿತ್ತು. ಈಗ ‘ನೆನಪಿರಲಿ’ ಪ್ರೇಮ್​ (Nenapirali Prem) ಅವರ ಮಗಳು ಅಮೃತಾ ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಮೊದಲು ಅನೇಕ ಫೋಟೋಶೂಟ್​ ಮೂಲಕ ಅಮೃತಾ ಪ್ರೇಮ್​ (Amrutha Prem) ಗಮನ ಸೆಳೆದಿದ್ದರು. ಈಗ ಅವರು ದೊಡ್ಡ ಪರದೆಯಲ್ಲಿ ಮಿಂಚಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರಿಗೆ ಸ್ಯಾಂಡಲ್​ವುಡ್​ ತಾರೆಯರು ಮತ್ತು ಸಿನಿಪ್ರಿಯರು ಸ್ವಾಗತ ಕೋರುತ್ತಿದ್ದಾರೆ. ಅಂದಹಾಗೆ, ಅಮೃತಾ ಪ್ರೇಮ್​ ನಟಿಸುತ್ತಿರುವುದು ಡಾಲಿ ಧನಂಜಯ್​ ನಿರ್ಮಾಣದ ‘ಟಗರು ಪಲ್ಯ’ (Tagaru Palya) ಸಿನಿಮಾದಲ್ಲಿ ಎಂಬುದು ವಿಶೇಷ.

ನಟ ನಾಗಭೂಷಣ್​ ಅವರು ‘ಟಗರು ಪಲ್ಯ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಡಾಲಿ ಧನಂಜಯ್​ ಬಂಡವಾಳ ಹೂಡುತ್ತಿರುವ ಈ ಚಿತ್ರಕ್ಕೆ ಉಮೇಶ್​ ಕೆ. ಕೃಪ ನಿರ್ದೇಶನ ಮಾಡುತ್ತಿದ್ದಾರೆ. ಅಮೃತಾ ಪ್ರೇಮ್​ ಅವರ ಹೊಸ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಲಾಗಿದೆ. ಈ ಪೋಸ್ಟರ್​ನಲ್ಲಿ ಹಳ್ಳಿ ಹುಡುಗಿಯ ಗೆಟಪ್​ನಲ್ಲಿ ಅಮೃತಾ ಪ್ರೇಮ್​ ಕಾಣಿಸಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ‘ನೆನಪಿರಲಿ’ ಪ್ರೇಮ್​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ಅವರ ಮಕ್ಕಳು ಚಂದನವನದ ಹಾದಿ ಹಿಡಿದಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಗುರು ಶಿಷ್ಯರು’ ಸಿನಿಮಾದಲ್ಲಿ ಪ್ರೇಮ್​ ಪುತ್ರ ಏಕಾಂತ್​ ನಟಿಸಿದ್ದರು. ಈಗ ಅಮೃತಾ ಪ್ರೇಮ್​ ಸರದಿ. ‘ಟಗರು ಪಲ್ಯ’ ಚಿತ್ರದಲ್ಲಿ ಅವರ ಪಾತ್ರ ಹೇಗೆ ಮೂಡಿಬರಲಿದೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.

ಇದನ್ನೂ ಓದಿ
Image
ಜನ್ಮದಿನದಂದು ‘ಡಾಲಿ’ ಧನಂಜಯ್ ಹೊಸ ಘೋಷಣೆ; ಹೊಸ ಪ್ರತಿಭೆಗಳಿಗೆ ಸಿಗಲಿದೆ ಅವಕಾಶ
Image
Rachita Ram: ಡಾಲಿ ಧನಂಜಯ್​ ಅಣ್ಣನ ಮಗಳಿಗೆ ರಚಿತಾ ಹೆಸರು; ಆ ಘಟನೆ ನೆನೆದ ‘ಡಿಂಪಲ್​ ಕ್ವೀನ್​’
Image
ಡಾಲಿ ಧನಂಜಯ್​-ಅಮೃತಾ ಅಯ್ಯಂಗಾರ್​ ನಡುವೆ ಏನು ನಡೆಯುತ್ತಿದೆ? ನೇರ ಉತ್ತರ ನೀಡಿದ ನಟಿ
Image
ಡಾಲಿ ಧನಂಜಯ್​ ಹೆಸರಲ್ಲಿ ವಂಚನೆ; ಅಪರಿಚಿತರ ಪೋಸ್ಟ್​ ನಂಬಿ ಮೋಸ ಹೋಗ್ಬೇಡಿ ಎಂದ ನಟ

ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಡಾಲಿ ಧನಂಜಯ್​ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರ ‘ಡಾಲಿ ಪಿಕ್ಚರ್ಸ್​’ ಬ್ಯಾನರ್​ ಮೂಲಕ ಡಿಫರೆಂಟ್​ ಸಿನಿಮಾಗಳು ಮೂಡಿಬರುತ್ತಿವೆ. ಒಳ್ಳೆಯ ತಂಡದ ಜೊತೆಗೆ ತಮ್ಮ ಮಗಳು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿರುವುದಕ್ಕೆ ಪ್ರೇಮ್​ ಅವರಿಗೆ ಖುಷಿ ಇದೆ. ನಟನೆ ಜೊತೆಗೆ ವಿದ್ಯಾಭ್ಯಾಸವನ್ನೂ ಅಮೃತಾ ಮುಂದುವರಿಸಲಿದ್ದಾರೆ. ಈ ಚಿತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಪಾತ್ರದ ಸಲುವಾಗಿ ವರ್ಕ್​ಶಾಪ್​ನಲ್ಲಿ ಭಾಗಿ ಆಗಿದ್ದಾರೆ.

ಶೀಘ್ರದಲ್ಲೇ ‘ಟಗರು ಪಲ್ಯ’ ಸಿನಿಮಾದ ಶೂಟಿಂಗ್​ ಆರಂಭ ಆಗಲಿದೆ. ಹಳ್ಳಿ ಪರಿಸರದಲ್ಲಿ ಚಿತ್ರದ ಕಥೆ ಸಾಗಲಿದೆ. ತಾರಾ ಅನುರಾಧಾ, ರಂಗಾಯಣ ರಘು ಮುಂತಾದ ಅನುಭವಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ